ಶನಿವಾರಸಂತೆ, ಜು. ೧೨: ಸಮೀಪದ ಕೆರಗನ ಹಳ್ಳಿ ಗ್ರಾಮದಲ್ಲಿ ಕೆರೆ ಹಾಗೂ ಸ್ಮಶಾನಕ್ಕೆ ಮೀಸಲಿಟ್ಟಂತಹ ಜಾಗದ ಒತ್ತುವರಿ ತೆರವುಗೊಳಿಸುವಂತೆ ಗ್ರಾಮಸ್ಥರು ಕಂದಾಯ ಇಲಾಖೆ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.

ಗ್ರಾಮದಲ್ಲಿ ಸರ್ವೆ ನಂ. ೧೩೧ ರಲ್ಲಿ ಗೌರಿಕಟ್ಟೆ ಸ್ಮಶಾನ ಮತ್ತು ಸರ್ವೆ ನಂ. ೧೨೫ ರಲ್ಲಿ ಗೌರಿಕಟ್ಟೆ ಕೆರೆ ಎಂದು ಪಹಣಿಯಲ್ಲಿ ಸಂಬAಧಪಟ್ಟ ಇಲಾಖೆ ಮೀಸಲಿರಿಸಿದೆ.

ಈ ಜಾಗ ಒತ್ತುವರಿ ಯಾಗಿರುವುದರಿಂದ ಜಾನು ವಾರುಗಳಿಗೆ ನೀರು ಕುಡಿಯಲು ಮತ್ತು ಕೆಳಭಾಗದಲ್ಲಿರುವ ಗದ್ದೆಗಳಲ್ಲಿ ಕೃಷಿ ಮಾಡಲು ಅನಾನು ಕೂಲವಾಗಿದೆ. ಸ್ಮಶಾನದ ಬಳಕೆಗೂ ತೊಂದರೆಯಾಗಿದೆ. ಈ ಒತ್ತುವರಿಯನ್ನು ತೆರವುಗೊಳಿಸಿ ಉದ್ದೇಶಿತ ಬಳಕೆಗೆ ಅವಕಾಶ ಮಾಡಿಕೊಡುವಂತೆ ಗ್ರಾಮಸ್ಥರು ಮುಖ್ಯಮಂತ್ರಿ, ರಾಜ್ಯ ಕಾರ್ಯದರ್ಶಿ, ತಹಶೀಲ್ದಾರ್, ಜಿಲ್ಲಾಧಿಕಾರಿ ಹಾಗೂ ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ.

ಕೆರೆ ಒತ್ತುವರಿಯಿಂದ ಕೆಳಭಾಗದಲ್ಲಿ ಇರುವ ಗದ್ದೆಗಳಿಗೆ ತೆರಳಲು ದಾರಿ ಇಲ್ಲದಂತಾಗಿದೆ. ಸ್ಮಶಾನ ಬಳಕೆಗೂ ತೊಂದರೆ ಯಾಗಿದೆ. ಆದ್ದರಿಂದ ಸಂಬAಧಪಟ್ಟ ಇಲಾಖೆಯವರು ಶೀಘ್ರವಾಗಿ ಈ ಒತ್ತುವರಿಯನ್ನು ತೆರವುಗೊಳಿಸುವಂತೆ ಗ್ರಾಮಸ್ಥರ ಪರವಾಗಿ ಕೆರಗನಹಳ್ಳಿ ಮುಖಂಡರಾದ ಕೆ.ಎಲ್. ಲೋಕೇಶ್, ಕೆ.ಜೆ. ವಸಂತ್, ಕೆ.ಎ. ದೇವೇಗೌಡ, ಇತರರು ಹಾಗೂ ಗ್ರಾಮ ಪ್ರಮುಖರು ಮನವಿಯಲ್ಲಿ ಒತ್ತಾಯಿಸಿದ್ದಾರೆ.