ಸೋಮವಾರಪೇಟೆ, ಜು. ೧೦: ಗಾಳಿ ಮಳೆಗೆ ಮರಗಳು ಮನೆ, ರಸ್ತೆಯ ಮೇಲೆ ಉರುಳಿ ನಷ್ಟ ಉಂಟಾಗುವುದು ಸಾಮಾನ್ಯ. ಆದರೆ ಇಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರವೊಂದು ಹಸುಗೂಸಿನ ಪ್ರಾಣಕ್ಕೆ ಸಂಚಕಾರ ತಂದಿದ್ದು, ಮಗುವಿನ ಮನೆಯಲ್ಲಿ ಶೋಕ ಸಾಗರಕ್ಕೆ ಕಾರಣವಾಗಿದೆ. ಹಸುಗೂಸಿನ ಮೃತದೇಹವನ್ನಿಟ್ಟು ಕೊಂಡು ಹೆತ್ತೊಡಲು ರೋದಿಸುತ್ತಿರುವ ಸನ್ನಿವೇಶ ಕಲ್ಲು ಹೃದಯವನ್ನೂ ಕರಗಿಸುವಂತಿದೆ.

ಪಟ್ಟಣ ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ೨ನೇ ಕುಸುಬೂರು ಎಸ್ಟೇಟ್‌ನಲ್ಲಿ ಈ ಹೃದಯ ಕಲಕುವ ಸನ್ನಿವೇಶ ಕಂಡುಬAದಿದ್ದು, ಸ್ಥಳೀಯರು ತೋಟದ ಮಾಲೀಕರು, ಗ್ರಾಮ ಪಂಚಾಯಿತಿ, ಎಸ್ಟೇಟ್‌ನ ಮಾಲೀಕರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ. ಮಗುವಿನ ಪ್ರಾಣ ಹೋಗಲು ಬಿದ್ದ ಮರವನ್ನು ಸಕಾಲಕ್ಕೆ ತೆಗೆಸದೆ ತೋಟ ಮಾಲೀಕರು ನಿರ್ಲಕ್ಷö್ಯ ಮಾಡಿರುವುದು ಕಾರಣವಾಗಿದೆ.

ಘಟನೆಯ ವಿವರ: ೨ನೇ ಕುಸುಬೂರು ಎಸ್ಟೇಟ್‌ಗೆ ಒತ್ತಿಕೊಂಡAತೆ ಇರುವ ಬಳಗುಂದ ಗ್ರಾಮದ ಪೂವಯ್ಯ ಅವರಿಗೆ ಸೇರಿದ ತೋಟದಲ್ಲಿದ್ದ ಬೃಹತ್ ಗಾತ್ರದ ಬಸರಿ ಸೋಮವಾರಪೇಟೆ, ಜು. ೧೦: ಗಾಳಿ ಮಳೆಗೆ ಮರಗಳು ಮನೆ, ರಸ್ತೆಯ ಮೇಲೆ ಉರುಳಿ ನಷ್ಟ ಉಂಟಾಗುವುದು ಸಾಮಾನ್ಯ. ಆದರೆ ಇಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರವೊಂದು ಹಸುಗೂಸಿನ ಪ್ರಾಣಕ್ಕೆ ಸಂಚಕಾರ ತಂದಿದ್ದು, ಮಗುವಿನ ಮನೆಯಲ್ಲಿ ಶೋಕ ಸಾಗರಕ್ಕೆ ಕಾರಣವಾಗಿದೆ. ಹಸುಗೂಸಿನ ಮೃತದೇಹವನ್ನಿಟ್ಟು ಕೊಂಡು ಹೆತ್ತೊಡಲು ರೋದಿಸುತ್ತಿರುವ ಸನ್ನಿವೇಶ ಕಲ್ಲು ಹೃದಯವನ್ನೂ ಕರಗಿಸುವಂತಿದೆ.

ಪಟ್ಟಣ ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ೨ನೇ ಕುಸುಬೂರು ಎಸ್ಟೇಟ್‌ನಲ್ಲಿ ಈ ಹೃದಯ ಕಲಕುವ ಸನ್ನಿವೇಶ ಕಂಡುಬAದಿದ್ದು, ಸ್ಥಳೀಯರು ತೋಟದ ಮಾಲೀಕರು, ಗ್ರಾಮ ಪಂಚಾಯಿತಿ, ಎಸ್ಟೇಟ್‌ನ ಮಾಲೀಕರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ. ಮಗುವಿನ ಪ್ರಾಣ ಹೋಗಲು ಬಿದ್ದ ಮರವನ್ನು ಸಕಾಲಕ್ಕೆ ತೆಗೆಸದೆ ತೋಟ ಮಾಲೀಕರು ನಿರ್ಲಕ್ಷö್ಯ ಮಾಡಿರುವುದು ಕಾರಣವಾಗಿದೆ.

ಘಟನೆಯ ವಿವರ: ೨ನೇ ಕುಸುಬೂರು ಎಸ್ಟೇಟ್‌ಗೆ ಒತ್ತಿಕೊಂಡAತೆ ಇರುವ ಬಳಗುಂದ ಗ್ರಾಮದ ಪೂವಯ್ಯ ಅವರಿಗೆ ಸೇರಿದ ತೋಟದಲ್ಲಿದ್ದ ಬೃಹತ್ ಗಾತ್ರದ ಬಸರಿ ನುಸುಳಿ ಸುಮಾರು ಒಂದೂವರೆ ಕಿ.ಮೀ. ನಡೆದುಕೊಂಡು ಮುಖ್ಯರಸ್ತೆಗೆ ಬಂದ ಅಪ್ಪ ತೇಜಸ್, ನಂತರ ಆಟೋವೊಂದನ್ನು ಏರಿ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಮಗುವನ್ನು ಕರೆತಂದಿದ್ದಾರೆ.

