ಗೋಣಿಕೊಪ್ಪ ವರದಿ, ಜು. ೧೨: ಕೆ. ಬಾಡಗ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಅಸ್ತಿತ್ವಕ್ಕೆ ಬಂದಿದ್ದು, ೧೨ ಜನರ ಆಡಳಿತ ಮಂಡಳಿಗೆ ಆಯ್ಕೆ ನಡೆದಿದೆ. ೧೩ ಪ್ರಮೋರ‍್ಸ್ಗಳ ನೇಮಕ ಮಾಡಿಕೊಂಡು ಚುನಾವಣೆ ನಡೆಸಲಾಗಿದೆ. ಮುಖ್ಯ ಪ್ರಮೋಟರ್ ಆಗಿ ಮಾಚಿಮಾಡ ಎಂ. ತಿಮ್ಮಯ್ಯ ಅವರನ್ನು ಆಯ್ಕೆ ಮಾಡಿಕೊಂಡು, ಉಳಿದವರು ಪ್ರಮೋಟರ್ ಸ್ಥಾನ ಉಳಿಸಿಕೊಂಡಿದ್ದಾರೆ. ಇದರಂತೆ ಅಧ್ಯಕ್ಷರಾಗಿ ಮಾಚಿಮಾಡ ಎಂ. ತಿಮ್ಮಯ್ಯ, ಉಪಾಧ್ಯಕ್ಷ ಬೊಳ್ಳೇರ ಜಿ. ಸುಬ್ಬಯ್ಯ, ನಿರ್ದೇಶಕರಾಗಿ ಪೆಮ್ಮಣಮಾಡ ಬಿ. ರಮೇಶ್, ದೇಯಂಡ ಟಿ. ಜಯರಾಮ್, ಬೊಳ್ಳೇರ ಕುಟ್ಟಪ್ಪ ಅಪ್ಪಯ್ಯ, ಅಳಮೇಂಗಡ ಎ. ಮೋಟಯ್ಯ, ಚೊಟ್ಟೋಳಿಯಮ್ಮಂಡ ಜಿ. ನರೇಂದ್ರ, ಕಳ್ಳಿಚಂಡ ಪ್ರಭಾಕುಮಾರಿ, ಗುಡಿಯಂಗಡ ಮೀನಾಕ್ಷಿ, ಕೆ.ಎಸ್. ಲೀಲಾವತಿ, ಎಂ.ಡಿ. ಸಂಧ್ಯಾ, ಪಿ. ಮೇಘನಾ ಚಂದ್ರಶೇಖರ್. ಡಿಸಿಸಿ ನಾಮ ನಿರ್ದೇಶಕರಾಗಿರುತ್ತಾರೆ.

ಪೊನ್ನಂಪೇಟೆ ತಾಲೂಕಿನ ಕುಟ್ಟ ಫ್ಯಾಕ್ಸ್ಗೆ ಸೇರಿದ್ದ ಸಂಘವು ವಿಭಜನೆಗೊಂಡು ಸರ್ಕಾರದ ನಿಯಮದಂತೆ ಅಸ್ತಿತ್ವಕ್ಕೆ ತರಲಾಗಿದ್ದು, ನೋಂದಣಿ ಸಂಖ್ಯೆ ೫೧೬೫೯ ಅಡೀ ಕಾರ್ಯನಿರ್ವಹಿಸುತ್ತಿದೆ. ಸಂಘದ ಮೂಲಭೂತ ವ್ಯವಸ್ಥೆಗಾಗಿ ಗ್ರಾಮದಲ್ಲಿ ರೂ. ೨೫ ಲಕ್ಷದಲ್ಲಿ ಅರ್ಧ ಎಕರೆ ಜಾಗ ಖರೀದಿಸಿ, ಕಚೇರಿ, ಮೂಲಸೌಕರ್ಯಕ್ಕೆ ಪೂರಕ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಹಂತ ಹಂತವಾಗಿ ಯೋಜನೆ ತರಲಾಗುವದು ಎಂದು ಮಾಚಿಮಾಡ ಎಂ ತಿಮ್ಮಯ್ಯ ತಿಳಿಸಿದ್ದಾರೆ.