ಗೋಣಿಕೊಪ್ಪ ವರದಿ, ಜು. ೧೧: ಹರ್ಡಲ್ಸ್ನಲ್ಲಿ ಏಷಿಯನ್ ಗೇಮ್ಸ್ಗೆ ಆಯ್ಕೆಯಾಗಿರುವ ತೀತರಮಾಡ ಸಿಂಚಲ್ ಕಾವೇರಮ್ಮ ಅವರನ್ನು ವೀರಾಜಪೇಟೆ ತಾಲೂಕು ದೈಹಿಕ ಶಿಕ್ಷಕರ ಸಂಘ ಹಾಗೂ ಕೊಡಗು ಜಿಲ್ಲಾ ಶಿಕ್ಷಕರ ಸಂಘದ ವತಿಯಿಂದ ನಲ್ಲೂರು ಗ್ರಾಮದಲ್ಲಿರುವ ಅವರ ಮನೆಯಲ್ಲಿ ಸನ್ಮಾನಿಸಲಾಯಿತು.
೪೦೦ ಮೀ. ಹರ್ಡಲ್ಸ್ನಲ್ಲಿ ಉತ್ತಮ ಸಾಧನೆ ಮಾಡಿರುವುದು ಜಿಲ್ಲೆಗೆ ಕೀರ್ತಿ ತಂದಿದೆ. ತರಬೇತುದಾರ ಬೊಳ್ಳಂಡ ಅಯ್ಯಪ್ಪ ಅವರ ಶ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಲಾಯಿತು.
ಈ ಸಂದರ್ಭ ಸಿಂಚಲ್ ಕಾವೇರಮ್ಮ ಅವರ ಪಾಲಕರಾದ ತೀತರಮಾಡ ರವಿ ಮುದ್ದಪ್ಪ, ತಾಯಿ ರಶ್ಮಿ, ಸಂಘದ ಅಧ್ಯಕ್ಷ ಕೆ.ಆರ್. ಸುಬ್ಬಯ್ಯ, ಕಾರ್ಯದರ್ಶಿ ತಮ್ಮಯ್ಯ, ಕೊಡಗು ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಎ. ಪ್ರವೀಣ, ಕಾರ್ಯದರ್ಶಿ ತಿರುನೆಲ್ಲಿಮಾಡ ರಮಾನಂದ ಇದ್ದರು.