ಸುAಟಿಕೊಪ್ಪ, ಜು. ೧೦: ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕೊಡಗರಹಳ್ಳಿ, ಅಂದಗೋವೆ ಗ್ರಾಮದ ರೈತಾಪಿ ಜನತೆಗೆ ಪೌತಿ ಖಾತೆ ಆಂದೋಲನವನ್ನು ಕೊಡಗು ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ಕುಶಾಲನಗರ ತಾಲೂಕು ತಹಶೀಲ್ದಾರ್ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಉಪತಹಶೀಲ್ದಾರ್ ಹೆಚ್.ಕೆ. ಶಿವಪ್ಪ ಮಾತನಾಡಿ ಸರಕಾರದ ಸವಲತ್ತುಗಳು ಫಲಾನುಭವಿಗಳಿಗೆ ಸಿಗಬೇಕೆನ್ನುವ ನಿಟ್ಟಿನಲ್ಲಿ ಪ್ರತಿ ತಿಂಗಳು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಕಾರ್ಯಕ್ರಮದಲ್ಲಿ ಪೌತಿ ಖಾತೆಗೆ ಸಂಬAಧಿಸಿದ ಅರ್ಜಿಗಳನ್ನು ಗ್ರಾಮದ ರೈತರಿಂದ ಸ್ವೀಕರಿಸಲಾಯಿತು. ಸಭೆಯಲ್ಲಿ ಕಂದಾಯ ಪರಿವೀಕ್ಷಕ ಪ್ರಶಾಂತ್, ಗ್ರಾಮ ಆಡಳಿತ ಅಧಿಕಾರಿ ಜಯಂತ್, ಗ್ರಾಮ ಸಹಾಯಕಿ ಬೇಬಿ, ಶಿವಪ್ಪ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಶ್, ಪಂಚಾಯಿತಿ ಸದಸ್ಯರಾದ ನೀತಾ ಹರೀಶ್, ಚೆನ್ನ ಬಸವಿ, ಸಿಬ್ಬಂದಿ ಧÀನಂಜಯ ಹಾಜರಿದ್ದರು.