ಮಡಿಕೇರಿ, ಜು. ೧೪: ಜಾಗದ ಸರ್ವೆ ವಿಚಾರದಲ್ಲಿ ತಕರಾರು ಏರ್ಪಟ್ಟು ತಮ್ಮಂದಿರಿಬ್ಬರು ಅಣ್ಣನನ್ನು ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಎಂ.ಚೆAಬು ಗ್ರಾಮದ ಸಮೀಪದ ಕುದುರೆಪಾಯದಲ್ಲಿ ನಡೆದಿದೆ.

ಪುತ್ತೂರಿನ ಸಂಪ್ಯ ಗ್ರಾಮದ ನಿವಾಸಿ ಉಸ್ಮಾನ್ (೬೩) ಹತ್ಯೆಯಾದ ವ್ಯಕ್ತಿ. ಇವರ ತಮ್ಮಂದಿರಾದ ಸುಳ್ಯದ ಮಹಮ್ಮದ್ ರಫೀಕ್ (೫೫), ಅಬ್ದುಲ್ ಖಾದರ್ (೫೩) ಕೊಲೆ ಮಾಡಿ ಪರಾರಿಯಾಗಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ತಾ. ೧೪ ರ ಬೆಳಿಗ್ಗೆ ೧೧ ಗಂಟೆ ಸುಮಾರಿಗೆ ಕುದುರೆಪಾಯದಲ್ಲಿರುವ ೧ ಎಕರೆ ೧೦ ಸೆಂಟ್ ಜಾಗವನ್ನು ಖಾಸಗಿ ಸಂಸ್ಥೆ ಮೂಲಕ ಸರ್ವೆ ನಡೆಸಲಾಗಿದೆ. ಆಸ್ತಿ ಪಾಲು ವಿಚಾರದಲ್ಲಿ ಸಹೋದರರ ನಡುವೆ ರಸ್ತೆಬದಿಯಲ್ಲಿ ವಾಗ್ವಾದ ಉಂಟಾಗಿದೆ. ಮಡಿಕೇರಿ, ಜು. ೧೪: ಜಾಗದ ಸರ್ವೆ ವಿಚಾರದಲ್ಲಿ ತಕರಾರು ಏರ್ಪಟ್ಟು ತಮ್ಮಂದಿರಿಬ್ಬರು ಅಣ್ಣನನ್ನು ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಎಂ.ಚೆAಬು ಗ್ರಾಮದ ಸಮೀಪದ ಕುದುರೆಪಾಯದಲ್ಲಿ ನಡೆದಿದೆ.

ಪುತ್ತೂರಿನ ಸಂಪ್ಯ ಗ್ರಾಮದ ನಿವಾಸಿ ಉಸ್ಮಾನ್ (೬೩) ಹತ್ಯೆಯಾದ ವ್ಯಕ್ತಿ. ಇವರ ತಮ್ಮಂದಿರಾದ ಸುಳ್ಯದ ಮಹಮ್ಮದ್ ರಫೀಕ್ (೫೫), ಅಬ್ದುಲ್ ಖಾದರ್ (೫೩) ಕೊಲೆ ಮಾಡಿ ಪರಾರಿಯಾಗಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ತಾ. ೧೪ ರ ಬೆಳಿಗ್ಗೆ ೧೧ ಗಂಟೆ ಸುಮಾರಿಗೆ ಕುದುರೆಪಾಯದಲ್ಲಿರುವ ೧ ಎಕರೆ ೧೦ ಸೆಂಟ್ ಜಾಗವನ್ನು ಖಾಸಗಿ ಸಂಸ್ಥೆ ಮೂಲಕ ಸರ್ವೆ ನಡೆಸಲಾಗಿದೆ. ಆಸ್ತಿ ಪಾಲು ವಿಚಾರದಲ್ಲಿ ಸಹೋದರರ ನಡುವೆ ರಸ್ತೆಬದಿಯಲ್ಲಿ ವಾಗ್ವಾದ ಉಂಟಾಗಿದೆ. ಜಾಗವನ್ನು ಅಧಿಕೃತ ವಾಗಿ ದಾಖಲಾತಿ ಮಾಡದೆ ಮೌಖಿಕವಾಗಿ ತಮ್ಮ ೧೦ ಮಕ್ಕಳಿಗೆ ಹಂಚಿಕೆ ಮಾಡಿದ್ದಾರೆ. ಈ ಜಾಗದ ಪೈಕಿ ೧ ಎಕರೆ ೧೦ ಸೆಂಟ್ ಜಾಗ ಮಾರಾಟ ಮಾಡಲಾಗಿ ರುವುದು ವಿವಾದಕ್ಕೆ ಕಾರಣವಾಗಿತ್ತು. ಇದೇ ಉದ್ದೇಶದಿಂದ ಸರ್ವೆಗೆ ಉಸ್ಮಾನ್ ಮುಂದಾಗಿದ್ದರು. ಜಾಗ ಪಾಲು ವಿಚಾರದಲ್ಲಿ ಸಹೋದರರ ನಡುವೆ ಈ ಮೊದಲೇ ಕಲಹ ಇತ್ತು ಎಂದು ಹೇಳಲಾಗಿದೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್‌ರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೃತ ದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.