ಇಂದು ರಾಷ್ಟಿçÃಯ ಸರಳತೆಯ ದಿನ. ಅಮೇರಿಕನ್ ತತ್ತ÷್ವಜ್ಞಾನಿ, ಬರಹಗಾರ, ಕವಿ, ಇತಿಹಾಸಕಾರ, ಸಮೀಕ್ಷಕ ಮತ್ತು ಸರಳ ಜೀವನದ ಪ್ರತಿಪಾದಕ ಹೆನ್ರಿ ಡೇವಿಡ್ ಥೋರೋ ಅವರ ಜನ್ಮದಿನ ೧೮೧೭ ಜುಲೈ ೧೨. ಅದರ ಸವಿನೆನಪಿಗಾಗಿ ಪ್ರತಿ ವರ್ಷ ಇಂದಿನ ದಿನವನ್ನು ಸರಳತೆಯ ತತ್ತ÷್ವವನ್ನು ಸಾರುವ ದಿನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಥೋರೋ ಅವರ ಪ್ರಸಿದ್ಧ ಪ್ರಬಂಧ ಸಂಕಲನ ವಾಲ್ಡೆನ್ ಸರಳತೆಯ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಶ್ರೇಷ್ಠ ವಿಜ್ಞಾನಿ ಸರ್ ಐಸಾಕ್ ನ್ಯೂಟನ್ ಅವರು "ಪ್ರಕೃತಿ ಸರಳತೆಯಿಂದ ಸಂತೋಷವಾಗಿದೆ" ಎಂದು ನುಡಿದರು. "ಸರಳತೆಯೇ ಸಂತೋಷದ ಮೂಲತತ್ತ÷್ವ" ಎಂಬ ಸೆಡ್ರಿಕ್ ಬ್ಲೆಡ್ಸೋ ಅವರ ಮಾತುಗಳು ಮಾನವ ಬದುಕಿಗೆ ಬೇಕಾಗಿರುವ ಸಂತೋಷದ ಮೂಲವನ್ನು ಶೋಧಿಸಿದೆ.
ಮಾನವ ಸಹಜವಾಗಿ ಆಸೆಬುರುಕ. ಇದು ಅವನ ರಕ್ತಗತ ಗುಣ. ಆದ್ದರಿಂದಲೇ ಗೌತಮ ಬುದ್ಧ "ಆಸೆಯೇ ದುಃಖಕ್ಕೆ ಮೂಲ ಕಾರಣ" ಎಂದು ಸಾರಿದ. ಮಹಾತ್ಮಾ ಗಾಂಧೀಜಿಯವರು ಸರಳ ಬದುಕಿನ ಪ್ರತಿಪಾದನೆಗಾಗಿ ತನ್ನನ್ನು ತಾನು ಪ್ರಯೋಗಕ್ಕೆ ಒಡ್ಡಿಕೊಂಡರು. ಗಾಂಧೀಜಿಯವರ ತತ್ತ÷್ವಗಳಿಗೆ ಮುಖ್ಯ ಸ್ಫೂರ್ತಿ ಭಗವದ್ಗೀತೆ ಮತ್ತು ರಷ್ಯಾದ ಪ್ರಸಿದ್ಧ ತತ್ತ÷್ವಜ್ಞಾನಿ ಲಿಯೋ ಟಾಲ್ಸ್ಟಾಯ್ ಹಾಗೂ ಅಮೇರಿಕನ್ ಸಾಹಿತಿ ಹೆನ್ರಿ ಡೇವಿಡ್ ಥೋರೋ ಅವರ ವಿಚಾರಗಳು. ಸಮಾಜ ಸೇವೆಗೆ ಸಮರ್ಪಿತನಾದ ಯಾರೇ ಆಗಲಿ ಅವನು ಸರಳ ಜೀವನಕ್ಕೆ ಬದ್ಧನಾಗಿರಬೇಕಾದ ಅನಿವಾರ್ಯತೆಯಿದೆ ಎಂಬುದನ್ನು ಮಹಾತ್ಮಾ ಗಾಂಧಿ ಮತ್ತು ಟಾಲ್ಸ್ಟಾಯ್ ಅವರ ಜೀವನ ವೃತ್ತಾಂತಗಳು ಸಾರಿದುವು. ಲೋಕದಲ್ಲಿ ಸಾಮಾನ್ಯ ವರ್ಗದ ಜನರ ಬದುಕಿನ ನೋವು ಮತ್ತು ದುಃಖಗಳ ಕಾರಣ ತಿಳಿಯಲು ಅದರ ಜಾಡು ಹಿಡಿದು ಹೊರಟ ಗೌತಮ ಬುದ್ಧ ಮೊದಲು ಮಾಡಿದ್ದೇನು? ರಾಜ್ಯದ ಅಧಿಕಾರ, ಸಂಪತ್ತು, ಜೊತೆಗೆ ತನ್ನ ಕುಟುಂಬವನ್ನೇ ತ್ಯಾಗ ಮಾಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಬದುಕಿನ ಮಟ್ಟವನ್ನು ಅಳೆಯಲು ತನ್ನ ಬದುಕನ್ನೇ ಪರೀಕ್ಷೆಗೆ ಒಡ್ಡಿಕೊಂಡಿದ್ದು. ಇವರೆಲ್ಲರೂ ನಮ್ಮ ಮುಂದಿರುವ ಸರಳ ಬದುಕಿನ ಮಾದರಿ ಪುರುಷರು.
ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ, ಸರ್ ಎಂ. ವಿಶ್ವೇಶ್ವರಯ್ಯರಂತಹ ಮಹನೀಯರು ಮಾತ್ರ ಅಧಿಕಾರ ಇದ್ದಾಗಲೂ, ಅಧಿಕಾರ ಬಿಟ್ಟು ಕೊಟ್ಟಾಗಲೂ ತಮ್ಮ ವ್ಯಕ್ತಿತ್ವದಲ್ಲಿ ಲವಲೇಶವೂ ಬದಲಾವಣೆ ತೋರಲಿಲ್ಲ. ಬದುಕಿನ ವಾಸ್ತವತೆಯ ಅರಿವಿದ್ದವರ ನಡವಳಿಕೆ ಇದು. ಇದರಲ್ಲಿ ನಂಬಿಕೆಯಿಟ್ಟು ಬದುಕು ಕಟ್ಟಿಕೊಳ್ಳಬಯಸುವ ಯಾರೇ ಆಗಲಿ ಲೌಕಿಕ ಪ್ರಪಂಚದಲ್ಲಿ ಏನೇ ವ್ಯತ್ಯಯಗಳು, ಬದುಕಿನ ಏರಿಳಿತಗಳು, ಸೋಲು-ಗೆಲುವುಗಳು ಎದುರಾದರೂ ಅವರನ್ನು ಯಾವ ರೀತಿಯಲ್ಲಿಯೂ ಅದು ಬಾಧಿಸದು. ಏಕೆಂದರೆ ಸಮಚಿತ್ತ, ದೃಢತೆ ಅವರನ್ನು ಕಾಯ್ದಿಟ್ಟುಕೊಳ್ಳುತ್ತದೆ.
ಅವಶ್ಯಕತೆಗಾಗಿ ಕಟ್ಟಿಕೊಂಡ ಬದುಕು ಇಂದು ಎಷ್ಟೆಷ್ಟೋ ಬದಲಾವಣೆಗಳಿಗೆ ಒಳಗಾಗಿದೆ. ಬೇಕಾದುದೆಲ್ಲ ಪಡೆದುಕೊಂಡ ಮನುಷ್ಯ ಇಂದು ಮತ್ತೆ ಬಯಸುತ್ತಿರುವುದು ಅದೇ ಕಳೆದುಕೊಂಡ ಜೀವನ ಸಂತೋಷವನ್ನು ಎನ್ನುವುದು ಕಟು ಸತ್ಯ. ಇಡೀ ಜಗತ್ತು ಇಂದು ಎದುರು ನೋಡುತ್ತಿರುವುದು ಶಾಂತಿ ಸಮಾಧಾನಗಳಿಗೆ ಮತ್ತು ಸಂತೃಪ್ತಿಯ ಬದುಕಿಗೆ.
