ಕುಶಾಲನಗರ, ಜು. ೧೫: ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿ ನಾಶ ಮತ್ತು ಪಕ್ಷಿ ಪ್ರಾಣಿಗಳ ಅವನತಿಗೆ ಕಾರಣರಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ, ಪ್ರಕೃತಿ - ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಗಣ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಕುಶಾಲನಗರ ಕೈಗಾರಿ ಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿದೋದ್ದೇಶ ಸಹಕಾರ ಸಂಘದ ಆಶ್ರಯದಲ್ಲಿ ಸ್ಥಳೀಯ ವಿವೇಕಾನಂದ ಕಾಲೇಜು ಸಭಾಂಗಣದಲ್ಲಿ ನಡೆದ ವನಸಿರಿ ಗಿಡ ನೆಟ್ಟು ನಿರ್ವಹಿಸಿ ಬೆಳೆಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂಥರ್ ಗೌಡ ಮಾತನಾಡಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಹಸ್ತಾಂತರ ಆಗಬೇಕಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಅರಣ್ಯ ಕಾಡುಪ್ರಾಣಿಗಳ ನಾಶ ಮೂಲಕ ಆತಂಕಕಾರಿ ಬೆಳವಣಿಗೆಗಳು ನಡೆಯುತ್ತಿದ್ದು ಪ್ರಕೃತಿ ಉಳಿಸಲು ಇತರರಿಗೆ ಸಲಹೆ ನೀಡುವ ಬದಲು ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕಾಗಿದೆ ಎಂದು ಕಿವಿಮಾತು ಹೇಳಿದರು. ಮಡಿಕೇರಿ ಸ್ಟೋನ್ ಹಿಲ್ ಬಳಿ ತ್ಯಾಜ್ಯ ವಿಲೇವಾರಿಗೆ ಈಗಾಗಲೇ ೬೭ ಲಕ್ಷ ರೂ.ಗಳ ಟೆಂಡರ್ ಆಗಿದೆ ಎಂದು ಶಾಸಕರು ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶಕ್ತಿ ಸಂಪಾದಕರಾದ ಜಿ. ಚಿದ್ವಿಲಾಸ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಸರಕಾರದ ದ್ವಂದ್ವ ನಿಲುವು ಪರಿಸರದ ಹಾನಿಗೆ ಬಹುತೇಕ ಕಾರಣವಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಬಗ್ಗೆ ಸರ್ಕಾರದ ನಿಯಮಗಳು ಆಗಾಗ್ಗೆ ಬದಲಾಗುತ್ತಿದೆ. ಇದರ ಬಗ್ಗೆ ಸರಕಾರ ಗಮನ ಹರಿಸ ಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

(ಮೊದಲ ಪುಟದಿಂದ) ಕೊಡಗು ಜಿಲ್ಲೆಯಲ್ಲಿ ತೋಟ ಮಾಲೀಕರಿಂದ ಪ್ರಕೃತಿಯ ಉಳಿವು ಸಂರಕ್ಷಣೆ ಆಗುತ್ತಿರುವುದಾಗಿ ಹೇಳಿದ ಅವರು, ಪ್ಲಾಸ್ಟಿಕ್ ಮೂಲಕ ಪರಿಸರ ಬಹುತೇಕ ಹಾನಿಗೊಳಗಾಗುತ್ತಿದ್ದು ಪರ್ಯಾಯ ವ್ಯವಸ್ಥೆಯೊಂದಿಗೆ ಪ್ಲಾಸ್ಟಿಕ್ ಬಳಕೆಗೆ ನಿರ್ಬಂಧ ಹೇರಬೇಕಾಗಿದೆ. ಕೊಡಗು ಜಿಲ್ಲೆಯಲ್ಲಿ ಕಸವಿಲೇವಾರಿ ತ್ಯಾಜ್ಯ ವಿಲೇವಾರಿ ಇನ್ನು ಸಫಲತೆ ಕಂಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಅವರು ಸರ್ಕಾರದ ನಿಯಮಗಳ ಬಗ್ಗೆ ಮರುಪರಿಶೀಲನೆ ನಡೆಸಬೇಕಾಗಿದೆ ಎಂದು ಸಭೆಯಲ್ಲಿದ್ದ ಶಾಸಕರಿಗೆ ಮನವಿ ಮಾಡಿದರು. ಈ ಸಂದರ್ಭ ಮಾತನಾಡಿದ ಅವರು ಕುಶಾಲನಗರ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘದ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ ಭೂಮಿಯನ್ನು ಸಂರಕ್ಷಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕಾಗಿದೆ. ಪ್ರಕೃತಿ ನಾಶ ಹಾಗೂ ಪ್ರಾಣಿಗಳ ನಾಶಕ್ಕೆ ಕೆಲವರು ಪರೋಕ್ಷವಾಗಿ ಬೆಂಬಲ ನೀಡುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಕೆಲವೆಡೆ ಗಿಡ ನೆಡುವ ಕಾರ್ಯಕ್ರಮಕ್ಕೂ ಅಡ್ಡಿ ಉಂಟು ಮಾಡುತ್ತಿದ್ದಾರೆ ಎಂದರು. ಪ್ರಕೃತಿಯ ಆರಾಧನೆ ನಿರಂತರವಾಗಿರಬೇಕು ಅರಣ್ಯ ಬೆಳೆಸಿ ಉಳಿಸುವ ಕೆಲಸ ಆಗಬೇಕಿದೆ ಈ ನಿಟ್ಟಿನಲ್ಲಿ ಇಲಾಖೆ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಮಾತನಾಡಿ ಗಿಡ ನೆಡುವಷ್ಟೇ ಆಸಕ್ತಿ ನಿರ್ವಹಣೆ ಮಾಡುವ ಸಂದರ್ಭದಲ್ಲಿ ಇರಬೇಕು.

ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಪರಿಸರದ ಬಗ್ಗೆ ಅರಿವು ಜಾಗೃತಿ ಮೂಡಿಸುವ ಶಿಬಿರಗಳು ನಡೆಯಬೇಕು ಎಂದರು.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ವಿ.ಪಿ. ಶಶಿಧರ್ ಮಾತನಾಡಿ ಇತ್ತೀಚಿನ ಪ್ರಕೃತಿ ದುರಂತಗಳಿಗೆ ಮಾನವನ ಸ್ವಯಂ ಕೃತ್ಯಗಳೆ ಕಾರಣವಾಗಿದೆ. ನದಿ ದಂಡೆಯಲ್ಲಿ ಬೆಳೆದು ಬಂದ ನಾಗರಿಕತೆಯನ್ನು ಜನರು ಮರೆತುಬಿಟ್ಟಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಹಲವೆಡೆ ನದಿ, ಅರಣ್ಯ ಬದಿಯ ಪ್ರದೇಶಗಳನ್ನು ಒತ್ತುವರಿ ಮಾಡಿ ನಂತರ ಅಪಾಯ ತಂದುಕೊಳ್ಳುವುದು ಸರಿಯಲ್ಲ ಎಂದರು. ಪೂರ್ವಜರು ಪ್ರಕೃತಿ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸಿ, ದೈವತ್ವದ ಒತ್ತು ನೀಡಿದ್ದರೂ ಕೂಡಾ ವೈಜ್ಞಾನಿಕ ಕಾರಣಗಳು ಅವುಗಳಿಗೆ ಇತ್ತು ಎಂದು ವಿವರಣೆ ನೀಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿ ನಾಗರೀಕತೆ ಉಳಿಸಿ ಪ್ರಕೃತಿ ಬೆಳೆಸುವ ಬದ್ಧತೆ ಮೂಲಕ ಬದಲಾವಣೆ ಸಾಧ್ಯ ಎಂದರು.

ಸಹಕಾರ ಸಂಘದ ಅಧ್ಯಕ್ಷರಾದ ಟಿ ಆರ್ ಶರವಣಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ೧೯ ವರ್ಷಗಳಲ್ಲಿ ಬ್ಯಾಂಕ್ ಉತ್ತಮ ಲಾಭಾಂಶವನ್ನು ಗಳಿಸುತ್ತಿದ್ದು ಸಂಘದ ಸದಸ್ಯರ ಸಹಭಾಗಿತ್ವದೊಂದಿಗೆ ಸಾಮಾಜಿಕ ಜವಾಬ್ದಾರಿಯನ್ನು ಕೂಡ ನಿಭಾಯಿಸಲಾಗುತ್ತಿದೆ. ಸಂಘದ ಮೂಲಕ ೫೦೦ ಗಿಡಗಳನ್ನು ನೆಟ್ಟು ನಿರ್ವಹಣೆ ಮಾಡುವ ಮೂಲಕ ಬೆಳೆಸಲಾಗುವುದು ಎಂದು ತಿಳಿಸಿದರು ಈ ಯೋಜನೆಗೆ ಸುಮಾರು ೬.೫ ಲಕ್ಷ ರೂಗಳ ವೆಚ್ಚ ಮಾಡಲಾಗುತ್ತಿದೆ. ಸಂರಕ್ಷಣೆ ಬಗ್ಗೆ ಕಾಳಜಿ ವಹಿಸಿ, ದೈವತ್ವದ ಒತ್ತು ನೀಡಿದ್ದರೂ ಕೂಡಾ ವೈಜ್ಞಾನಿಕ ಕಾರಣಗಳು ಅವುಗಳಿಗೆ ಇತ್ತು ಎಂದು ವಿವರಣೆ ನೀಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿ ನಾಗರೀಕತೆ ಉಳಿಸಿ ಪ್ರಕೃತಿ ಬೆಳೆಸುವ ಬದ್ಧತೆ ಮೂಲಕ ಬದಲಾವಣೆ ಸಾಧ್ಯ ಎಂದರು.

ಸಹಕಾರ ಸಂಘದ ಅಧ್ಯಕ್ಷರಾದ ಟಿ ಆರ್ ಶರವಣಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ೧೯ ವರ್ಷಗಳಲ್ಲಿ ಬ್ಯಾಂಕ್ ಉತ್ತಮ ಲಾಭಾಂಶವನ್ನು ಗಳಿಸುತ್ತಿದ್ದು ಸಂಘದ ಸದಸ್ಯರ ಸಹಭಾಗಿತ್ವದೊಂದಿಗೆ ಸಾಮಾಜಿಕ ಜವಾಬ್ದಾರಿಯನ್ನು ಕೂಡ ನಿಭಾಯಿಸಲಾಗುತ್ತಿದೆ. ಸಂಘದ ಮೂಲಕ ೫೦೦ ಗಿಡಗಳನ್ನು ನೆಟ್ಟು ನಿರ್ವಹಣೆ ಮಾಡುವ ಮೂಲಕ ಬೆಳೆಸಲಾಗುವುದು ಎಂದು ತಿಳಿಸಿದರು ಈ ಯೋಜನೆಗೆ ಸುಮಾರು ೬.೫ ಲಕ್ಷ ರೂಗಳ ವೆಚ್ಚ ಮಾಡಲಾಗುತ್ತಿದೆ.