ಶನಿವಾರಸAತೆ, ಜು. ೧೧: ಸಮೀಪದ ಹಂಡ್ಲಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರಪೇಟೆ ತಾಲೂಕು ಆಡಳಿತ ಕಂದಾಯ ಇಲಾಖೆ ವತಿಯಿಂದ ತಾ.೧೨ ರಂದು (ಇಂದು) ಬೆಳಿಗ್ಗೆ ೧೧ ಗಂಟೆಯಿAದ ಮಧ್ಯಾಹ್ನ ೧ ಗಂಟೆಯವರೆಗೆ ಹಂಡ್ಲಿ ವೃತ್ತಕ್ಕೆ ಸಂಬAಧಪಟ್ಟAತೆ ಪೌತಿ ಖಾತೆ ಆಂದೋಲನ ನಡೆಯಲಿದೆ.
ಪೌತಿ ಖಾತೆ ಸಂಬAಧ ಖಾತೆದಾರರ ಮರಣ ದೃಢೀಕರಣ ಪತ್ರ, ಆರ್.ಡಿ.ಸಂಖ್ಯೆಯ ವಂಶವೃಕ್ಷ ಧೃಢೀಕರಣ ಪತ್ರ, ಚಾಲ್ತಿ ಸಾಲಿನ ಪಹಣಿ, ಅರ್ಜಿದಾರರ ಆಧಾರ ಪ್ರತಿಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಗ್ರಾಮಸ್ಥರು ಈ ಪೌತಿ ಖಾತೆ ಆಂದೋಲನದಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳುವಂತೆ ಗ್ರಾಮ ಆಡಳಿತ ಅಧಿಕಾರಿ ಶ್ವೇತಶ್ರೀ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.