ಕೂಡಿಗೆ, ಜು. ೧೦: ಇಲ್ಲಿನ ರಾಷ್ಟಿçÃಯ ಸ್ವಯಂ ಸೇವಾ ಸಂಘದ ವತಿಯಿಂದ ಗುರುಪೂಜೆಯು ಕೂಡಿಗೆಯ ಮೂಡ್ಲಿಗೌಡ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಕೆ,ಎಂ ಚಂದ್ರು ಮೂಡ್ಲಿಗೌಡನವರ ಅಧ್ಯಕ್ಷತೆಯಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಿ.ವಿ. ಅರುಣ್ ಕುಮಾರ್, ಬೌದ್ಧಿಕರಾಗಿ ಸೋಮವಾರಪೇಟೆಯ ರವಿಕುಶಾಲಪ್ಪ ಭಾಗವಹಿಸಿ ಗುರುಪೂಜೆಯ ಮಹತ್ವದ ಬಗ್ಗೆ ಮಾತಾನಾಡಿದರು. ಕಾರ್ಯಕ್ರಮದಲ್ಲಿ ಕೂಡಿಗೆ ಕೂಡುಮಂಗಳೂರು ಗ್ರಾಮ ವ್ಯಾಪ್ತಿಯ ಸಂಘದ ಸದಸ್ಯರು ಸಾರ್ವಜನಿಕರು ಹಾಜರಿದ್ದರು.