ಮಡಿಕೇರಿ, ಜು. ೧೫: ಪುತ್ತೂರಿನ ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ನಡೆದ ರಾಜ್ಯಮಟ್ಟದ ಕಾವ್ಯ ಮತ್ತು ಸಾಂಸ್ಕöÈತಿಕ ಸಂಭ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೊಡಗು ಜಿಲ್ಲೆಯ ಸಾಹಿತಿ ಹಾಗೂ ಚಲನಚಿತ್ರ ನಿರ್ಮಾಪಕಿ ಈರಮಂಡ ಹರಿಣಿ ವಿಜಯ್ ಪಾಲ್ಗೊಂಡು ‘ಉಸಿರಾಗಲಿ ಕನ್ನಡ’ ಎಂಬ ಕವನ ವಾಚಿಸಿದÀರು.
ಬೆಂಗಳೂರಿನ ಚಾಮರಾಜಪೇಟೆ ರಸ್ತೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆದ ಕಾರ್ಯ ಕ್ರಮವನ್ನು ಎಂಪವರ್ಡ್ ಮೈಂಡ್ಸ್ ಎಂಡ್ ಸೆಲ್ಯೂಷನ್ಸ್ ಸಂಸ್ಥಾಪಕ ಅಧ್ಯಕ್ಷರಾದ ಡಾ.ಲತಾ ಮೂರ್ತಿ ಉದ್ಘಾಟಿಸಿದರು.
ಕವಿಗಳು ಮತ್ತು ಚಿಂತಕರಾದ ಹೆಚ್.ಬಿ. ಯೂಸಫ್ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದರೆ, ತುಮಕೂರು ಮಾತೃಭೂಮಿ ಸೇವಾ ಟ್ರಸ್ಟ್ ಸಂಸ್ಥಾಪಕ ಜ್ಯೋತಿ ಶ್ರೀನಿವಾಸ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮೈಸೂರು ಸಮಾಜ ವಿಜ್ಞಾನ ವಿಭಾಗದ ಮುಖ್ಯಸ್ಥ ಎನ್. ಕವಿಗಳು ಮತ್ತು ಚಿಂತಕರಾದ ಹೆಚ್.ಬಿ. ಯೂಸಫ್ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದರೆ, ತುಮಕೂರು ಮಾತೃಭೂಮಿ ಸೇವಾ ಟ್ರಸ್ಟ್ ಸಂಸ್ಥಾಪಕ ಜ್ಯೋತಿ ಶ್ರೀನಿವಾಸ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮೈಸೂರು ಸಮಾಜ ವಿಜ್ಞಾನ ವಿಭಾಗದ ಮುಖ್ಯಸ್ಥ ಎನ್. ಮೊಹಮ್ಮದ್ ಹುಮಾಯೂನ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಖಿದ್ಮಾ ಫೌಂಡೇಶನ್ ರಾಜ್ಯಾಧ್ಯಕ್ಷ ಹಾಶಿಂ ಬನ್ನೂರು, ಸಂಚಾಲಕ ಆಮಿರ್ ಬನ್ನೂರು ಮತ್ತಿತರರು ಹಾಜರಿದ್ದರು.
ಹರಿಣಿ ವಿಜಯ್ ಅವರನ್ನು ಖಿದ್ಮಾ ಫೌಂಡೇಶನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.