ಮದೆ, ಜು. ೧೨: ಮಡಿಕೇರಿ ತಾಲೂಕಿನ ಕೆ. ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತಿಕ್ರಮಣಗೊಂಡಿರುವ ದೇವರಕಾಡು ಹಾಗೂ ಗೋಮಾಳಕ್ಕೆ ಸೇರಿದ ಜಾಗವನ್ನು ತಾಲೂಕಿನ ತಹಶೀಲ್ದಾರ್ ಹಾಗೂ ಕಂದಾಯ ಇಲಾಖಾ ಅಧಿಕಾರಿಗಳು ಪರಿಶೀಲನೆ ಮಾಡಿದರು.

ಕೆ. ನಿಡುಗಣೆಯಲ್ಲಿರುವ ಸರಕಾರಿ ಗೋಶಾಲೆಗೆ ಒತ್ತಿನಲ್ಲಿರುವ ದೇವರಕಾಡು ಹಾಗೂ ಗೋಮಾಳಕ್ಕೆ ಸೇರಿರುವ ಸ.ನಂ. ೨೨/೧ ರಲ್ಲಿನ ೨೪.೪೪ ಎಕರೆ ಜಾಗದಲ್ಲಿ ಅತಿಕ್ರಮಣವಾಗಿದೆ. ಅಲ್ಲದೆ, ರಾಜ ಕಡಂಗವನ್ನು ಮುಚ್ಚಲಾಗಿದೆ ಎಂಬ ಬಗ್ಗೆ ದೂರು ಬಂದ

(ಮೊದಲ ಪುಟದಿಂದ) ಹಿನ್ನೆಲೆಯಲ್ಲಿ ಇಂದು ಮಡಿಕೇರಿ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಪ್ರಕರಣಕ್ಕೆ ಸಂಬAಧಿಸಿದAತೆ ಇಲಾಖೆಯಿಂದ ಹದ್ದುಬಸ್ತು ಸರ್ವೆ ಮಾಡಿಸಿ ಒತ್ತುವರಿಯಾಗಿರುವ ಜಾಗ ಹಾಗೂ ಕಡಂಗವನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಶಿರಸ್ತೆದಾರ್ ದೇವರಾಜ್, ಕಂದಾಯ ನಿರೀಕ್ಷರ ಚಂದ್ರಪ್ರಸಾದ್, ಸರ್ವೆಯರ್ ಕುಚೇಲ, ಗೃಹಮಂಡಳಿ ಪ್ರತಿನಿಧಿ ಗುರುರಾಜ್ ಇದ್ದರು. - ಇಬ್ರಾಹಿಂ