ಕೂಡಿಗೆ, ಜು. ೧೫: ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಆಟೋ ಪಲ್ಟಿ ಯಾಗಿ ವಿದ್ಯಾರ್ಥಿ ಗಳು ಗಂಭೀರವಾಗಿ ಗಾಯಗೊಂಡ ಘಟನೆ ತೊರೆನೂರಿನ ಅರಗಲ್‌ನಲ್ಲಿ ನಡೆದಿದೆ.

ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಲಿಂಗಪುರ, ಅಳವಾರ, ಅರಗಲ್ ಗ್ರಾಮ ವ್ಯಾಪ್ತಿಯ ೮ ವಿದ್ಯಾರ್ಥಿಗಳು ತೊರೆನೂರು ಪ್ರೌಢಶಾಲೆಯಲ್ಲಿ ತರಗತಿ ಮುಗಿಸಿ ಆಟೋದಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭ ಆಟೋ ಪಲ್ಟಿಯಾಗಿದೆ. ತೊರೆನೂರು ಪ್ರೌಢಶಾಲೆಗೆ ಅಳುವಾರ ಮತ್ತು ಅರಗಲ್‌ನ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಇಲ್ಲದ ಕಾರಣ ಅನೇಕ ಪೋಷಕರು ಆಟೋವನ್ನು ಅವಲಂಬಿಸಿ ಅದರ ಮೂಲಕ ಕಳುಹಿಸಿಕೊಡುತ್ತಾರೆ.

ಪ್ರೌಢಶಾಲೆಯ ೮ನೇ ತರಗತಿ ವಿದ್ಯಾರ್ಥಿಗಳನ್ನು ತರಗತಿ ಮುಗಿಸಿ ಕರೆದುಕೊಂಡು ಹೋಗುತ್ತಿದ್ದ ಸಂದರ್ಭ ಆಟೋ ಚಾಲಕನ ನಿಯಂತ್ರಣ ತಪ್ಪಿ ಬಾಣವಾರ ಭೈರಪ್ಪನ ಗುಡಿಯ ರಸ್ತೆಯ ಬದಿಗೆ ಬಿದ್ದ ಪರಿಣಾಮವಾಗಿ ೮ ವಿದ್ಯಾರ್ಥಿಗಳಿಗೆ ಪೆಟ್ಟಾಗಿದೆ.

ಆಟೋದಲ್ಲಿ ೮ನೇ ತರಗತಿಯ ೮ ವಿದ್ಯಾರ್ಥಿಗಳಿದ್ದು, ಅವರುಗಳಲ್ಲಿ ಮೂರು ವಿದ್ಯಾರ್ಥಿಗಳಿಗೆ ತೀವ್ರವಾದ ಪೆಟ್ಟಾಗಿದೆ, ಈ ಪೈಕಿ ಭುವನ್ ಹಾಗೂ ಭೂಮಿಕ ಎಂಬ ಇಬ್ಬರು ವಿದ್ಯಾರ್ಥಿಗಳನ್ನು ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

(ಮೊದಲ ಪುಟದಿಂದ) ಅಶ್ವಿನ್ ಎಂಬ ವಿದ್ಯಾರ್ಥಿಯನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪೂರ್ವಿಕ, ರಶ್ಮಿ, ಸುಜನ್, ವರಲಕ್ಷಿö್ಮ ಹಾಗೂ ದುಶ್ಯಂತ್ ಎಂಬ ವಿದ್ಯಾರ್ಥಿಗಳು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದಾರೆ. ಈ ಸಂಬAಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಸಕರ ಭೇಟಿ: ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಆಟೋ ಅವಘಡಗೊಂಡ ಸುದ್ದಿ ತಿಳಿದ ತಕ್ಷಣವೇ ಬೆಂಗಳೂರಿನಿAದ ಬರುವ ಸಂದರ್ಭದಲ್ಲಿ ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ ಶಾಲಾ ವಿದ್ಯಾರ್ಥಿಗಳನ್ನು ಮತ್ತು ಅವರ ಪೋಷಕರನ್ನು ಭೇಟಿ ಮಾಡಿ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಸೇರಿದಂತೆ ತೊರೆನೂರು ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಇದ್ದರು.