ವೀರಾಜಪೇಟೆ, ಜು. ೧೦: ಸರ್ಕಾರಿ ಪ್ರೌಢಶಾಲೆ ಬಿಳುಗುಂದದಲ್ಲಿ ಪೋಷಕರ ಸಭೆ ಹಾಗೂ ಶಾಲಾ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ನಡೆಯಿತು. ಎಸ್.ಡಿ.ಎಂ.ಸಿ. ಅಧ್ಯಕ್ಷ ಕೆ.ಹೆಚ್ ಅಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಸಂಘದ ಉದ್ಘಾಟನೆ ಬಳಿಕ ನೂತನ ಪ್ರತಿನಿಧಿ ಗಳಿಗೆ ಕೆ.ಹೆಚ್ ಅಲಿ ಪ್ರಮಾಣ ವಚನ ಬೋಧಿಸಿದರು.

ಅರುಣ ಆನ್ಸಿ ಡಿಸೋಜ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇದೇ ಸಂದರ್ಭ ಶಾಲಾ ಎನ್.ಎಸ್.ಎಸ್ ಸಂಘದ ಉದ್ಘಾಟನೆ ಹಾಗೂ ಕಳೆದ ಸಾಲಿನ ವಿದ್ಯಾರ್ಥಿಗಳಿಗೆ ಎನ್.ಎಸ್. ಎಸ್ ಪ್ರಶಸ್ತಿ ಪತ್ರಗಳನ್ನು ವಿತರಿಸ ಲಾಯಿತು. ಸಹ ಶಿಕ್ಷಕಿ ಲೀಲಾವತಿ ಚುನಾವಣಾ ಪ್ರಕ್ರಿಯೆಯ ಬಗ್ಗೆ ತಿಳಿಸಿದರು. ಈ ಸಂದರ್ಭ ಪೋಷಕರು, ವಿದ್ಯಾರ್ಥಿ ಗಳು ಹಾಗೂ ಶಿಕ್ಷಕರಾದ ಎಸ್.ಜಿ. ಲಿನ್ನಿ, ಪಿ.ಕೆ. ಪವಿತ್ರ, ಕೆ.ಬಿ. ಕಿರಣ್ ಕುಮಾರ್, ಅಲ್ಲಾಬಕ್ಷ ಬಡೇಘರ್ ಹಾಗೂ ಸಾವಿತ್ರಿ ಹೆಚ್.ಜಿ. ಉಪಸ್ಥಿತರಿದ್ದರು