ಆಸ್ಪತ್ರೆಯಲ್ಲಿ ಮಗುವನ್ನು ಪರೀಕ್ಷಿಸಿದ ವೈದ್ಯರು, ೧೦ ನಿಮಿಷ ಮೊದಲೇ ಆಗಮಿಸಿದ್ದರೆ ಮಗುವಿನ ಪ್ರಾಣ ಉಳಿಸಬಹುದಿತ್ತು ಎಂದು ತಿಳಿಸಿದ್ದಾರೆ. ತನ್ನ ಕೈಯಲ್ಲೇ ಮಗು ಕೊನೆಯುಸಿರೆಳೆದ ವಿಷಯ ತಿಳಿದು ತೇಜಸ್ ಕುಸಿದು ಹೋಗಿದ್ದು, ನಂತರ ಸಾವರಿಸಿಕೊಂಡು ಮನೆಗೆ ವಾಪಸ್ಸಾಗಿದ್ದಾರೆ. ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ ಕರುಳಿನ ಕುಡಿ ಪ್ರಾಣವಿಲ್ಲದೇ ವಾಪಸ್ ಮನೆಗೆ ಬಂದ ಸುದ್ದಿ ತಿಳಿಯುತ್ತಿದ್ದಂತೆ ಹೆತ್ತಕರುಳು ಮಮ್ಮುಲ ಮರುಗಿದ್ದು, ಆಘಾತಕ್ಕೊಳಗಾಗಿ ಮಾತುಕತೆ ಇಲ್ಲವಾಗಿದೆ. ದುಃಖ ಮಡುಗಟ್ಟಿರುವ ಕಣ್ಣಲ್ಲಿ ಕಣ್ಣೀರಿಗೂ ಜಾಗವಿಲ್ಲದಂತಾಗಿದೆ!

ಕೇವಲ ೪೦ ದಿನಗಳಲ್ಲಿಯೇ ಮಗುವನ್ನು ಕಳೆದುಕೊಂಡ ದಂಪತಿಯ ಶೋಕಕ್ಕೆ ಕೊನೆಯಿಲ್ಲದಂತಾಗಿದ್ದು, ಅಕ್ಕಪಕ್ಕದವರು, ನೆಂಟರಿಷ್ಟರ ಸಮಾಧಾನದ ಮಾತುಗಳೂ ಕೇಳದಾಗಿದೆ. ಮಗುವಿನ ಪ್ರಾಣ ಹೋಗಲು ರಸ್ತೆಗೆ ಅಡ್ಡಲಾಗಿ ಬಿದ್ದ ಮರ ಕಾರಣವಾಗಿರುವಂತೆ, ಆ ಮರವನ್ನು ತಕ್ಷಣಕ್ಕೆ ತೆರವುಗೊಳಿಸದ ತೋಟ ಮಾಲೀಕರ ಅಸಡ್ಡೆಯೂ ಕಾರಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ಇಂದು ಸ್ಥಳಕ್ಕೆ ಆಗಮಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಮುಗಿಬಿದ್ದ ಸ್ಥಳೀಯರು, ಪಂಚಾಯಿತಿಗೆ ಮರ ತೆರವುಗೊಳಿಸುವಂತೆ ಮಾಹಿತಿ ನೀಡಿದ್ದರೂ ನಿರ್ಲಕ್ಷö್ಯ ವಹಿಸಲಾಗಿದೆ ಎಂದಿದ್ದಾರೆ.

ಇAದು ೧೧ ಗಂಟೆಯ ಸುಮಾರಿಗೆ ಮರವನ್ನು ತೆರವುಗೊಳಿಸಲಾಗಿದ್ದು, ಈ ಕೆಲಸವನ್ನು ನಿನ್ನೆ ಬೆಳಿಗ್ಗೆಯಾದರೂ ಮಾಡಿದ್ದರೆ ಹಸುಗೂಸು ಬದುಕುಳಿಯುತ್ತಿತ್ತು. ತೋಟ ಮಾಲೀಕರೇ ನೊಂದ ಕುಟುಂಬಕ್ಕೆ ಪರಿಹಾರ ನೀಡಬೇಕು. ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಮೊಗೇರ ಸಮಾಜದ ಜಿಲ್ಲಾ ಉಪಾಧ್ಯಕ್ಷ ದಾಮೋದರ್, ಗ್ರಾಮಾಧ್ಯಕ್ಷ ರಾಮಚಂದ್ರ, ದಿನೇಶ್, ಹರೀಶ್ ಸೇರಿದಂತೆ ಇತರರು ಆಗ್ರಹಿಸಿದ್ದಾರೆ.

ತೋಟ ಮಾಲೀಕರ ನಿರ್ಲಕ್ಷö್ಯದಿಂದಾಗಿ ಮಗುವಿನ ಪ್ರಾಣ ಹೋಗಿದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಪೊಲೀಸ್ ಇಲಾಖೆಗೆ ದೂರು ನೀಡಿ ಒತ್ತಾಯಿಸಿದ್ದಾರೆ.