ಬದುಕಿನ ಕುರಿತು ಸರಳ ದೃಷ್ಟಿ ನೆಮ್ಮದಿಯ ಆಶ್ರಯವನ್ನಂತೂ ನೀಡುತ್ತದೆ. ರಾಜಾಧಿರಾಜರಲ್ಲಿಯೂ ರಾಜ ವೈಭವದ ಪ್ರತಿಯೊಂದು ಕ್ಷಣಗಳನ್ನು ಅನುಭವಿಸಿ, ಜವಾಬ್ದಾರಿಕೆಯನ್ನು, ಉತ್ತರಾಧಿಕಾರವನ್ನು ಯೋಗ್ಯರಿಗೆ ವಹಿಸಿದ ಮರುಕ್ಷಣವೇ ವಾನಪ್ರಸ್ಥಾಶ್ರಮಕ್ಕೆ ಸಿದ್ಧರಾಗಿಬಿಡುತ್ತಿದ್ದರು. ಇದು ಬದುಕಿನ ನೈಜ ಅನುಭವವನ್ನು ಪಡೆದುಕೊಂಡು ತೃಪ್ತಭಾವಕ್ಕೆ ಶರಣಾಗುವುದು. ಆದರೆ ಆಧುನಿಕತೆಯ ಭರಾಟೆ ಹೇಗಿದೆಯೆಂದರೆ ಎಲ್ಲೆಲ್ಲಿಯೂ ಸ್ಪರ್ಧೆಯ ಜೀವನವೇ. ಸರಳತೆ ಎನ್ನುವುದು ಉಪದೇಶಕ್ಕೆ ಮಾತ್ರ. ಇದಲ್ಲದಿದ್ದರೆ ಮತ್ತೊಂದು ಎಂಬ ಆಯ್ಕೆ ನಮ್ಮ ಮುಂದೆ ಬಹಳಷ್ಟಿವೆ. ಹಾಗಾಗಿ ಸರಳ ಜೀವನ ಸೂತ್ರಕ್ಕೆ ಅಣಿಯಾಗುವವರೆಂದರೆ ಒಂದೋ ಬದುಕಿನಲ್ಲಿ ಆಸಕ್ತಿ, ಉತ್ಸಾಹ ಕಳೆದುಕೊಂಡು ನಿರಾಶೆಗೀಡಾದವರು, ಒಂದೋ ಸಂಪತ್ತಿನ ಕೊರತೆಯಿಂದ ಬದುಕು ಸಾಗಿಸುವವರು ಜನಸಾಮಾನ್ಯರ ಬದುಕು ಈ ತತ್ತ÷್ವದ ಆಧಾರದಲ್ಲಿ ಯಾವಾಗ ನಡೆಸಲ್ಪಡುವುದೋ ಅಲ್ಲಿ ನಿಜವಾದ ಬದುಕು ಆರಂಭವಾಗುತ್ತದೆ. ಮನದಲ್ಲಿಯೇ ಆಗಲಿ, ಮನೆಯಲ್ಲಿಯೇ ಆಗಲಿ ಉಪಯೋಗಕ್ಕೆ ಬಾರದ ಅನಾವಶ್ಯಕ ಅಂಶಗಳು ಭಾರವೇ. ಹಗುರಾಗಿಸಿಕೊಳ್ಳುವತ್ತ ನಾವು ಕಾರ್ಯಪ್ರವೃತ್ತರಾಗಬೇಕು. ಮೊದಲಿಗೆ ಈ ಅಂಶಗಳು ಮನದಲ್ಲಿ ಗಟ್ಟಿಯಾಗಿ ಬೇರೂರಬೇಕು. ಆಗ ಮಾತ್ರವೇ ದೈನಂದಿನ ಜೀವನದಲ್ಲಿ ಅನ್ವಯಿಸಿಕೊಳ್ಳಲು ಸುಲಭಸಾಧ್ಯ. ಇದು ಸಾಧ್ಯವಾಗುವುದು ನಾವು ಮೋಹ ಪಾಶದ ಬಲೆಗೆ ಸಿಲುಕದಿದ್ದಾಗ ಮಾತ್ರ. ವಸ್ತುಮೋಹದಿಂದ ಮನಸ್ಸನ್ನು ವಿಮುಖಗೊಳಿಸುವ ಪ್ರಯತ್ನ ಸಾಗಬೇಕು. ಮಹಾತ್ಮಾ ಗಾಂಧೀಜಿಯಿAದ ಪ್ರೇರಣೆ ಪಡೆದ ನಮ್ಮ ಕೊಡಗಿನ ಹೆಮ್ಮೆಯ ಲೇಖಕಿ ಕೊಡಗಿನ ಗೌರಮ್ಮ ತನ್ನೆಲ್ಲ ಒಡವೆಗಳನ್ನೂ ಸ್ವಇಚ್ಛೆಯಿಂದ ದಾನ ಮಾಡಿ ಸರಳ ಜೀವನಕ್ಕೆ ಅಸ್ತು ಎಂದದ್ದು ಉಲ್ಲೇಖನೀಯ ವಿಚಾರ.
