ಸುಂಟಿಕೊಪ್ಪ, ಜು. ೧೧: ಸುಂಟಿಕೊಪ್ಪ ಟಿಂಬರ್ ಮರ್ಚೆಂಟ್ ಯೂನಿಯನ್ ನೂತನ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಅಧ್ಯಕ್ಷರಾಗಿ ಪಿ.ಎಂ. ಲತೀಫ್ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಅಜೇಸ್ ನಾಕೂರು ಹಾಗೂ ಇಬ್ರಾಹಿಂ, ಕಾರ್ಯದರ್ಶಿಯಾಗಿ ಪಿ.ಸಿ. ಮೋಹನ್, ಜಂಟಿ ಕಾರ್ಯದರ್ಶಿಯಾಗಿ ಶರೀಫ್ ಹಾಗೂ ವಿಶ್ವನಾಥ್, ಖಜಾಂಚಿಯಾಗಿ ಅಬ್ದುಲ್ ಮಾನು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಟಿಂಬರ್ ಕೂಲಿ ಕಾರ್ಮಿಕರಿಗೆ ನ್ಯಾಯಯುತ ವೇತನ ನೀಡಲು ತೀರ್ಮಾನಿಸಲಾಯಿತು. ಅಲ್ಲದೆ ಟಿಂಬರ್ ಮರ್ಚೆಂಟ್ ಯೂನಿಯನ್‌ನ ಪದಾಧಿಕಾರಿಗಳು ೫ ಮಂದಿ ಟಿಂಬರ್ ಲೋರ‍್ಸ್ನ ಸದಸ್ಯರುಗಳಿಗೆ ತಮ್ಮ ಖರ್ಚಿನಲ್ಲಿ ವಿಮಾ ಸೌಲಭ್ಯ ಮಾಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.