ಮಡಿಕೇರಿ, ಜು. ೧೩: ಮಡಿಕೇರಿ ತಾಲೂಕಿನ ಕೆ. ನಿಡುಗಣೆ ಗ್ರಾಮದಲ್ಲಿ ಸರ್ವೆ ನಂ. ೨೨/೧ರ ಸರಕಾರಿ ಗೋಮಾಳ ಜಾಗ ಹಾಗೂ ದೇವರ ಬನ ಜಾಗ ಒತ್ತುವರಿ ಆರೋಪಕ್ಕೆ ಸಂಬAಧಿಸಿದAತೆ ಕಂದಾಯ ಇಲಾಖೆ ಸರ್ವೆ ನಡೆಸಿ ಇದರ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಿದೆ ಎಂದು ರಾಜ್ಯ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ತಿಳಿಸಿದ್ದಾರೆ. ವಿಧಾನಪರಿಷತ್ನಲ್ಲಿ ಸದಸ್ಯ ಸುಜಾ ಕುಶಾಲಪ್ಪ ಅವರು ಶೂನ್ಯ ವೇಳೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಸಂದರ್ಭ ಸಚಿವರು ಉತ್ತರ ನೀಡಿದರು. ಸರ್ವೆ ನಂ. ೨೨/೧ರಲ್ಲಿ ಒಟ್ಟು ೨೪ ಎಕರೆ ಸರಕಾರಿ ಜಾಗವಿದ್ದು, ಇದರಲ್ಲಿ ೮ ಎಕರೆಯನ್ನು ಗೋಶಾಲೆಗೆ ನೀಡಲಾಗಿದೆ. ಉಳಿದ ೧೬ ಎಕರೆಯ ಗಡಿ ನಿಗದಿಯಾಗದಿರುವುದರಿಂದ ಸಮಸ್ಯೆಯಾಗಿದೆ. ಒಂದೋ ಉದ್ದೇಶಪೂರ್ವಕವಾಗಿ ಅಥವಾ ಅಚಾತುರ್ಯದಿಂದ ಒತ್ತುವರಿಯಾಗಿರಬಹುದಾಗಿದ್ದು, ಈಗಾಗಲೇ ಸರ್ವೆ ನಡೆಸಲಾಗಿದೆ. ಈ ಜಾಗವನ್ನು ಸಂರಕ್ಷಿಸಲು ಕ್ರಮಕೈಗೊಂಡು ದೇವರಬನಕ್ಕೆ ಮೀಸಲಿಡಲಾಗುವುದು ಮತ್ತು ಲೋಪವಾದಲ್ಲಿ ಸದಸ್ಯರು ಈ ಬಗ್ಗೆ ಗಮನ ಹರಿಸಿ ಸೂಕ್ತ ಮಾಹಿತಿ ಒದಗಿಸುವಂತೆ ಕೋರಿದ ಸಚಿವರು ಜಾಗದ ರಕ್ಷಣೆಗೆ ಕ್ರಮವಹಿಸಲಾಗುವುದು ಎಂದು ಭರವಸೆಯಿತ್ತರು.