ಸಿದ್ದಾಪುರ, ಜು. ೧೪: ಚೆಟ್ಟಳ್ಳಿ ನಿವಾಸಿಯೋರ್ವರ ಪುತ್ರಿ ಹೊರ ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇಂದು ಬೆಳಿಗ್ಗೆ ವಿದ್ಯಾರ್ಥಿನಿಯ ಹೆಸರಿನಲ್ಲಿ ಪಾರ್ಸಲ್ ಬಂದಿರುವುದಾಗಿ ಅನಾಮಧೇಯ ವ್ಯಕ್ತಿಯು ಕರೆ ಮಾಡಿ ಪಡೆದುಕೊಳ್ಳುವಂತೆ ತಿಳಿಸಿದ್ದು, ಕೂಡಲೇ ವಿದ್ಯಾರ್ಥಿನಿಯು ತನ್ನ ತಾಯಿಗೆ ಕರೆ ಮಾಡಿ ವಿವರ ತಿಳಿಸಿದ್ದಾಳೆ. ತದ ನಂತರ ಮತ್ತೊಮ್ಮೆ ಅನಾಮಧೇಯ ಸಂಖ್ಯೆಯಿAದ ಕರೆ ಬಂದಿದ್ದು ಓಟಿಪಿ ಕೇಳುತ್ತಿದ್ದಾರೆ ಎಂದು ವಿದ್ಯಾರ್ಥಿನಿ ತಾಯಿಗೆ ತಿಳಿಸುತ್ತಾಳೆ.

ಯಾವುದೇ ಒಟಿಪಿ ಸಂಖ್ಯೆ ನೀಡದಂತೆ ತಾಯಿಯು ಸಲಹೆ ಮಾಡುತ್ತಾರೆ. ನಂತರ ತಾಯಿಯು ಚೆಟ್ಟಳ್ಳಿಗೆ ತೆರಳಿ ಪಾರ್ಸಲ್ ಸ್ವೀಕರಿಸಿದ್ದು ಅದರ ಮೇಲೆ ಸಿಂಡಿಕೇಟ್ ಬ್ಯಾಂಕ್ ಗುರುತು ಕಾಣಿಸಿದೆ. ಬ್ಯಾಂಕ್‌ನಿAದ ಬಂದಿರಬಹುದೆAದು ತನ್ನ ಮಗಳಿಗೆ ಕರೆ ಮಾಡಿ ಓಟಿಪಿ ನೀಡಬಹುದು; ಬ್ಯಾಂಕ್‌ನಿAದ ಬಂದ ಪಾರ್ಸಲ್ ಎಂದಿದ್ದಾರೆ. ಪಾರ್ಸಲ್ ತೆಗೆದು ನೋಡಿದರೆ ಕ್ಯೂಆರ್‌ಕೋಡ್ ಮತ್ತು ಇನ್ನಿತರ ಕಾಗದಗಳು ಕಂಡುಬAದಿದೆ. ಕೂಡಲೇ ಸಮೀಪದ ಬ್ಯಾಂಕ್‌ಗೆ ಮಾಹಿತಿ ನೀಡಿದ ಸಂದರ್ಭದಲ್ಲಿ ಈ ಪಾರ್ಸಲ್ ಗೂ ಬ್ಯಾಂಕಿಗೂ ಯಾವುದೇ ಸಂಬAಧ ಇಲ್ಲ ಎಂದು ಬ್ಯಾಂಕ್ ಮ್ಯಾನೇಜರ್ ತಿಳಿಸಿದ್ದಾರೆ. ಅಲ್ಲದೆ ಈ ರೀತಿ ಪಾರ್ಸಲ್‌ಗಳು ಸುಮಾರು ೩೦ ಕ್ಕೂ ಅಧಿಕ ಮಂದಿಗೆ ಬಂದಿದೆ, ಇದು ಬ್ಯಾಂಕಿಗೆ ಸಂಬAಧವಿಲ್ಲ ಎಂದಿದ್ದಾರೆ. ಇತ್ತೀಚಿಗೆ ಬ್ಯಾಂಕ್ ಹೆಸರಿನಲ್ಲಿ ಗ್ರಾಹಕರು ಮೋಸ ಹೋಗುತ್ತಿದ್ದು ಎಚ್ಚರವಹಿಸಬೇಕೆಂದರು.

ಈ ಪ್ರಕರಣದಲ್ಲಿ ವಿದ್ಯಾರ್ಥಿನಿಯ ಪೋಷಕರ ಸಮಯೋಚಿತವಾದ ನಿರ್ಧಾರದಿಂದ ಯಾವುದೇ ಹಣ ಕಳೆದುಕೊಂಡಿಲ್ಲ. ಒಟ್ಟಿನಲ್ಲಿ ತಂತ್ರಜ್ಞಾನ ಮುಂದುವರಿಯುತ್ತಿದ್ದAತೆ ಮೋಸ ವಂಚನೆಗಳು ಅಧಿಕವಾಗುತ್ತಿದೆ. ಸಾರ್ವಜನಿಕರು ಸಾಮಾಜಿಕ ಜಾಲತಾಣದ ಬಳಕೆ ಸಂದರ್ಭದಲ್ಲಿ ಜಾಗೃತರಾಗಿರಬೇಕಾಗಿದೆ.