ಮಡಿಕೇರಿ, ಜು. ೧೧: ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರು ತಮ್ಮ ೪೯ನೇ ಜನ್ಮದಿನವನ್ನು ಶಾಲಾ ಮಕ್ಕಳೊಂದಿಗೆ ಸಂಭ್ರಮದಿAದ ಆಚರಿಸಿದರು.
ಭಾಗಮಂಡಲದ ಕೋರಂಗಾಲ ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ ೫೫೦ಕ್ಕೂ ಅಧಿಕ ಬಡಮಕ್ಕಳು, ಅಧ್ಯಾಪಕ ವೃಂದ, ಪೋಷಕರು ಹಾಗೂ ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದರು. ವಸತಿ ಶಾಲೆಯ ಕುಂದು ಕೊರತೆಗಳ ಬಗ್ಗೆ ಚರ್ಚಿಸಿದ ಶಾಸಕರು ಅಗತ್ಯ ಸಹಕಾರ ನೀಡುವ ಭರವಸೆ ನೀಡಿದರು. ವಸತಿ ಶಾಲೆಯಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಪಟ್ಟಿಯನ್ನು ಪ್ರಾಂಶುಪಾಲ ಲೋಕೇಶ್ ಅವರು ಪೊನ್ನಣ್ಣ ಅವರಿಗೆ ನೀಡಿದರು. ಈ ಸಂದರ್ಭ ೨೦೨೨-೨೩ನೇ ಸಾಲಿನಲ್ಲಿ ಪ್ರೌಢಶಾಲೆ ಮತ್ತು ಕಾಲೇಜ್‌ನಲ್ಲಿ ಶೇ. ೧೦೦ ರಷ್ಟು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ, ಶ್ರಮಿಸಿದ ಶಿಕ್ಷಕ ವೃಂದ ಹಾಗೂ ಪ್ರಾಂಶುಪಾಲರಿಗೆ ಗೌರವಿಸಲಾಯಿತು. ಹಿರಿಯ ಮುಖಂಡರಾದ ಸಂಕೇತ್ ಪೂವಯ್ಯ, ಬೇಕಲ್ ರಮಾನಾಥ್, ಇಸ್ಮಾಯಿಲ್, ಸುನೀಲ್ ಪತ್ರವೋ, ದೇವಗೋಂಡಿ ಹರ್ಷ, ಕುಯ್ಯಿಮುಡಿ ಮನೋಜ್ ಕುಮಾರ್, ದೇವಗೋಂಡಿ ತಿಲಕ ಸುಬ್ರಾಯ, ಅಬ್ದುಲ್ ಲತೀಫ್, ಕೆದಂಬಾಡಿ ಸುರೇಂದ್ರ, ಪಂಚಾಯತಿ ಉಪಾಧ್ಯಕ್ಷ ವಿಶು ಪ್ರವೀಣ್ ಕುಮಾರ್, ಕೆ.ಟಿ. ರಮೇಶ್, ಕೆ.ಎಂ. ಹರೀಶ್, ಮಂಗೇರಿರ ಜಗದೀಶ್, ಮಂದೋಡಿ ಶಿವಕುಮಾರ್, ಕೀರ್ತಿ ಉತ್ತಪ್ಪ, ಮುಕ್ಕಾಟಿ ಗಣೇಶ್, ಬಶೀರ್ ಚೇರಂಬಾಣೆ, ನಿಡ್ಯಮಲೆ ದಾಮೋದರ, ಶರತ್ ಭಾಗಮಂಡಲ, ಬಶೀರ್, ನೌಫಲ್, ಶಬರೀಶ್ ಕೆ., ಸಾಬು ತಿಮ್ಮಯ್ಯ, ಬಿ.ಎನ್. ರಂಗಪ್ಪ, ಬಾಲಚಂದ್ರ ನಾಯರ್ ಕರಿಕೆ, ದೇವಂಗೋಡಿ ಯೋಗೇಂದ್ರ, ವಿಶ್ವಪಾಲ, ಅಶೋಕ, ಪೋಷಕರು, ಗ್ರಾಮಸ್ಥರು ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.
ಪ್ರಾಂಶುಪಾಲ ಲೋಕೇಶ್ ಸ್ವಾಗತಿಸಿ, ಶಿಕ್ಷಕ ರಘು ನಿರೂಪಿಸಿ, ವಿಜ್ಞಾನ ಶಿಕ್ಷಕ ರೋಹಿತ್ ವಂದಿಸಿದರು. ಸಮಾಜ ವಿಜ್ಞಾನ ಶಿಕ್ಷಕ ಪ್ರವೀಣ್ ಪೂಜಾರಿ ವÀರದಿ ವಾಚಿಸಿದರು.