ಅನಿಲ್ ಎಚ್.ಟಿ.

ಮಡಿಕೇರಿ, ಜು. ೧೧: ಭೂ ಕುಸಿದ ದುರಂತದಲ್ಲಿ ಮುದ್ದಿನ ಮಡದಿ, ಪ್ರೀತಿಯ ಇಬ್ಬರು ಮಕ್ಕಳನ್ನು ಕಳೆದುಕೊಂಡು ಘಾಸಿಗೊಂಡ ಮನಸ್ಸು ಆ ಶೋಕ ಮರೆಯಲು ಬಡ ಕುಟುಂಬಕ್ಕೆ ಮನೆ ನಿರ್ಮಾಣ ಮಾಡುವ ಮೂಲಕ ಆಸರೆಯಾಗಿದೆ. ಈ ಮೂಲಕ ಶೋಕತಪ್ತ ಮನಸ್ಸಿಗೆ ಕೊಂಚ ಸಾಂತ್ವನ ನೀಡಲು ಮುಂದಾದವರ ಹೆಸರು ಪ್ರಭುಕುಮಾರ್.

೨೦೧೯ ರ ಆಗಸ್ಟ್ನಲ್ಲಿ ಕೊಡಗು ಜಿಲ್ಲೆಯಲ್ಲಿ ಕಂಡು ಕೇಳರಿಯದ ಮಹಾಮಳೆ, ಭೂಕುಸಿತ ಉಂಟಾದ ಸಂದರ್ಭ ವೀರಾಜಪೇಟೆ ಬಳಿಯ ತೋರ ಗ್ರಾಮದಲ್ಲಿಯೂ ಆಗಸ್ಟ್ ೮ ರಂದು ಬೆಟ್ಟ ಕುಸಿತವಾಗಿತ್ತು. ಕುಸಿದ ಬೆಟ್ಟದಡಿ ಗೃಹಿಣಿಯೋ ರ್ವರು ತನ್ನ ಇಬ್ಬರು ಪುತ್ರಿ ಯರೊಂದಿಗೆ ಭೂಸಮಾಧಿಯಾ ಗಿದ್ದರು. ಪತ್ನಿ, ಪುತ್ರಿಯರನ್ನು ಕಳೆದುಕೊಂಡು ಆಘಾತಕ್ಕೀಡಾಗಿದ್ದ ಕುಟುಂಬದ ಯಜಮಾನ ಪ್ರಭು ಕುಮಾರ್ ಬಹಳ ತಿಂಗಳು ಇದೇ ದುಃಖದಲ್ಲಿ ಮುಳುಗಿದ್ದರು. ತೋರ ಗ್ರಾಮದಲ್ಲಿ ಪುಟ್ಟ ಅಂಗಡಿಯನ್ನು ಹೊಂದಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಪ್ರಭುಕುಮಾರ್ - ಅನು ಸೂಯ ದಂಪತಿ ಪಾಲಿಗೆ ಮಹಾಮಳೆ ಎಂಬುದು ಭೂಕು ಸಿತದ ನೆಪದಲ್ಲಿ ಕಂಟಕವಾಯಿತು. ಇಡೀ ಸಂಸಾರದ ಸಂಭ್ರಮವನ್ನೇ ಬೆಟ್ಟ ಕುಸಿತ ತನ್ನೊಂದಿಗೆ ನೆಲಸಮ ಮಾಡಿತ್ತು. ಪತ್ನಿ ಅನುಸೂಯ (೪೦) ಜತೆಗೆ ಪ್ರತಿಭಾವಂತರಾಗಿದ್ದ ಪುತ್ರಿಯರಾದ. ಅಮೃತ, (೧೫) ಅಧಿತಿ (೧೦) ಅವರನ್ನೂ ಕಳೆದು ಕೊಂಡು ಪ್ರಭುಕುಮಾರ್ ತೀವ್ರ ಹತಾಶೆಗೊಳಗಾಗಿದ್ದರು.

ಕೊನೆಗೂ ಒಂದು ದಿನ ಈ ಮಾನಸಿಕ ಹತಾಶೆಯಿಂದ ಹೊರ ಬರಲೇಬೇಕೆಂದು ಸಂಕಲ್ಪ ಮಾಡಿದ ಪ್ರಭು, ಆಗ ಹೊಸ ಚಿಂತನೆಯತ್ತ ಮನಸ್ಸು ಮಾಡಿದರು. ತನ್ನ ಪತ್ನಿಯಾಗಿದ್ದ ಅನುಸೂಯ ಅವರ ಕನಸಾಗಿದ್ದ ಬಡವರಿಗೆ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡಬೇಕು ಎಂಬ ಚಿಂತನೆಯ ಸಾಕಾರಕ್ಕೆ ಪ್ರಭುಕುಮಾರ್ ಮುಂದಾದರು. ತೋರ ಗ್ರಾಮದಲ್ಲಿ ಪ್ಲಾಸ್ಟಿಕ್ ಹೊದಿಕೆ ಕಟ್ಟಿಕೊಂಡು ಅದರ ಕೆಳಗಡೆ ಕಷ್ಟಕರ ಜೀವನ ಸವೆಸುತ್ತಿದ್ದ ಬೋಜು ಮತ್ತು ಬೊಳ್ಳಚಿ ಎಂಬ ಆದಿವಾಸಿ ಕುಟುಂಬವನ್ನು ಗಮನಿ ಸಿದ ಪ್ರಭುಕುಮಾರ್ ಅವರಿಗೆ ಪತ್ನಿಯ ಕನಸನ್ನು ನನಸಾಗಿಸಲು ಈ ಕುಟುಂಬವೇ ಸೂಕ್ತ ಎನಿಸಿತು. ಪತ್ನಿ, ಪುತ್ರಿಯರು ಭೂಕುಸಿತದ ದುರಂತ ಕ್ಕೀಡಾದ ಸಂದರ್ಭ ಸರ್ಕಾರ ಮತ್ತು ವಿವಿಧ ಸಂಘ ಸಂಸ್ಥೆಗಳಿAದ ದೊರ ಕಿದ್ದ ಆರ್ಥಿಕ ನೆರವಿನಲ್ಲಿ ಕೆಲ ಪಾಲನ್ನು ಬಳಸಿಕೊಂಡು ಹೊಸ ದಾದ ಮನೆಯನ್ನು ಆದಿವಾಸಿ ಕುಟುಂಬಕ್ಕಾಗಿ ನಿರ್ಮಿಸಲು ಪ್ರಭುಕುಮಾರ್ ಮುಂದಾದರು.

