ಮಡಿಕೇರಿ, ಜು. ೧೩: ಬಿಳಿಗೇರಿ ಗ್ರಾಮದ ತೋಟವೊಂದಕ್ಕೆ ನುಗ್ಗಿದ ಖದೀಮರು ಕಾಳುಮೆಣಸಿನ ಬಳ್ಳಿಗಳನ್ನು ಕಡಿದು ಪರಾರಿಯಾದ ಘಟನೆ ನಡೆದಿದೆ. ಈ ಬಗ್ಗೆ ತೋಟದ ಮಾಲಿಕರಾದ ಪೈಕೇರ ಸಿ ಮಾಚಯ್ಯ ಅವರು ಮೂರ್ನಾಡು ಪೊಲೀಸ್ ಠಾಣೆಗೆ ತಾ.೧೨ ರಂದು ದೂರು ನೀಡಿದ್ದಾರೆ. ನಿನ್ನೆಯಷ್ಟೆ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿ.ಬಾಡಗ ಗ್ರಾಮದಲ್ಲಿ ಎರಡು ತೋಟಗಳಲ್ಲಿ ಕಾಫಿ, ಕಾಳುಮೆಣಸು, ತೆಂಗು ಗಿಡಗಳನ್ನು ದುಷ್ಕರ್ಮಿಗಳು ಕಡಿದು ಪರಾರಿಯಾಗಿದ್ದ ಘಟನೆ ವರದಿಯಾಗಿತ್ತು.
ಇದೀಗ ಬಿಳಿಗೇರಿಯ ಮಾಚಯ್ಯ ಅವರ ತೋಟದಲ್ಲಿಯೂ ಇದೇ ರೀತಿ ಘಟನೆ ವರದಿಯಾಗಿದೆ. ಸುಮಾರು ಕರಿಮೆಣಸು ಗಿಡಗಳು ನಾಪತ್ತೆಯಾಗಿದ್ದು, ಪರಿಶೀಲಿಸಿದಾಗ ಬಳ್ಳಿಗಳನ್ನು ಕಡಿದಿದ್ದ ಕತ್ತಿ ಗುರುತು ಗಿಡದ ಮೇಲೆ ಪತ್ತೆಯಾಗಿದ್ದು, ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ಮಾಲಿಕರು ಮಾಹಿತಿ ಇತ್ತಿದ್ದಾರೆ. ೧೫ ರಿಂದ ೨೦ ಅಡಿಗಿಂತ ಉದ್ದ ಬೆಳೆದಿದ್ದ ಕರಿಮೆಣಸು ಬಳ್ಳಿಗಳನ್ನೇ ಕಿಡಿಗೇಡಿಗಳು ಗುರಿಯಾಗಿಸಿ ತುಂಡು ಮಾಡಿದ್ದಾರೆ. ಸುಮಾರು ೪೦ಕ್ಕೂ ಅಧಿಕ ಗಿಡಗಳು ಧ್ವಂಸಗೊAಡಿವೆ.