ಮಡಿಕೇರಿ, ಜು. ೧೧: ನಗರದ ಐಟಿಐ ಜಂಕ್ಷನ್‌ನಲ್ಲಿ ಧನಲಕ್ಷಿö್ಮ ಎಂಬವರಿಗೆ ಸೇರಿದ ಅಂಗಡಿ ಮಳಿಗೆಯ ಜಾಗಕ್ಕೆ ವಾರದ ಒಳಗಾಗಿ ಫಾರಂ ನಂ.೩ ದಾಖಲೆಯನ್ನು ನಗರಸಭೆ ಒದಗಿಸಬೇಕು. ಇಲ್ಲವಾದಲ್ಲಿ ನೊಂದ ಮಹಿಳೆಗೆ ನ್ಯಾಯ ಒದಗಿಸಲು ನಗರಸಭೆ ಮುಂಭಾಗ ಪ್ರತಿಭಟನೆ ನಡೆಸು ವುದಾಗಿ ಮಡಿಕೇರಿ ನಗರಸಭೆಯ ಮಾಜಿ ಉಪಾಧ್ಯಕ್ಷ ಕೆ.ಎಂ. ಗಣೇಶ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಧನಲಕ್ಷಿö್ಮ ಅವರಿಗೆ ಸೇರಿದ ಜಾಗದ ದಾಖಲೆ ಒದಗಿಸುವುದಕ್ಕೆ ಸಂಬAಧಿಸಿದAತೆ ಇತ್ತೀಚೆಗೆ ನಗರಸಭಾ ಸದಸ್ಯರೊಬ್ಬರ ಮೇಲೆ ಹಲ್ಲೆ ನಡೆದಿದ್ದು, ಇದನ್ನು ಖಂಡಿಸುತ್ತೇನೆ. ಹೀಗಿದ್ದೂ, ಸಂಬAಧಪಟ್ಟ ಜಾಗಕ್ಕೆ ದಾಖಲಾತಿ ಯನ್ನು ಒದಗಿಸುವಲ್ಲಿ ಜನಪ್ರತಿನಿಧಿ ಗಳ ಮತ್ತು ಅಧಿಕಾರಿಗಳ ಧೋರಣೆ ಒಪ್ಪತಕ್ಕ ವಿಚಾರವಲ್ಲ. ಕಂದಾಯ ಇಲಾಖೆ ೨೦೧೭ರಲ್ಲೆ ಜಾಗಕ್ಕೆ ಪಟ್ಟೆಯನ್ನು ನೀಡಿದೆ. ಹೀಗಿದ್ದೂ ನಗರಸಭೆೆಯಿಂದ ಫಾರಂ ನಂ.೩ ರನ್ನು ನೀಡಲು ಅನಗತ್ಯವಾದ ವಿಳಂಬ ಧೋರಣೆ ತಳೆಯ ಲಾಗುತ್ತಿದೆಯೆಂದು ಆರೋಪಿಸಿದರು.
ಐಟಿಐ ಜಂಕ್ಷನ್ ಬಳಿಯಲ್ಲಿ ೧೯೭೫ ರಲ್ಲೆ ಮಣಿ ಎಂಬವರು ಅಂಗಡಿಯನ್ನಿರಿಸಿಕೊAಡು ವ್ಯಾಪಾರ ನಡೆಸುತ್ತಿದ್ದರು. ಆ ಸಂದರ್ಭವೆ ಅವರು ಅಂದಿನ ಪುರಸಭೆÉಗೆ ಜಾಗಕ್ಕೆ ಸಂಬAಧಿಸಿದAತೆ ಟಿಟಿ ದಂಡವನ್ನು ಪಾವತಿಸಿದ್ದರು. ಇವರಿಗೆ ೨೦೧೭ ರಲ್ಲಿ ಕಂದಾಯ ಇಲಾಖೆ ಪಟ್ಟೆಯನ್ನು ಒದಗಿಸಿದೆ. ಈ ಆಧಾರದಲ್ಲಿ ಫಾರಂ ನಂ. ೩ ಮಾಡಿಕೊಳ್ಳುವ ಸಲುವಾಗಿ ಮುಡಾದಿಂದ ಸಿಂಗಲ್ ಲೇ ಔಟ್ ಮಾಡಿ, ನಗರಸಭೆಗೆ ಕಡತಗಳು ಬಂದಿರುವುದಲ್ಲದೆ, ೨೦೧೯ ರಲ್ಲಿ ಫಾರಂ ನಂ. ೩ ರ ಪ್ರೂಫ್‌ನ್ನು ನಗರಸಭೆ ನೀಡಿದೆ. ಆದರೆ, ಇಲ್ಲಿಯವರೆಗೆ ಜಾಗದ ದಾಖಲೆಯನ್ನು ಒದಗಿಸಿಲ್ಲವೆಂದು ಕೆ.ಎಂ. ಗಣೇಶ್ ಆರೋಪಿಸಿದರು.