ಈ ಯೋಚನೆಯಂತೆ ದಂಪತಿಗೆ ಹೊಸ ಮನೆಯನ್ನು ೨೦೨೧ ರ ಅಂತ್ಯದಲ್ಲಿ ನಿರ್ಮಿಸಲು ಮುಂದಾಗಿ ಕಳೆದ ವರ್ಷ ನೂತನ ಮನೆಯನ್ನು ಇವರ ವಾಸಕ್ಕೆ ಹಸ್ತಾಂತರಿ ಸಲಾಯಿತು. ಇದರೊಂ ದಿಗೆ ಅನುಸೂಯ ಆಸೆಯನ್ನು ಕೊಂಚ ಮಟ್ಟಿಗಾದರೂ ಈಡೇರಿಸಿದ ತೃಪ್ತಿ ತನ್ನದಾಗಿದೆ ಎಂದು ಪ್ರಭುಕುಮಾರ್ ಹೇಳುತ್ತಿದ್ದಾರೆ.

ಪ್ಲಾಸ್ಟಿಕ್ ಹಾಸಿನ ಜೀವನ ಅಂತ್ಯಗೊAಡು ಹೊಸದಾದ ಸೂರು ದೊರಕಿದ ನೆಮ್ಮದಿಯಲ್ಲಿ ಬೋಜು ಮತ್ತು ಬೊಳ್ಳಚಿ ದಂಪತಿ ಇದ್ದಾರೆ.

ಪ್ರಭುಕುಮಾರ್ ಇದೀಗ ಈರ್ವರು ಮಕ್ಕಳಿರುವ ಮಹಿಳೆ ಯೋರ್ವರನ್ನು ಮರು ಮದುವೆ ಯಾಗಿದ್ದಾರೆ. ಅನುಸೂಯ ಮತ್ತು ಅಮೃತ, ಅಧಿತಿ ಅವರುಗಳನ್ನು ಕಳೆದುಕೊಂಡ ಶೋಕದಲ್ಲಿಯೂ ಜೀವನ ಸಾಗುತ್ತಿದೆ. ಆ ದುರಂತ ಎಂದಿಗೂ ಮನದಿಂದ ಮರೆಯ ಲಾಗದಂಥದ್ದು. ಯಾರಿಗೂ ಈ ಪರಿಸ್ಥಿತಿ ಬರುವುದು ಬೇಡ ಎಂದು ಪ್ರಭುಕುಮಾರ್ ನೋವಿನಿಂದ ಹೇಳುತ್ತಾರೆ. ಮನೆ ಮಣು ್ಣಪಾಲಾದ ಸ್ಥಳದಲ್ಲಿ ಪತ್ನಿ, ಪುತ್ರಿಯರ ಸ್ಮರಣೆಯಲ್ಲಿ ಹಲವಾರು ಸಸಿಗಳನ್ನು ಪ್ರಭುಕುಮಾರ್ ನೆಟ್ಟಿದ್ದು ಸಸಿ ಬೆಳೆಯುವುದನ್ನು ಕಂಡು ಸಮಧಾನಪಡುತ್ತಿದ್ದಾರೆ.

ದುರಂತ ಘಟನೆ, ಕುಟುಂಬವೇ ಮಣ್ಣು ಪಾಲಾದ ನೋವಿನ ನೆನಪುಗಳ ಮಧ್ಯೆಯೂ ಪ್ರಭುಕುಮಾರ್ ನಿಟ್ಟುಸಿರಿನೊಂದಿಗೆ ಬದುಕು ಸಾಗಿಸುತ್ತಿದ್ದಾರೆ.

‘ಎಲ್ಲ ಮರೆತಿರುವಾಗ.. ಹೂಡಿಬರದಿರು ಮತ್ತೆ ಹಳೆಯ ನೆನಪೇ ಎಂಬAತೆ..’ ಹಳೇ ನೆನಪುಗಳನ್ನು ಮರೆತು ಬಡವರಿಗೆ ಕೈಲಾದ ಸಹಾಯ ಮಾಡುತ್ತಾ ಹೊಸ ಜೀವನಕ್ಕೆ ಪ್ರಭು ಕುಮಾರ್ ಹೊಂದಿಕೊಳ್ಳುತ್ತಿದ್ದಾರೆ. ಇವರ ಆದರ್ಶ ಮಾದರಿಯಾಗಲಿ.