ಗೋಣಿಕೊಪ್ಪ ವರದಿ, ಜು. ೧೨: ಎರಡು ವರ್ಷಕೊಮ್ಮೆ ಜರುಗುವ ಹಾತೂರು ವನಭದ್ರಕಾಳಿ ದೇವಿಯ ವನಭದ್ರಕಾಳಿ ಹಬ್ಬದಲ್ಲಿ ದೇವಿ ಭಕ್ತರಿಗೆ ಆಶೀರ್ವದಿಸಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪುನೀತರಾದರು. ಮಂಗಳವಾರ ದಿನವಿಡೀ ಭಕ್ತರು ದೇವಿಯನ್ನು ಆರಾಧಿಸಿದರು.

ಮಂಗಳವಾರ ಬೆಳಿಗ್ಗೆಯಿಂದ ವಿವಿಧ ರೀತಿಯ ಆಚರಣೆಗಳು ನಡೆದು, ಸಂಜೆ ಸಂಪನ್ನಗೊAಡಿತು. ಸಂಜೆ ಮುಖ್ಯರಸ್ತೆಯ ಮೂಲಕ ದೇವಸ್ಥಾನಕ್ಕೆ ವನಭದ್ರಕಾಳಿ, ಕೊಂಗೇಪAಡ ಕುಟುಂಬದ ಮೊಗ, ಕೇಳಪಂಡ ಕುಟುಂದ ಪೂತೆರೆ ಆಗಮಿಸಿದವು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಇಗ್ಗುತ್ತಪ್ಪ ಬೋಜೋ.. ಭದ್ರಕಾಳಮ್ಮೇ ಬೋಜೋ.. ಮಹಾದೇವ ಬೋಜೋ.. ಅಯ್ಯಪ್ಪ ಬೋಜೋ ಎಂದು ಘೋಷಣೆ ಮೂಲಕ ಆಸ್ವಾಧಿಸಿಕೊಂಡರು. ದಾರಿಯುದ್ದಕ್ಕೂ ಹೂಮಾಲೆ, ನಿಂಬೆ ಹಣ್ಣಿನ ಮಾಲೆ ಹಿಡಿದು ದೇವರನ್ನು ಬರ ಮಾಡಿಕೊಂಡರು. ಕೊರೊನಾ ನಂತರ ಮೊದಲ ಬಾರಿಗೆ ವಿಜೃಂಭಣೆಯಿAದ ಜರುಗಿದ ಕಾರಣ ಭಕ್ತರ ಸಂಖ್ಯೆ ಹೆಚ್ಚಿತ್ತು. ಸುಮಾರು ಒಂದು ಗಂಟೆ ಕಾಲ ವಾಹನಗಳು ನಿಂತಲ್ಲೆ ನಿಂತವು. ಹೊರ ಜಿಲ್ಲೆಯಿಂದ ಕೂಡ ಭಕ್ತರು ಆಗಮಿಸಿ ಹರಕೆ ಒಪ್ಪಿಸಿದರು.

ಕೊಂಗೇಪAಡ ಮತ್ತು ಕೇಳಪಂಡ ಕುಟುಂಬದಿAದ ಪಾಳ್ಗೊಳ್ಳುವ ಮೊಗ ಮತ್ತು ಪೂತೆರೆಯನ್ನು ವನಭದ್ರಕಾಳಿ ದೇವಿ ಸ್ವಾಗತಿಸಿಕೊಂಡಿತು. ಕೊಂಗೇಪAಡ ಕುಟುಂಬದ ಐನ್‌ಮನೆಗೆ ತೆರಳಿ ಬರಮಾಡಿಕೊಂಡು, ನಂತರ ಕೇಳಪಂಡ ಐನ್‌ಮನೆಯಿಂದ ಹೊರಡುವ ಪೂತೆರೆಯನ್ನು ಕರೆದುಕೊಂಡು ಬರಲಾಯಿತು. ಪಣಿಕ ಜನಾಂಗದವರು ತೆರೆ ಕಟ್ಟಿ ನೃತ್ಯದ ಮೂಲಕ ದೇವರ ಆಚರಣೆ ಮಾಡಿದರು. ದುಡಿಕೊಟ್ಟ್ ನಡೆಸಿಕೊಟ್ಟರು.