"Simಠಿಟe ಟiviಟಿg high ಣhiಟಿಞiಟಿg" ನಮ್ಮ ಜೀವನದ ಉದ್ದೇಶವಾಗಲಿ. ಇಂದಿನ ನಮ್ಮ ಬದುಕಿನ ರೀತಿ, ಉದ್ದೇಶಗಳೆಲ್ಲವೂ ವ್ಯಾವಹಾರಿಕತೆಯನ್ನು ಎತ್ತಿ ಹಿಡಿಯುವಂತಿದೆ. ಹಾಗಾಗಿ ಯಾವ ಸಂತೋಷವೂ ಹೆಚ್ಚು ದಿನಗಳು ಬಾಳಿಕೆ ಬರುತ್ತಿಲ್ಲ. ಮಿಂಚು ಹುಳದಂತೆ ಮಿಂಚಿ ಮರೆಯಾಗುವವೇ ಹೆಚ್ಚಿನವು. ಸಿರಿವಂತಿಕೆ ನಮ್ಮಲ್ಲಿ ಸದಾ ಕಳೆದು ಕೊಳ್ಳುವ ಭಯ ಆತಂಕವನ್ನು ತಂದೊಡ್ಡುವAತದ್ದು. ಹಾಗಾಗಿ ಬದುಕಿನ ಪ್ರತಿಯೊಂದು ಕ್ಷಣವೂ ಅದರ ರಕ್ಷಣೆಗಾಗಿ ಮನಸ್ಸು ಬಿಡುವಿಲ್ಲದ ಪ್ರಯತ್ನ ದಲ್ಲಿ ತೊಡಗಿಕೊಳ್ಳುತ್ತದೆ. ಕೃತಕತೆಯೇ ನಮ್ಮ ಗುಣವೇನೋ ಎಂಬಷ್ಟು ನಮ್ಮ ವ್ಯಕ್ತಿತ್ವದಲ್ಲಿಯೂ ಇದರ ಪ್ರಭಾವವನ್ನು ಬಹುಪಾಲು ಕಾಣುತ್ತೇವೆ. ನಡವಳಿಕೆಯಲ್ಲಿ ನಾವು ಸರಳ ಸಹಜವಾಗಿ ಮನೋಭಾವಕ್ಕೆ ಅನುಗುಣವಾಗಿ ನಡೆದುಕೊಂಡಾಗ ನಂಬಿಕೆ, ವಿಶ್ವಾಸ, ಪ್ರೀತಿ ಸಂಬAಧಗಳೂ ಗಟ್ಟಿಗೊಳ್ಳುತ್ತಾ ಬದುಕಿನ ರಂಗನ್ನು ಇನ್ನಷ್ಟು ಹೆಚ್ಚಿಸುತ್ತವೆ. ಯಾರದೋ ಬಣ್ಣದ ಬದುಕಿನ ಅನುಕರಣೆ ನಮಗೆ ಬೇಡ. ಬದುಕು ಸರಳವಾಗಿರಲಿ. ಸಂತೋಷ ಸದಾ ತುಂಬಿರಲಿ.
- ಪ್ರತಿಮಾ ಹರೀಶ್ ರೈ, ಉಪನ್ಯಾಸಕರು, ಸೈಂಟ್ ಆನ್ಸ್ ಪದವಿ ಕಾಲೇಜು, ವೀರಾಜಪೇಟೆ.