ಮಡಿಕೇರಿ, ಜು. ೧೨: ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೨-೨೩ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಅವರ ಅಧ್ಯಕ್ಷತೆಯಲ್ಲಿ ಪೆರಾಜೆಯ ಶ್ರೀ ಅನ್ನಪೂರ್ಣೇಶ್ವರಿ ಕಲಾ ಮಂದಿರದಲ್ಲಿ ಜರುಗಿತು.

ಒಟ್ಟು ರೂ. ೪೨.೬೧ ಲಕ್ಷ ಲಾಭದಲ್ಲಿರುವುದಾಗಿ ಅಧ್ಯಕ್ಷರು ಮಾಹಿತಿಯಿತ್ತರು. ಕಾರ್ಯಕ್ರಮದ ಪ್ರಾರಂಭದಲ್ಲಿ ಯತೀಶ್ ಪ್ರಾರ್ಥನೆಗೈದರು.

ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲೋಕೇಶ್ ಹೆಚ್.ಕೆ. ಸ್ವಾಗತಿಸಿ, ಮಹಾಸಭೆಯ ನೋಟೀಸನ್ನು ಹಾಗೂ ಕಾರ್ಯ ಸೂಚಿಯನ್ನು ಓದಿ ದಾಖಲಿಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಅಶೋಕ ಪಿ.ಎಂ., ನಿರ್ದೇಶಕರುಗಳಾದ ಮೋನಪ್ಪ ಎನ್.ಬಿ., ಪ್ರಸನ್ನ ನೆಕ್ಕಿಲ, ದೀನರಾಜ ದೊಡ್ಡಡ್ಕ, ಧನಂಜಯ ಕೋಡಿ, ಜಯರಾಮ ಪಿ.ಟಿ., ಶೇಷಪ್ಪ ನಾಯ್ಕ ನಿಡ್ಯಮಲೆ, ರೇಣುಕಾ ಕುಂದಲ್ಪಾಡಿ, ಉದಯಕುಮಾರ ಪಿ.ಎ., ದಾಸಪ್ಪ ಮಡಿವಾಳ, ಕಿರಣ ಬಂಗಾರಕೋಡಿ, ಹೊನ್ನಪ್ಪ ಅಮಚೂರು, ಸೀತಾರಾಮ ಕದಿಕಡ್ಕ, ಪುಷ್ಪಾವತಿ ವ್ಯಾಪಾರೆ, ಪ್ರದೀಪ ಕೆ.ಎಂ. ಉಪಸ್ಥಿತರಿದ್ದರು.

ಮಹಾಸಭೆಯು ಕಾರ್ಯಸೂಚಿಯಂತೆ ನೆರವೇರಿತು. ನಿರ್ದೇಶಕ ಪ್ರಸನ್ನ ನೆಕ್ಕಿಲ ವಂದಿಸಿದರು. ರಾಷ್ಟçಗೀತೆಯೊಂದಿಗೆ ಸಭೆ ಮುಕ್ತಾಯಗೊಂಡಿತು.