ಮಡಿಕೇರಿ, ಜು. ೧೨: ಮಡಿಕೇರಿ ನಗರದ ಐಟಿಐ ಜಂಕ್ಷನ್ ಬಳಿ ನಗರ ಸಭಾ ಸದಸ್ಯ ಕಾಳಚಂಡ ಅಪ್ಪಣ್ಣ ಅವರನ್ನು ದಾರಿ ತಡೆದು ಸ್ಥಳೀಯ ಕ್ಯಾಂಟೀನ್‌ನ ಮಾಲೀಕ ಮೊನಿಶ್ ಹಾಗೂ ಯುವಕರ ತಂಡ ಹಲ್ಲೆ ಮಾಡಿರುವದನ್ನು ಮಡಿಕೇರಿ ಕೊಡವ ಸಮಾಜ, ಕೊಡಗು ಗೌಡ ಸಮಾಜ ಹಾಗೂ ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆ ಖಂಡಿಸಿವೆ.

ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಮುತ್ತಪ್ಪ, ಜನಪ್ರತಿನಿಧಿಯಾಗಿರುವವರಿಗೆ ಈ ರೀತಿಯ ದುಸ್ಥಿತಿಯಾದರೆ ಸಾರ್ವಜನಿಕರ ಪರಿಸ್ಥಿತಿ ಏನು ಎಂಬ ಪ್ರಶ್ನೆ ಕಾಡುತ್ತಿದೆ. ಮೊನ್ನೆ ನಡೆದ ಘಟನೆಯನ್ನು ಗಮನಿಸಿದಾಗ ಇತ್ತೀಚಿನ ದಿನಗಳಲ್ಲಿ ಕೆಲವು ಪುಂಡರ ಗುಂಪು ನಗರದ ಸ್ವಾಸ್ಥö್ಯವನ್ನು ಕೆಡವುತ್ತಿದ್ದು, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿ ಸಿಕೊಂಡಿರುವದು ಕಂಡುಬರುತ್ತಿದೆ. ಸರಕಾರಿ ಕಚೇರಿ, ಕೋರ್ಟ್ ಸಿಬ್ಬಂದಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಓಡಾಡುತ್ತಿರುವ ಮುಖ್ಯ ರಸ್ತೆಯಾಗಿದ್ದು, ಇಂತಹ ಯುವಕರ ತಂಡಗಳಿAದ ಮುಂದೆ ಮತ್ತಷ್ಟು ಘೋರ ಕೃತ್ಯಗಳು ಜರುಗಬಹುದೆಂಬ ಆತಂಕ ಕಾಡುತ್ತಿದೆ. ಮೊನಿಶ್ ಹಾಗೂ ಸಂಗಡಿಗರ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಈಗಾಗಲೇ ಇವರುಗಳ ಮೇಲೆ ಕ್ರಿಮಿನಲ್ ಪ್ರಕರಣಗಳಿದ್ದು, ರೌಡಿ ಶೀಟರ್ ಮೊಕದ್ದಮೆ ದಾಖಲಿಸುವ ದರೊಂದಿಗೆ ಗಡಿಪಾರು ಮಾಡ ಬೇಕೆಂದು ಒತ್ತಾಯಿಸಿದರು.

ಕೊಡಗು ಗೌಡ ಸಮಾಜದ ನಿರ್ದೇಶಕ ಪೈಕೇರ ಮನೋಹರ್ ಮಾದಪ್ಪ ಮಾತನಾಡಿ; ಓರ್ವ ಜನಪ್ರತಿನಿಧಿಗೆ ಇಂತಹ ಪರಿಸ್ಥಿತಿಯಾದಲ್ಲಿ ಸಾರ್ವಜನಿಕರಿಗೆ ಯಾವ ರೀತಿಯ ರಕ್ಷಣೆ ಸಿಗಬಹುದೆಂಬ ಆತಂಕ ಕಾಡುತ್ತಿದೆ. ಈ ಘಟನೆಯನ್ನು ಖಂಡಿಸುವದಾಗಿ ಹೇಳಿದರು.

ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಂ.ಧನAಜಯ ಮಾತನಾಡಿ; ಮಡಿಕೇರಿ ನಗರ ವ್ಯಾಪ್ತಿಯಲ್ಲಿ ನೆಲ ಬಾಡಿಗೆ ಆಧಾರದಲ್ಲಿ ಹಲವಾರು ಅಂಗಡಿ ಮಳಿಗೆಗಳಿವೆ. ಇವುಗಳಿಗೆ ಸರಿಯಾದ ದಾಖಲೆ ಒದಗಿಸಬೇಕು. ಅನಧಿಕೃತವಾಗಿದ್ದಲ್ಲಿ ತೆರವು ಗೊಳಿಸಬೇಕು. ಐಟಿಐ ಜಂಕ್ಷನ್ ಬಳಿಯ ಕ್ಯಾಂಟೀನ್ ಜಾಗದ ಸಮಸ್ಯೆ ಹಲವಾರು ವರ್ಷಗಳ ಹಿಂದಿನದ್ದಾಗಿದ್ದು, ಇದೇ ವೈಷಮ್ಯವನ್ನು ಮುಂದಿಟ್ಟುಕೊAಡು ಜನಪ್ರತಿನಿಧಿ ಮೇಲೆ ಹಲ್ಲೆ ಮಾಡಿರುವದು ಸರಿಯಲ್ಲ. ಅಲ್ಲದೆ ಅಪ್ಪಣ್ಣ ಇತ್ತೀಚೆಗಷ್ಟೇ ಚುನಾ ಯಿತರಾದವರಾಗಿದ್ದು, ವಿನಾ ಕಾರಣ ಹಲ್ಲೆ ಮಾಡಲಾಗಿದೆ. ಈ ಸಂಬAಧ ಪೊಲೀಸ್ ಇಲಾಖೆ ಕ್ರಮ ಜರುಗಿಸಿದೆಯಾದರೂ ಇಂತಹ ಘಟನೆಗಳು ನಡೆಯಬಾರದು. ಇದನ್ನು ಖಂಡಿಸುವದಾಗಿ ಹೇಳಿದರು.

ಗೋಷ್ಠಿಯಲ್ಲಿ ಕೊಡವ ಸಮಾಜ ಉಪಾಧ್ಯಕ್ಷ ನಂದಿನೆರವAಡ ಚೀಯಣ್ಣ, ಜಂಟಿ ಕಾರ್ಯದರ್ಶಿ ನಂದಿನೆರವAಡ ದಿನೇಶ್ ಇದ್ದರು.

ನಾಳೆ ಪ್ರತಿಭಟನೆ

ಕಾಳಚಂಡ ಅಪ್ಪಣ್ಣ ಅವರ ಮೇಲಿನ ಹಲ್ಲೆ ಖಂಡನೆ ವ್ಯಕ್ತಪಡಿಸಿ ತಾ.೧೪ ರಂದು ಮಡಿಕೇರಿ ಕೊಡವ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಸಮಾಜದ ಅಧ್ಯಕ್ಷ ಮಂಡುವAಡ ಮುತ್ತಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದೆAದೂ ಕೊಡಗಿನ ಮೂಲ ನಿವಾಸಿಗಳಾದ ಕೊಡವರು, ಕೊಡವ ಭಾಷಿಕರು, ಕೊಡವಾಭಿಮಾನಿಗಳಿಗೆ ಬೇರೆಯವರಿಂದ ದೌರ್ಜನ್ಯ ನಡೆಯದಂತೆ ಜಾಗೃತಿ ಮೂಡಿಸುವ ಸಲುವಾಗಿ ತಾ.೧೪ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಎಲ್ಲಾ ಮೂಲ ನಿವಾಸಿಗಳು, ಕೊಡವ ಭಾಷಿಕರು, ಕೊಡವಾಭಿಮಾನಿಗಳು, ಗೌಡ ಸಮಾಜದವರು ಚೇಂಬರ್ ಆಫ್ ಕಾಮರ್ಸ್ ಸಹಕಾರದೊಂದಿಗೆ ಮಡಿಕೇರಿ ನಗರಸಭೆ ಮುಂಭಾಗ ಪ್ರತಿಭಟನೆ ನಡೆಯಲಿದ್ದು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಉನ್ನತಾಧಿಕಾರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಕನ್ನಂಡ ಸಂಪತ್, ನಿರ್ದೇಶಕ ಮೂವೇರ ಜಯರಾಮ್ ಉಪಸ್ಥಿತರಿದ್ದರು.