ಕುಶಾಲನಗರ, ಜು. ೧೧: ಹಾರಂಗಿ ಯೋಜನಾ ವೃತ್ತದ ಅಣೆಕಟ್ಟು ವಿಭಾಗದ ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ ಕಚೇರಿಗಳು ಮತ್ತು ವಸತಿಗೃಹಗಳ ನಿರ್ವಹಣೆಗೆ ಸರಕಾರದಿಂದ ಯಾವುದೇ ರೀತಿಯ ಅನುದಾನಗಳು ಲಭಿಸುತ್ತಿಲ್ಲ ಎಂದು ಹಾರಂಗಿ ಅಣೆಕಟ್ಟು ವಿಭಾಗದ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
‘ಶಕ್ತಿ’ಯಲ್ಲಿ ಪ್ರಕಟಗೊಂಡ ವರದಿಗೆ ಸಂಬAಧಿಸಿದAತೆ ‘ಶಕಿ’್ತಯೊಂದಿಗೆ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಿಂದ ಕಟ್ಟಡ ನಿರ್ವಹಣೆಗೆ ಯಾವುದೇ ರೀತಿಯ ಅನುದಾನಗಳು ಲಭಿಸುತ್ತಿಲ್ಲ. ಹಿಂದೆ ವಾರ್ಷಿಕ ತಲಾ ೪೦ ರಿಂದ ೫೦ ಲಕ್ಷದಷ್ಟು ರೂಗಳ ಅನುದಾನ ಲಭಿಸುತ್ತಿತ್ತು. ಈ ಹಿನ್ನಲೆಯಲ್ಲಿ ೨೫೦ ಕ್ಕೂ ಅಧಿಕ ಕಟ್ಟಡಗಳು ನಿರ್ವಹಣೆಯ ಕೊರತೆ ಎದುರಿಸುತ್ತಿವೆ. ಕೆಲವು ಕಟ್ಟಡಗಳು ಪಾಳು ಬಿದ್ದಿದ್ದು ಹಾನಿಗೊಳಗಾಗಿದೆ ಎಂದು ಮಾಹಿತಿ ಒದಗಿಸಿದ್ದಾರೆ.
ಅಣೆಕಟ್ಟು ವಿಭಾಗದ ವಸತಿಗೃಹಗಳಲ್ಲಿ ಅನ್ಯರು ವಾಸಿಸುತ್ತಿದ್ದಾರೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿರುವ ಪುಟ್ಟಸ್ವಾಮಿ ಅವರು ಈ ಬಗ್ಗೆ ಈಗಾಗಲೇ ಮಡಿಕೇರಿ ಕ್ಷೇತ್ರದ ಶಾಸಕರು ಪರಿಶೀಲನೆಗೆ ಸೂಚನೆ ನೀಡಿದ್ದಾರೆ. ಈ ಸಂಬAಧ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರ ಉಪಸ್ಥಿತಿಯಲ್ಲಿ ತಾ. ೧೭ರಂದು ಅಣೆಕಟ್ಟು ವಿಭಾಗದ ಅಧಿಕಾರಿಗಳು ನೌಕರರ ಸಭೆ ಕರೆಯಲಾಗಿದೆ. ಪ್ರತಿ ವಸತಿಗೃಹಗಳ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲನೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.