ಸೋಮವಾರಪೇಟೆ, ಜು.೧೧ : ತಾಲೂಕಿನ ಹುದುಗೂರು ಅರಣ್ಯ ವಲಯ ವ್ಯಾಪ್ತಿಯ ಯಡವನಾಡು ಮೀಸಲು ಅರಣ್ಯದಿಂದ ತೇಗದ ಮರವನ್ನು ಅಕ್ರಮವಾಗಿ ಕಡಿದು ಸಾಗಾಟಗೊಳಿಸುತ್ತಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಅರಣ್ಯ ಇಲಾಖೆ ಸಿಬ್ಬಂದಿಗಳು ಮೂವರನ್ನು ವಶಕ್ಕೆ ಪಡೆದಿದ್ದು, ಕಾರ್ಯಾಚರಣೆ ಸಂದರ್ಭ ಈರ್ವರು ಓಡಿ ಪರಾರಿಯಾಗಿದ್ದಾರೆ.
ಯಡವನಾಡು ಮೀಸಲು ಅರಣ್ಯ ವ್ಯಾಪ್ತಿಯ ಹುದುಗೂರು ಪೂರ್ವಗಸ್ತ್ತು ಸ್ಥಳದಲ್ಲಿದ್ದ ತೇಗದ ಮರವನ್ನು ಕಡಿದು ಪಿಕ್‌ಅಪ್ ವಾಹನ (ಕೆ.ಎ.೪೫- ೬೫೪೮)ದಲ್ಲಿ ಸಾಗಾಟಗೊಳಿಸುತ್ತಿದ್ದ ಸಂದರ್ಭ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖಾ ಸಿಬ್ಬಂದಿಗಳು, ಯಡವನಾಡು ಗ್ರಾಮ ನಿವಾಸಿಗಳಾದ ತೀರ್ಥಾನಂದ ಅಲಿಯಾಸ್ ಸಂತೋಷ್, ತೀರ್ಥಾನಂದ್ ಬಿ.ಸಿ., ಕೆ.ಜೆ. ಯತೀಶ್ ಅವರನ್ನು ವಾಹನ ಸಹಿತ ವಶಕ್ಕೆ ಪಡೆದಿದ್ದಾರೆ.
ಈ ಸಂದರ್ಭ ಶರತ್ ಹಾಗೂ ವಿನುಕುಮಾರ್ ಎಂಬವರುಗಳು ಸ್ಥಳದಿಂದ ಓಡಿ ಪರಾರಿಯಾಗಿದ್ದಾರೆ. ಪಿಕ್‌ಅಪ್ ವಾಹನ ಪಿರಿಯಾಪಟ್ಟಣ ಮೂಲದ ಶಾಹಿಕ್ ಅಹಮ್ಮದ್ ಅವರಿಗೆ ಸೇರಿದ್ದು, ಕಳೆದೆರಡು ವರ್ಷಗಳ ಹಿಂದೆ ಯಡವನಾಡಿನ ವಿನುಕುಮಾರ್ ಖರೀದಿಸಿದ್ದರೂ ದಾಖಲಾತಿಗಳನ್ನು ಮಾಡಿಸಿ ಕೊಂಡಿರಲಿಲ್ಲ. ಈ ಹಿನ್ನೆಲೆ ವಾಹನದ ಮಾಲೀಕರ ವಿರುದ್ಧವೂ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ.
ಮೀಸಲು ಅರಣ್ಯದಿಂದ ಸಾಗಾಟಗೊಳ್ಳುತ್ತಿದ್ದ ತೇಗದ ಮರದ ನಾಟಾಗಳ ಸಹಿತ ಪಿಕ್‌ಅಪ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಎಸಿಎಫ್ ಗೋಪಾಲ್ ಹಾಗೂ ವಲಯ ಅರಣ್ಯಾಧಿಕಾರಿ ಚೇತನ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹುದುಗೂರು ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಸತೀಶ್, ವನಪಾಲP Àರಾದ ಭೀಮಣ್ಣ, ಸಿದ್ದರಾಜು, ಚೇತನ್, ಅರಣ್ಯ ವೀಕ್ಷಕರಾದ ಡೀಲಾಕ್ಷ, ದೀಕ್ಷಿತ್, ಸಂತೋಷ್ ಅವರುಗಳು ಭಾಗವಹಿಸಿದ್ದರು.