ಮಡಿಕೇರಿ, ಜು. ೧೩: ಕಳೆದ ೫೬ ವರ್ಷಗಳಿಂದ ಹಲವಾರು ಸಮಾಜಮುಖಿ ಸೇವಾ ಕಾರ್ಯ ಗಳನ್ನು ಮಾಡಿ ಕೊಂಡು ಬರು ತ್ತಿರುವ ಮಡಿ ಕೇರಿ ಲಯನ್ಸ್ ಸಂಸ್ಥೆಯ ೨೦೨೩-೨೪ನೇ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು, ಮಡಿಕೇರಿಯಲ್ಲಿ ತೆರಿಗೆ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಲಯನ್ ಮಧುಕರ್ ಶೇಟ್ ಡಿ. ಅಧ್ಯಕ್ಷರಾಗಿ, ಎಲ್.ಐ.ಸಿ. ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಲಯನ್ ನಟರಾಜು ಕೆಸ್ತೂರ್ ಕಾರ್ಯದರ್ಶಿಯಾಗಿ, ಕಾಫಿ ಬೆಳೆಗಾರ ರವಿ ಎನ್.ಬಿ. ಖಜಾಂಚಿಯಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಪದಗ್ರಹಣ ಸಮಾರಂಭ ಸಂಸ್ಥೆಯ ಇತರ ಪದಾಧಿಕಾರಿಗಳೊಂದಿಗೆ ತಾ. ೧೭ ರಂದು ಮಡಿಕೇರಿಯ ಲಯನ್ಸ್ ಹಾಲ್ನಲ್ಲಿ ಸಂಜೆ ೭ ಗಂಟೆಗೆ ನಡೆಯಲಿದೆ. ಈ ಕಾರ್ಯಕ್ರಮವನ್ನು ಲಯನ್ಸ್ ಜಿಲ್ಲೆ ೩೧೭ಡಿ ಯ ೨ನೇ ಲಯನ್ ರಾಜ್ಯಪಾಲ ಕುಡುಪಿ ಅರವಿಂದ್ ಶೆಣೈ ಅವರು ನಡೆಸಿಕೊಡಲಿದ್ದಾರೆ.