ಮಡಿಕೇರಿ, ಜು. ೧೪: ಮಡಿಕೇರಿ ರೋಟರಿ ವುಡ್ಸ್ನ ೨೦೨೩-೨೪ನೇ ಸಾಲಿನ ನೂತನ ಅಧ್ಯಕ್ಷರಾಗಿ ವಸಂತ್ ಕುಮಾರ್ ಅಧಿಕಾರ ವಹಿಸಿಕೊಂಡಿದ್ದಾರೆ. ಕಾರ್ಯದರ್ಶಿಯಾಗಿ ಕೆ.ಜಿ. ಹರೀಶ್ ಕಾರ್ಯ ನಿರ್ವಹಿಸಲಿದ್ದಾರೆ. ಮಡಿಕೇರಿ ರೋಟರಿ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರು ಅಧಿಕಾರ ವಹಿಸಿಕೊಂಡರು.
ಎA.ಪಿ.ಹೆಚ್.ಎಫ್. ಸತೀಶ್ ಬೊಳಾರ್ ಅವರು ಪದಗ್ರಹಣವನ್ನು ನೆರವೇರಿಸಿದರು. ನಿರ್ಗಮಿತ ಅಧ್ಯಕ್ಷ ಸಂಪತ್ ಕುಮಾರ್ ಅವರು ಮಾತನಾಡಿ, ರೋಟರಿ ವುಡ್ಸ್ನ ಕಳೆದ ಸಾಲಿನ ಸಾಧನೆಯನ್ನು ವಿವರಿಸಿ, ಎಲ್ಲಾ ಸದಸ್ಯರ ಸಹಕಾರದಿಂದ ಉತ್ತಮ ಸಾಧನೆ ತೋರಲು ಸಾಧ್ಯವಾಯಿತು ಎಂದರು.
ಮುಂದಿನ ಸಾಲಿನ ಯೋಜನೆಗಳ ಬಗ್ಗೆ ನೂತನ ಅಧ್ಯಕ್ಷರು ಮತನಾಡಿ, ಅಂಗನವಾಡಿಗೆ ಸೌಲಭ್ಯಗಳನ್ನು ನೀಡುವುದು ಮತ್ತು ಮಳೆ ನೀರಿನ ಸಂರಕ್ಷಣೆಗೆ ಕ್ರಮ, ಮಾನಸಿಕವಾಗಿ ನೊಂದವರಿಗೆ ಸಹಾಯ ಮಾಡುವುದು ನಮ್ಮ ಗುರಿಯಾಗಿದೆ ಎಂದರು.
ಸಹಾಯಕ ಗವರ್ನರ್ ತಿಲಕ್ ಪೊನ್ನಪ್ಪ, ವಲಯ ಸೇನಾನಿ ಸಂಪತ್ ಕುಮಾರ್, ಮಾಜಿ ಗವರ್ನರ್ಗಳಾದ ಡಾ. ರವಿ ಅಪ್ಪಾಜಿ, ಸುರೇಶ್ ಚಂಗಪ್ಪ, ರೋಟರಿ ಮಾಜಿ ಉಪರಾಜ್ಯಪಾಲರಾದ ರತನ್ ತಮ್ಮಯ್ಯ, ಇನ್ನರ್ ವೀಲ್ ಜಿಲ್ಲಾ ಅಧ್ಯಕ್ಷೆ ಪೂರ್ಣಿಮಾ ರವಿ ಹಾಜರಿದ್ದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ರೈ, ಕಾರ್ಯದರ್ಶಿ ರತ್ನಾಕರ ರೈ, ರೋಟರಿ ಮಡಿಕೇರಿ ಅಧ್ಯಕ್ಷೆ ಗೀತಾ ಗಿರೀಶ್, ಕಾರ್ಯದರ್ಶಿ ಶರತ್, ಮಾಜಿ ಎ.ಜಿ. ಎಚ್.ಟಿ. ಅನಿಲ್, ಮೋಹನ್ ಪ್ರಭು, ರೋಟರಿ ಮಿಸ್ಟಿ ಹಿಲ್ಸ್ನ ಸ್ಥಾಪಕಾಧ್ಯಕ್ಷ ಬಿ.ಜಿ. ಅನಂತಶಯನ, ಮಿಸ್ಟಿ ಹಿಲ್ಸ್ ಮಾಜಿ ಅಧ್ಯಕ್ಷೆ, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಜಿಲ್ಲೆಯ ಮತ್ತು ಹೊರ ಜಿಲ್ಲೆಗಳಿಂದ ಬಂದ ರೋಟರಿ ಅಧ್ಯಕ್ಷರು ಮತ್ತು ಸದಸ್ಯರು ಈ ಸಮಾರಂಭದಲ್ಲಿ ಹಾಜರಿದ್ದರು. ಲಯನ್ಸ್ ಕ್ಲಬ್ನ ಸದಸ್ಯರು ಮತ್ತು ಹಲವಾರು ಗಣ್ಯರು ಭಾಗವಹಿಸಿದ್ದರು.
ಸಮಾರಂಭದ ಕೊನೆಯಲ್ಲಿ ಕಾರ್ಯದರ್ಶಿ ಹರೀಶ್ ಕಿಗ್ಗಾಲ್ ವಂದಿಸಿದರು.