ಶನಿವಾರಸಂತೆ, ಜು. ೧೨: ಪಟ್ಟಣದ ಡಾ. ತುಂಗಾ ಎಂ. ನಾಥ್ ಅವರು ರಾಜ್ಯದ ಮೈಸೂರು ಮುಕ್ತ ವಿಶ್ವ ವಿದ್ಯಾನಿಲಯದಲ್ಲಿ ೨೩-೨೪ನೇ ಸಾಲಿನಲ್ಲಿ ನಡೆದ ಸ್ನಾತಕೋತ್ತರ ಪರೀಕ್ಷೆಯಲ್ಲಿ “ಪೌಷ್ಟಿಕ ಆಹಾರ ಮತ್ತು ಪಥ್ಯದ ನಿಯಮ’’ ವಿಷಯದಲ್ಲಿ ಉತ್ತಮ ಅಂಕ ಗಳಿಸಿ, ರಾಜ್ಯಕ್ಕೆ ೪ನೇ ಅತ್ಯುನ್ನತ ಸ್ಥಾನ ಪಡೆದಿದ್ದು, ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಘಟಿಕೋತ್ಸವದಲ್ಲಿ ಚಿನ್ನದ ಪದಕ ಹಾಗೂ ಪ್ರಶಸ್ತಿ ಪಡೆದಿದ್ದಾರೆ. ಇವರು ಶನಿವಾರಸಂತೆಯ ಬಿ.ಎಸ್. ಮಂಜುನಾಥ್-ನೇತ್ರಾವತಿ ದಂಪತಿ ಪುತ್ರಿ.