*ಗೋಣಿಕೊಪ್ಪಲು, ಜು. ೧೧: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಹಿರಿಯ ರಾಜಯೋಗಿನಿ ಬಿ.ಕೆ. ಮೀನಾಕ್ಷಿ ಅವರು ತಾ.೧೧ ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
೧೯೭೯ರಲ್ಲಿ ಗೋಣಿಕೊಪ್ಪ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದಲ್ಲಿ ಈಶ್ವರೀಯ ಜ್ಞಾನವನ್ನು ಪಡೆದುಕೊಂಡು ೧೯೮೧ರಿಂದ ಅನೇಕ ಶಾಖೆಯಲ್ಲಿ ಸೇವೆ ಸಲ್ಲಿಸಿ ೧೯೯೩ರಿಂದ ಸಂಪೂರ್ಣವಾಗಿ ಕೇರಳದ ಕಣ್ಣೂರಿನಲ್ಲಿ ಮುಖ್ಯ ಸಂಚಾಲಕಿಯಾಗಿ ಸೇವೆ ಸಲ್ಲಿಸಿದ್ದರು.
ತಾ.೧೭ರಂದು (ಇಂದು) ಬುಧವಾರ ಬೆಳಿಗ್ಗೆ ೯.೩೦ ರಿಂದ ೧೦.೩೦ ಗಂಟೆವರೆಗೆ, ಪಾರ್ಥಿವ ಶರೀರದ ಅಂತಿಮದರ್ಶನಕ್ಕೆ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಗೋಣಿಕೊಪ್ಪ ಶಾಖೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ನಂತರ ಸ್ವಗ್ರಾಮವಾದ ಚಿಕ್ಕಮಂಡೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಮೀನಾಕ್ಷಿ ಅವರ ನಿಧನಕ್ಕೆ ಮೈಸೂರು ವಲಯದ ಹಿರಿಯ ಸಂಚಾಲಕಿ ಬಿ.ಕೆ. ಲಕ್ಷಿö್ಮÃ, ಕೊಡಗು ವಲಯದ ಮುಖ್ಯ ಸಂಚಾಲಕಿ ಬಿ.ಕೆ ಗಾಯತ್ರಿ ಹಾಗೂ ಎಲ್ಲ ಬ್ರಹ್ಮಕುಮಾರಿಸ್ ಬಳಗದವರು ಸಂತಾಪ ವ್ಯಕ್ತಪಡಿಸಿದ್ದಾರೆ.