ಮಡಿಕೇರಿ, ಜು. ೧೨: ಮಡಿಕೇರಿ ಕಾನೂನು ಮಾಪನಶಾಸ್ತç ಇಲಾಖೆ ವತಿಯಿಂದ ತಾತ್ಕಾಲಿಕ ಸತ್ಯಾಪನೆ ಮುದ್ರೆ ಶಿಬಿರವನ್ನು ತಾ. ೧೩ ರಿಂದ ತಾ.೨೧ ರವರೆಗೆ ಶ್ರೀಮಂಗಲದ ಮಣಿ ಕಾಂಪ್ಲೆಕ್ಸ್ ನಾಲ್ಕೇರಿ ಜಂಕ್ಷನ್‌ನಲ್ಲಿ ಏರ್ಪಡಿಸಲಾಗಿದೆ. ಸಾರ್ವಜನಿಕರು ತಮ್ಮಲ್ಲಿ ಉಪಯೋಗಿಸುವ ಅಳತೆ, ತೂಕ ಮತ್ತು ತೂಕದ ಸಾಧನಗಳನ್ನು ಹಾಜರುಪಡಿಸಿ ಸತ್ಯಾಪನೆ ಮುದ್ರೆ ಮಾಡಿಸಲು ತಿಳಿಸಲಾಗಿದೆ.