ನಾಪೋಕ್ಲು, ಜು. ೧೨: ಸಮೀಪದ ಪಾರಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಕಂಡಬಾಣೆ ಎಂಬಲ್ಲಿ ಅಂಗನವಾಡಿ ಸಮೀಪ ಬುಧವಾರ ನಾಗರಹಾವು ಕಾಣಿಸಿ ಕೊಂಡು ಪುಟಾಣಿ ಮಕ್ಕಳು ಹಾಗೂ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತು. ನಾಗರ ಹಾವನ್ನು ಸ್ಥಳೀಯರೆ ಚಾಣಾಕ್ಷತನದಿಂದ ಡ್ರಮ್ ನಲ್ಲಿ ತುಂಬಿಸಿ ಕಾಡಿಗೆ ಬಿಟ್ಟರು.