ಮಡಿಕೇರಿ, ಜು. ೧೩: ೨೦೨೩-೨೪ನೇ ಸಾಲಿನ ರೋಟರಿ ಯೋಜನೆಯಂತೆ, ಮಡಿಕೇರಿಯ ಅಂಗನವಾಡಿಗೆ ಅಗತ್ಯಕ್ಕನುಗುಣವಾಗಿ ಒಂದು ಮಿಕ್ಸಿ ಮತ್ತಿತರ ವಸ್ತುಗಳನ್ನು ಮಡಿಕೇರಿ ರೋಟರಿ ವುಡ್ಸ್ ಅಧ್ಯಕ್ಷ ರೊ. ವಸಂತ್ ಕುಮಾರ್ ಅವರು ಕೊಡುಗೆಯಾಗಿ ನೀಡಿದರು.

ಈ ಸಂದರ್ಭ ಪ್ರಯೋಜಕತ್ವ ಮಾಡಿದ ದಾನಿ ಹಾಗೂ ರೊ. ಪ್ರಮೀಳಾ ಶೆಟ್ಟಿ, ಚೈತ್ರ ಧನಂಜಯ ಶೆಟ್ಟಿ, ಶಿಕ್ಷಕಿ ಗೀತಾ, ವಿಜಯಲಕ್ಷಿö್ಮ ಹಾಗೂ ವಲಯ ಸೇನಾನಿ ರೊ. ಸಂಪತ್ ಕುಮಾರ್ ಹಾಜರಿದ್ದರು.