ಸಂಪಾಜೆ, ಜು. ೧೧: ವಲಯದ ದಬ್ಬಡ್ಕ ಉಪ ವಲಯದ, ಪಟ್ಟಿಘಾಟ್ ಮೀಸಲು ಅರಣ್ಯದಲ್ಲಿ, ಕಾಡು ಪ್ರಾಣಿ ಬೇಟೆಯಾಡಿದ, ಮದನ್ ಕುಮಾರ್ ಹೊಸೂರು, ಪಾನೇಡ್ಕ ಗಣಪತಿ ಹಾಗೂ ಪ್ರಸನ್ನ ಠಿಚಿಟಿeಜಞಚಿ ಇವರ ಮನೆಗೆ ಅರಣ್ಯ ಇಲಾಖಾಧಿಕಾರಿಗಳು ದಾಳಿ ಮಾಡಿ ಮಾಂಸ ಮತ್ತು ಕೋವಿಯನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ತಲೆಮರೆಸಿಕೊಂಡಿದ್ದು, ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ ಮಧು ಸೂದನ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಉಪ ವಲಯ ಅರಣ್ಯ ಅಧಿಕಾರಿ ನಿಸಾರ್ ಮಹಮ್ಮದ್, ಗಸ್ತು ಅರಣ್ಯ ಪಾಲಕರಾÀದ ಚಂದ್ರಪ್ಪ ಬಣಕಾರ್, ಕಾರ್ತಿಕ್ ಡಿ, ಸಿಬ್ಬಂದಿಗಳಾದ ಮನೋಜ್, ದುರ್ಗಾ ಪ್ರಸಾದ್, ಗಗನ್, ಶರತ್, ಶಂಕರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.