ಪೊನ್ನಂಪೇಟೆ, ಜು. ೧೦: ಮಂಗಳೂರಿನ ಮಿಸೆಸ್ ಇಂಡಿಯಾ ವತಿಯಿಂದ ನಡೆದ ೪ನೇ ಆವೃತ್ತಿಯ ಸೌಂದರ್ಯ ಸ್ಪರ್ಧೆಯ ಬೆಸ್ಟ್ ಪರ್ಸನಾಲಿಟಿ ವಿಭಾಗದಲ್ಲಿ ಕೊಡಗು ಜಿಲ್ಲೆಯಿಂದ ಭಾಗವಹಿಸಿದ ಏಕೈಕ ಸ್ಪರ್ಧಿ ಚಂದ್ರಿಕಾ ಮಂಜುನಾಥ್ ಅತ್ಯುತ್ತಮ ವ್ಯಕ್ತಿತ್ವ ಪ್ರಶಸ್ತಿಯನ್ನು ತಮ್ಮದಾಗಿಸಿ ಕೊಂಡಿದ್ದಾರೆ.

ಪಾತ್ ವೇ ಎಂಟರ್‌ಪ್ರೈಸಸ್, ಮರ್ಸಿ ಬ್ಯೂಟಿ ಅಕಾಡೆಮಿ ಹಾಗೂ ಲೇಡಿಸ್ ಸಲೂನ್, ಪ್ರತಿಭಾ ಸೌನ್ಶಿಮಠ್ ಇನಿಶಿಯೇಟಿವ್ ಸಹ ಯೋಗದಲ್ಲಿ ಇತ್ತೀಚಿಗೆ ಮಂಗಳೂರಿ ನಲ್ಲಿ ನಡೆದ ಸ್ಪರ್ಧೆಯಲ್ಲಿ ಚಂದ್ರಿಕಾ ಮಂಜುನಾಥ್ ಅವರು ಭಾಗವಹಿಸಿ ಸ್ಥಾನಗಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ರಾಯಭಾರಿ ನಂದಿನಿ ನಾಗರಾಜ್, ಮಿಸೆಸ್ ಇಂಡಿಯಾ ಕರ್ನಾಟಕ ನಿರ್ದೇಶಕರಾದ ಪ್ರತಿಭಾ ಸೌನ್ಶಿಮಠ್, ಮಿಸೆಸ್ ಇಂಡಿಯಾ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕರಾದ ದೀಪಕ್ ಗಂಗೂಲಿ ಹಾಗೂ ಮರ್ಸಿ ಅಕಾಡೆಮಿಯ ವೀಣಾ ಡಿಸೋಜಾ ಮೊದಲಾದವರು ಇದ್ದರು. ಸ್ಪರ್ಧೆಯ ಜೂರಿಯಾಗಿ ಕೊಡಗಿನ ಕೊಣಿಯಂಡ ಕಾವ್ಯ ಸಂಜು ಸೋಮಯ್ಯ ಕಾರ್ಯನಿರ್ವಹಿಸಿ ದರು. ಚಂದ್ರಿಕಾ ಮಂಜುನಾಥ್ ಅವರು ಪೊನ್ನಂಪೇಟೆಯ ಕೂರ್ಗ್ ಇನ್ಟಿ÷್ಸಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮಿಷಿನ್ ಲರ್ನಿಂಗ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.