ಆಸ್ತಿ ತೆರಿಗೆ ಪಾವತಿ: ಈ ನಡುವೆ ಮಣಿ ಅವರು ಕಾಲವಾಗಿದ್ದು, ಬಳಿಕ ಅವರ ಪತ್ನಿ ಧನಲಕ್ಷಿö್ಮ ಅವರು ಫಾರಂ ನಂ. ೩ ನ್ನು ಪಡೆಯಲು ಮುಂದಾದ ಸಂದರ್ಭ ಇದೇ ೨೦೨೩ ರ ಮೇ.೪ ರಂದು ಅಂಗಡಿ ಮಳಿಗೆಯ ಜಾಗದ ಆಸ್ತಿ ತೆರಿಗೆ ಪಾವತಿಸುವಂತೆ ನಗರಸಭೆ ಸೂಚಿಸಿದೆ. ಅದರಂತೆ ಅವರು ಆಸ್ತಿ ತೆರಿಗೆಯನ್ನೂ ಪಾವತಿಸಿದ್ದಾರೆ. ಹೀಗಿದ್ದೂ ಅವರಿಗೆ ನಗರಸಭೆ ದಾಖಲೆಯನ್ನು ನೀಡದಿರುವುದಕ್ಕೆ ಕಾರಣವೇನೆಂದು ಕಟುವಾಗಿ ಪ್ರಶ್ನಿಸಿದರು.
ತನಿಖೆಗೆ ಆಗ್ರಹ: ಬಡ ಕುಟುಂ ಬದ ಜಾಗದ ದಾಖಲೆಯನ್ನು ನೀಡ ದಿರುವುದಕ್ಕೆ ಜನಪ್ರತಿನಿಧಿಗಳೊಂದಿಗೆ ಅಧಿಕಾರಿಗಳು ಶಾಮೀಲಾಗಿರುವುದೇ ಕಾರಣ. ಈ ಹಿನ್ನೆಲೆ ದಾಖಲೆ ಒದ ಗಿಸದೆ ಮಹಿಳೆಗೆ ಕಿರುಕುಳ ನೀಡುವ ಅಧಿಕಾರಿಗಳನ್ನು ಅಮಾನತುಗೊಳಿಸಿ ತನಿಖೆ ನಡೆಸಿ ನ್ಯಾಯ ಬದಗಿಸುವಂತೆ ಕೆ.ಎಂ. ಗಣೇಶ್ ಒತ್ತಾಯಿಸಿದರು.
ಗೋಷ್ಠಿಯಲ್ಲಿ ನಗರಸಭಾ ಮಾಜಿ ಉಪಾಧ್ಯಕ್ಷೆ ಲೀಲಾ ಶೇಷಮ್ಮ, ಇನ್ನಿತ ರರಾದ ಇಸಾಕ್‌ಖಾನ್, ರವಿ ಕಿರಣ್, ಮನುಕುಮಾರ್ ಉಪಸ್ಥಿತರಿದ್ದರು.