ಮಡಿಕೇರಿ, ಜು. ೧೧: ಕೊಡಗು ಜಿಲ್ಲಾ ಪಂಚಾ ಯತ್ ನೂತನ ಮುಖ್ಯ ಕಾರ್ಯ ನಿರ್ವಹಣಾಧಿಕಾ ರಿಯಾಗಿ ವರ್ಣಿತ್ ನೇಗಿ ಅವರು ಮಂಗಳವಾರ ಅಧಿಕಾರ ವಹಿಸಿ ಕೊಂಡರು. ವರ್ಣಿತ್ ನೇಗಿ ಅವರು ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಿ.ಪಂ. ಸಿಇಒ, ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ಜಂಟಿ ನಿರ್ದೇಶಕರಾಗಿ, ಹುಣಸೂರಿನಲ್ಲಿ ಉಪ ವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಛತ್ತೀಸ್ಗಢ ಮೂಲದವರಾದ ವರ್ಣಿತ್ ನೇಗಿ ಅವರು ಸುರತ್ಕಲ್ ಎಂಜಿನಿ ಯರಿಂಗ್ ಕಾಲೇಜಿನಲ್ಲಿ ಬಿಟೆಕ್ (ಸಿವಿಲ್) ಪದವಿ ಪಡೆದಿದ್ದಾರೆ.