ವೀರಾಜಪೇಟೆ, ಜು. ೧೩: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವೀರಾಜಪೇಟೆ ವತಿಯಿಂದ ಪೊನ್ನಂಪೇಟೆ ವಲಯದ ಟಿ. ಶೆಟ್ಟಿಗೇರಿಯಲ್ಲಿ ನೂತನ ಶ್ರೀ ಸುಬ್ರಹ್ಮಣ್ಯ ಮಹಿಳಾ ಜ್ಞಾನವಿಕಾಸ ಕೇಂದ್ರವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ದಿವ್ಯ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಸಮಾಜದಲ್ಲಿ ಸರ್ವ ಕ್ಷೇತ್ರಗಳಲ್ಲಿಯೂ ವಿಶಿಷ್ಟವಾದ ಪಾತ್ರವನ್ನು ನಿಭಾಯಿಸುತ್ತಿರುವುದು ಶ್ಲಾಘನೀಯ ಎಂದರು.
ಟಿ. ಶೆಟ್ಟಿಗೇರಿ ಒಕ್ಕೂಟದ ಅಧ್ಯಕ್ಷೆ ಬೊಳ್ಳಜಿರ ಸುಶೀಲ ಕೇಂದ್ರ ಯಶಸ್ವಿಯಾಗಿ ನಡೆಯಲಿ ಎಂದರು. ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೇಯಾ ಕಾರ್ಯಕ್ರಮ ಸಂಯೋಜನೆಗೊಳಿಸಿದ್ದರು.
ಒಕ್ಕೂಟದ ಸದಸ್ಯರಾದ ಮನ್ನೆರ ಸರಸ್ವತಿ, ಉಷಾ, ಮಾದೇವಿ, ದಿವ್ಯ, ಭವ್ಯ ಸೇರಿದಂತೆ ಸಂಘದÀ ಸದಸ್ಯರು ಉಪಸ್ಥಿತರಿದ್ದರು.