ಹಾತೂರುವಿನಲ್ಲಿರುವ ವನ ಭದ್ರಕಾಳಿ ಸ್ಥಾನಕ್ಕಿದೆ ಇಂತಹದೊAದು ಪವಾಡ. ದೇವಿಯ ಆಚರಣೆ ಸಂದರ್ಭ ತೆರೆ, ಮೊಗ, ಭಂಡಾರ ಹೊತ್ತು ಸಾಗುವಾಗ ತೋಟ, ಗದ್ದೆಗಳ ನಡುವೆಯೇ ಸಾಗಬೇಕಿದೆ. ಈ ಸಂದರ್ಭ ಭಕ್ತರ ಕಾಲ್ತುಳಿತಕ್ಕೆ ಒಳಗಾಗುವ ಬೆಳೆ ಪುಟಿದೆದ್ದು ಬರುತ್ತದೆ. ಬೆಳೆ, ಪೈರು ನಷ್ಟ ಇಂತಹ ಕೊರತೆ ಗ್ರಾಮದಲ್ಲಿ ಎದುರಿಸಿಯೇ ಇಲ್ಲ. ಇದು ಸ್ಥಳೀಯ ಭಕ್ತರ ನಂಬಿಕೆ.

ಕೈಕೇರಿಯಿAದ ದೇವಸ್ಥಾನದ ವರೆಗೂ ಮೊಗ, ಭಂಡಾರವನ್ನು ಹೊತ್ತು ದೇವಸ್ಥಾನಕ್ಕೆ ಸಾಗಿ ಬಂದರು. ಸಾಮಾನ್ಯದಂತೆ ತೋಟ, ಗದ್ದೆ ಮೂಲಕ ಸುಮಾರು ೩೦೦ ಕ್ಕೂ ಹೆಚ್ಚು ಭಕ್ತರು ಜಮಾಯಿಸಿದರು. ಕೋಂಗೇಪAಡ ಕುಟುಂಬದ ಗದ್ದೆಯ ನಡುವೆ ಸಾಗಿ ಬರುವಾಗ ಬಿತ್ತನೆ ಬೀಜ ಹಾಕಿರುವ ಪೈರು ಗದ್ದೆಯನ್ನು ತುಳಿದುಕೊಂಡು ದೇವಸ್ಥಾನಕ್ಕೆ ಆಗಮಿಸಿದರು. ಸೋಮವಾರ ರಾತ್ರಿ ೮ ಗಂಟೆಗೆ ಕೈಕೇರಿ ಗ್ರಾಮದ ಪಕ್ಕದಲ್ಲಿರುವ ಹಲಸಿನ ಮರದ ಕೆಳಗಿರುವ ಸ್ಥಾನದಿಂದ ದೇವರನ್ನು ತಂದು ಮಹಾದೇವರ ದೇವಸ್ಥಾನದಲ್ಲಿ ಪೂಜಿಸಲಾಯಿತು. ಮಂಗಳವಾರ ಬೆಳಿಗ್ಗೆ ಮೊಗ, ಪೂತೆರೆ ದೇವಸ್ಥಾನಕ್ಕೆ ಆಗಮಿಸಿದವು. ವನಭದ್ರಕಾಳಿ ದೇವರ ದರ್ಶನವಾಯಿತು. ಭಕ್ತರು ಆಚರಣೆಯಂತೆ ಎತ್ತುಗಳನ್ನು ಸ್ಥಾನದಲ್ಲಿ ದಾನದ ರೂಪದಲ್ಲಿ ನೀಡಿದರು.

