ಮಡಿಕೇರಿ, ಜು. ೧೩: ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಜಿಲ್ಲೆಯ ಯುವಕ ಕೇಚಿರ ಶಬ್ದ್ ಉತ್ತಮ ಸಾಧನೆ ತೋರಿದ್ದು, ದಕ್ಷಿಣ ವಲಯ ಚಾಂಪಿಯನ್ ಶಿಪ್ಗೆ ಆಯ್ಕೆಯಾಗಿದ್ದಾರೆ.
ಕ್ರೀಡೆಗೆ ಉತ್ತೇಜನ ನೀಡಲು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಖೇಲೋ ಇಂಡಿಯಾ ಕೇಂದ್ರಕ್ಕೆ ಕಳೆದ ಏಪ್ರಿಲ್ನಲ್ಲಿ ಶಬ್ದ್ ಸೇರ್ಪಡೆಗೊಂಡು ತರಬೇತಿ ಪಡೆಯುತ್ತಿದ್ದಾರೆ, ಖೇಲೋ ಇಂಡಿಯಾಕ್ಕೆ ಫರ್ಫಾರ್ಮೆನ್ಸ್ ಡೈರೆಕ್ಟರ್ ಆಗಿ ಕೊಡಗಿನವರಾದ ಡಾ|| ಎ.ಬಿ. ಸುಬ್ಬಯ್ಯ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ನಡೆದ ಸ್ಪರ್ಧೆಯಲ್ಲಿ ಶಬ್ದ್ ಒಟ್ಟು ೬ ಕಂಚಿನ ಪದಕಗಳನ್ನು ಪಡೆದುಕೊಂಡು ಸಾಧನೆ ತೋರಿದ್ದಾರೆ. ಚಿತ್ರದಲ್ಲಿ ಡಾ|| ಎ.ಬಿ. ಸುಬ್ಬಯ್ಯ ಹಾಗೂ ತರಬೇತುದಾರ ಸೂರಜ್ ಅವರಿದ್ದಾರೆ. ಶಬ್ದ್ ಅಂದಗೋವೆಯ ಕೇಚಿರ ವಿಜು ಬೆಳ್ಯಪ್ಪ ಹಾಗೂ ಲತಾ ದಂಪತಿಯ ಪುತ್ರ.