ಸೋಮವಾರಪೇಟೆ, ಜು. ೧೨: ತಾಲೂಕಿನ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೌತಿ ಖಾತೆ ಆಂದೋಲನ ತಾ. ೧೩ರಂದು (ಇಂದು) ಪೂರ್ವಾಹ್ನ ೧೧ ಗಂಟೆಯಿAದ ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಲಿದೆ.

ಅಂತೆಯೇ ಹಾನಗಲ್ಲು ಗ್ರಾಮ ಪಂಚಾಯಿತಿಯ ಪೌತಿ ಖಾತೆ ಆಂದೋಲನ ತಾ. ೧೭ರಂದು ಗ್ರಾ.ಪಂ. ಸಭಾಂಗಣದಲ್ಲಿ, ತಾ. ೨೧ ರಂದು ಐಗೂರು ಗ್ರಾ.ಪಂ. ವ್ಯಾಪ್ತಿಯ ಪೌತಿ ಖಾತೆ ಆಂದೋಲನ ಪಂಚಾಯಿತಿ ಸಭಾಂಗಣದಲ್ಲಿ ಹಾಗೂ ತಾ. ೨೭ರಂದು ನೇರುಗಳಲೆ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಲಿದೆ ಎಂದು ಕಂದಾಯ ಇಲಾಖೆಯ ಶ್ವೇತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೌತಿ/ ವಾರಿಸುದಾರಿಕೆ ಖಾತೆ ಸಂಬAಧ ಖಾತೆದಾರರ ಮರಣ ದೃಢೀಕರಣ ಪತ್ರ, ಆರ್ಡಿ ಸಂಖ್ಯೆಯ ವಂಶವೃಕ್ಷ ದೃಢೀಕರಣ ಪತ್ರ, ಚಾಲ್ತಿ ಸಾಲಿನ ಪಹಣಿ ಜೊತೆಗೆ ಕಲಂ ೧೦ರಲ್ಲಿ ದಾಖಲಾಗಿರುವ ಮ್ಯೂಟೇಷನ್ ಪ್ರತಿ/ಜಮಾಬಂಧಿ ಹಾಗೂ ಆಧಾರ್ ಪ್ರತಿ ಮತ್ತು ದೂರವಾಣಿ ಸಂಖ್ಯೆ ಹಾಜರುಪಡಿಸಬೇಕೆಂದು ತಿಳಿಸಿದ್ದಾರೆ.