ಆರಂಭದಲ್ಲಿ ಆಚರಣೆಯಂತೆ ಕೊಕ್ಕಂಡ, ಕೊಂಗೇಪAಡ, ಕೇಳಪಂಡ ಕುಟುಂಬಕ್ಕೆ ಸೇರಿದ ದೈವಶಕ್ತಿಯ ಮೊಗ, ಭಂಡಾರವನ್ನು ಆಯಾ ಕುಟುಂಬಸ್ಥರ ಐನ್‌ಮನೆಗೆ ತೆಗೆದುಕೊಂಡು ಹೋಗಿ ಪೂಜಿಸಲಾಯಿತು. ಮಹಾ ಮಂಗಳಾರತಿ ಮಾಡಿದ ತೀರ್ಥವನ್ನು ಮೊಗಕ್ಕೆ ಸಿಂಪಡಣೆ ಸಂದರ್ಭ ದೇವರ ದರ್ಶನವಾಯಿತು. ದೊಡ್ಡಮನೆ ಕುಟುಂಬದ ಮನೆಯ ಸಮೀಪವಿರುವ ಅರಳಿ ಕಟ್ಟೆಯಲ್ಲಿ ಪೂಜೆ ಸಲ್ಲಿಸಿ, ಬೆಳಗ್ಗೆ ಕೊಕ್ಕಂಡ ಕುಟುಂಬದ ಮೊಗ, ಕೇಳಪಂಡ ಕುಟುಂಬದ ಪೂತೆರೆ ಪೂಜಿಸಲಾಯಿತು. ಮಧ್ಯಾಹ್ನ ೨ ಗಂಟೆ ಸುಮಾರಿಗೆ ಕೊಂಗೇಪAಡ ಮತ್ತು ಕೇಳಪಂಡ ಕುಟುಂಬದಿAದ ಮೊಗ ಮತ್ತು ಪೂತೆರೆ ಆಚರಣೆ ನಡೆಯಿತು. ದೇವಸ್ಥಾನಕ್ಕೆ ಆಗಮಿಸಿ, ದರ್ಶನ ನೀಡಿದವು. ಕೊಂಗೇಪAಡ ಕುಟುಂಬದ ವ್ಯಕ್ತಿಗೆ ಬರುವ ವನಭದ್ರಕಾಳಿ ದರ್ಶನ ನೀಡಿ, ಆಶಿರ್ವದಿಸಿತು.

ಕೊರೊನಾ ನಂತರ ನಡೆದ ಮೊದಲ ಹಬ್ಬವಾಗಿರುವುದರಿಂದ ಹರಕೆ, ಭಕ್ತರ ದಂಡು ಹರಿದು ಬಂತು. ಶೂಲ, ದೀಪ ವಸ್ತುಗಳ ಮೂಲಕ ಹರಕೆ ಒಪ್ಪಿಸಲಾಯಿತು. ಸಾವಿರಕ್ಕೂ ಅಧಿಕ ಈಡುಗಾಯಿ ಒಡೆಯಲಾಯಿತು.

ವಾಡಿಕೆಯಂತೆ ಭಂಡಾರ ತಕ್ಕರಾಗಿ ಕೊಕ್ಕಂಡ, ದೇವತಕ್ಕರಾಗಿ ಕೊಂಗೇಪAಡ, ಅಯ್ಯಪ್ಪ ದೇವರ ತಕ್ಕರಾಗಿ ಕೇಳಪಂಡ ಕುಟುಂಬ ಜವಬ್ದಾರಿ ನಿಭಾಯಿಸಿದರು. ದೇವಸ್ಥಾನ ತಕ್ಕರಾದ ಕೊಕ್ಕಂಡ ಪಿ ಅರ್ಜುನ್, ಕೋಂಗೇಪAಡ ಎಂ. ಸುಬ್ಬಯ್ಯ, ಕೇಳಪಂಡ ವಿನು ವಿಶ್ವನಾಥ್, ಅಭಿವೃದ್ದಿ ಸಮಿತಿ ಅಧ್ಯಕ್ಷ ಕೊಕ್ಕಂಡ ಗಿಣಿ ಗಣಪತಿ, ಕಾರ್ಯದರ್ಶಿ ಕೊಂಗೇಪAಡ ರವಿ, ಸದಸ್ಯರಾದ ಪುಲಿಯಂಡ ರೋಷನ್ ಕಾಳಪ್ಪ, ಕೇಳಪಂಡ ಬಾಬು ಉತ್ತಪ್ಪ, ಚೋಣಮಾಡ ಕಾವೇರಪ್ಪ, ಮುರುವಂಡ ಮಿಥುನ್ ಅಣ್ಣಯ್ಯ ಸೇರಿದಂತೆ ಗ್ರಾಮಸ್ಥರು ಆಚರಣೆ ನಡೆಸಿಕೊಟ್ಟರು.