ಕುಶಾಲನಗರ, ಜು. ೧೧: ೧೧ ತಿಂಗಳ ಹಿಂದೆ ಹೆದ್ದಾರಿ ರಸ್ತೆ ಬದಿಯಲ್ಲಿ ಹೋಗುತ್ತಿದ್ದ ಭಿಕ್ಷುಕನೊಬ್ಬನಿಗೆ ಅಪಘಾತ ಮಾಡಿ ಪರಾರಿಯಾಗಿದ್ದ ದ್ವಿಚಕ್ರ ವಾಹನ ಮಾಲೀಕರನ್ನು ಪತ್ತೆ ಹಚ್ಚುವಲ್ಲಿ ಕುಶಾಲನಗರ ಸಂಚಾರಿ ಪೊಲೀಸ್ ಯಶಸ್ವಿಯಾಗಿದ್ದಾರೆ.
ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಕುಶಾಲನಗರ ಮಡಿಕೇರಿ ರಸ್ತೆಯ ಹೆದ್ದಾರಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಭಿಕ್ಷುಕನೊಬ್ಬನಿಗೆ (೮೫) ಅಪರಿಚಿತ ದ್ವಿಚಕ್ರ ವಾಹನ ಡಿಕ್ಕಿಯಾಗಿ ಆತನನ್ನು ಆಟೋವೊಂದರಲ್ಲಿ ಆಸ್ಪತ್ರೆಗೆ ಕಳುಹಿಸಿ ನಂತರ ದ್ವಿಚಕ್ರ ವಾಹನದಲ್ಲಿದ್ದ ದಂಪತಿ ಪರಾರಿ ಆಗುವಲ್ಲಿ ಯಶಸ್ವಿಯಾಗಿದ್ದರು.
ಈ ಪ್ರಕರಣ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿ ಸಂಚಾರಿ ಪೊಲೀಸರಿಗೆ ಆರೋಪಿಯನ್ನು ಪತ್ತೆ ಹಚ್ಚುವ ಕೆಲಸ ತಲೆನೋವಾಗಿ ಪರಿಣಮಿಸಿತ್ತು. ತೀವ್ರ ಗಾಯಗೊಂಡಿದ್ದ ಭಿಕ್ಷುಕನನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿ ನಂತರ ಆತನನ್ನು ಹೊಸಕೋಟೆ ಬಳಿಯ ವಿಕಾಸ್ ಜನ ಸೇವಾ ಟ್ರಸ್ಟ್ ಅನಾಥ ಆಶ್ರಮಕ್ಕೆ ಸೇರಿಸಲಾಗಿತ್ತು.
ಅಪಘಾತ ಮಾಡಿ ಪರಾರಿಯಾದ ದಂಪತಿ ಸುಳಿವು ಪತ್ತೆಗೆ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯ ಹೆಡ್ ಕಾನ್ಸೆ÷್ಟÃಬಲ್ ಸಿದ್ದಾರ್ಥ ಅವರು ಕಳೆದ ೧೦ ತಿಂಗಳಿAದ ಹುಡುಕಾಟ ನಡೆಸಿದ್ದರು. ಕುಶಾಲನಗರದಿಂದ ಸುಂಠಿಕೊಪ್ಪ ತನಕ ಸುಮಾರು ೨೦ಕ್ಕೂ ಅಧಿಕ ಸಿಸಿ ಕ್ಯಾಮೆರಾಗಳ ದೃಶ್ಯಗಳನ್ನು ಆಧರಿಸಿ ಇದೀಗ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಹೆಡ್ ಕಾನ್ಸೆ÷್ಟÃಬಲ್ ಸಿದ್ಧಾರ್ಥ ಯಶಸ್ವಿಯಾಗಿದ್ದಾರೆ.
ಅಪಘಾತ ಮಾಡಿ ನಂತರ ಪರಾರಿಯಾಗಿದ್ದ ಸುಂಟಿಕೊಪ್ಪದ ಅರ್ಚಕರಾದ ದರ್ಶನ್ ದಂಪತಿ ಯನ್ನು ವಿಚಾರಣೆಗೆ ಒಳಪಡಿಸಿದ ಸಂದರ್ಭ ಅವರು ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಅಪಘಾತ ಮಾಡಿದ ವಾಹನವನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಸಿ ಸಿ ಕ್ಯಾಮೆರಾದಲ್ಲಿ ಕಂಡು ಬಂದ ದೃಶ್ಯಗಳನ್ನು ಆಧರಿಸಿ ಸಿದ್ಧಾರ್ಥ ಅವರು ತನಿಖೆ ಕೈಗೊಂಡಿದ್ದರು ಎಂದು ಸಂಚಾರಿ ವಿಭಾಗದ ಠಾಣಾಧಿಕಾರಿ ಗೀತಾ ತಿಳಿಸಿದ್ದಾರೆ. ಪ್ರಕರಣ ದಾಖಲಾದ ಬೆನ್ನಲ್ಲೇ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಸೋಮವಾರಪೇಟೆ ಉಪವಿಭಾಗದ ಡಿವೈಎಸ್ಪಿ ಗಂಗಾಧರಪ್ಪ ಮತ್ತು ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಅಪಘಾತ ನಡೆದ ದಿನ ಬೈಕ್ನಲ್ಲಿ ದರ್ಶನ್ ದಂಪತಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಕುಶಾಲನಗರ-ಹಾರಂಗಿ-ಅತ್ತೂರು-ಗುಡ್ಡೆಹೊಸೂರು ಮೂಲಕ ಸುಂಟಿಕೊಪ್ಪಕ್ಕೆ ನಂತರ ಅಲ್ಲಿನ ಮಧುರಮ್ಮ ಬಡಾವಣೆಗೆ ತೆರಳಿದ ದೃಶ್ಯಗಳು ರಸ್ತೆ ಬದಿಯಲ್ಲಿದ್ದ ಕಟ್ಟಡಗಳ ಸುಮಾರು ೨೦ಕ್ಕೂ ಅಧಿಕ ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ತನಿಖೆ ಸಂದರ್ಭ ಬೆಳಕಿಗೆ ಬಂದಿದೆ.
ಅಪಘಾತ ನಂತರ ದ್ವಿಚಕ್ರವಾಹನ ವನ್ನು ಆರೋಪಿಗಳು ಬೇರೊಬ್ಬರಿಗೆ ಮಾರಾಟ ಮಾಡಿದ್ದು ಅಪಘಾತಕ್ಕೆ ಸಂಬAಧಿಸಿದ ವಾಹನವನ್ನು (ಏಂ೧೨U೯೧೨೪) ಕುಶಾಲನಗರ ಸಂಚಾರಿ ವಿಭಾಗದ ಪೊಲೀಸರು ವಶಪಡಿಸಿಕೊಂಡು ಕ್ರಮ ಕೈಗೊಂಡಿದ್ದಾರೆ. - ಸಿಂಚು