ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಎದುರಿಸುತ್ತಿರುವ ವಿದ್ಯುತ್ ಸಮಸ್ಯೆ - ಕಾಡಾನೆ ಹಾವಳಿ ಹಾಗೂ ಕಂದಾಯ ಇಲಾಖೆಯಲ್ಲಿನ ಅವ್ಯವಸ್ಥೆಗಳ ವಿರುದ್ಧ ಸಿಡಿದೆದ್ದ ರೈತರು ಸೋಮವಾರ ಪ್ರತಿಭಟನೆ ನಡೆಸಿದರು. ಮಡಿಕೇರಿಯಲ್ಲಿ ವಿದ್ಯುತ್ ಇಲಾಖಾ ಕಚೇರಿಗೆ ಮುತ್ತಿಗೆ ಹಾಕಿದರೆ, ಚೆಯ್ಯಂಡಾಣೆಯಲ್ಲಿ ಕಾಡಾನೆ ಹಾವಳಿ ವಿರುದ್ಧ ಪ್ರತಿಭಟಿಸಿದರು. ಸೋಮವಾರಪೇಟೆಯಲ್ಲಿ ಕಂದಾಯ ಇಲಾಖೆಯಲ್ಲಿನ ಅವ್ಯವಸ್ಥೆ ವಿರುದ್ಧ ಕಿಡಿಕಾರಿದರು.
ವಿದ್ಯುತ್ ಸಮಸ್ಯೆ - ಪ್ರತಿಭಟನೆ
ಮಡಿಕೇರಿ, ಜು. ೧೦: ವಿದ್ಯುತ್ ಸಂಬAಧಿತ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿ ನಗರದ ಚೆಸ್ಕಾಂ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಯಿತು.
(ಮೊದಲ ಪುಟದಿಂದ) ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ವಿದ್ಯುತ್ ದರ ಏರಿಕೆ ಮಾಡಿದ ಬಗ್ಗೆ ರೈತ ಸಂಘ ಆಕ್ಷೇಪ ವ್ಯಕ್ತಪಡಿಸಿದಲ್ಲದೆ ವಿವಿಧ ಸಮಸ್ಯೆ ಗಳನ್ನು ಪರಿಹರಿಸುವಂತೆ ಅಧಿಕಾರಿ ಗಳ ಗಮನ ಸೆಳೆದರು. ಫೀ.ಮಾ. ಕಾರ್ಯಪ್ಪ ವೃತ್ತದಿಂದ ಮೆರವಣಿಗೆ ಮೂಲಕ ಚೆಸ್ಕಾಂ ಕಚೇರಿಗೆ ಸಾಗಿ ಬಂದ ಪ್ರತಿಭಟನಾನಿರತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ಜಿಲ್ಲೆಯ ೫ ತಾಲೂಕಿನಲ್ಲಿ ವಿದ್ಯುತ್ ಸಂಬAಧಿಸಿದ ಸಮಸ್ಯೆಗಳು ತಲೆ ದೋರಿವೆ. ಸಮರ್ಪಕವಾದ ವಿದ್ಯುತ್ ದೊರೆಯುತ್ತಿಲ್ಲ. ಇದರೊಂದಿಗೆ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ವಿದ್ಯುತ್ ದರವನ್ನು ಏರಿಸಿ ಗಾಯದ ಮೇಲೆ ಬರೆ ಎಳೆದಿದೆ. ಇದರಿಂದ ಎಲ್ಲಾ ವರ್ಗದ ಜನರಿಗೆ ಸಂಕಷ್ಟ ಉಂಟಾಗಿದೆ. ರೈತಾಪಿ ವರ್ಗಕ್ಕೂ ದರ ಏರಿಕೆ ಸಮಸ್ಯೆಯಾಗಿದೆ. ಇದೊಂದು ಅವೈಜ್ಞಾನಿಕ ನೀತಿ ಎಂದು ಟೀಕಿಸಿದ ಅವರು, ರಾಜ್ಯ ಸರಕಾರ ಮಧ್ಯ ಪ್ರವೇಶಿಸಿ ದರ ಇಳಿಕೆಗೆ ಮುಂದಾ ಗಬೇಕು. ಜನರ ಸಮಸ್ಯೆ ಮನಗಂಡು ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿ ಸಬೇಕು ಎಂದು ಒತ್ತಾಯಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ತಿಂಗಳುಗಟ್ಟಲೆ ವಿದ್ಯುತ್ ಸಂಪರ್ಕ ಇರುವುದಿಲ್ಲ. ತೋಟಗಳಲ್ಲಿ ಹಾದು ಹೋಗಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡುವಲ್ಲಿ ಇಲಾಖೆ ನಿರ್ಲಕ್ಷö್ಯ ವಹಿಸುತ್ತಿದೆ. ತೋಟದಲ್ಲಿರುವ ವಿದ್ಯುತ್ ತಂತಿಗಳಿAದ ವನ್ಯಜೀವಿ ಹಾಗೂ ಕಾರ್ಮಿಕರಿಗೆ ಜೀವ ಭಯವಿದೆ. ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ತೋಟದಿಂದ ಕಂಬಗಳನ್ನು ಸ್ಥಳಾಂತರಿಸಲು ಕ್ರಮವಹಿಸಬೇಕು. ಸ್ಥಳಾಂತರಕ್ಕೆ ಖರ್ಚುವೆಚ್ಚದ ಜವಾಬ್ದಾರಿ ಗ್ರಾಹಕರೇ ಹೊತ್ತುಕೊಳ್ಳಬೇಕಾಗಿದೆ. ಈ ನೀತಿ ಸರಿಯಲ್ಲ. ನಿಯಾಮನುಸಾರ ವಿದ್ಯುತ್ ಇಲಾಖೆಯಿಂದ ಕಂಬಗಳ ಸ್ಥಳಾಂತರವಾಗಬೇಕು. ೧೦ ಹೆಚ್‌ಪಿ ನೀರಾವರಿ ಮೋಟಾರ್ ಉಚಿತ ವಿದ್ಯುತ್‌ಗೆ ಸರಕಾರ ಸ್ಪಷ್ಟನೆ ನೀಡಿಲ್ಲ. ನೂತನ ಸರಕಾರ ಗೊಂದಲ ಹೋಗಲಾಡಿಸಿ ನೇರವಾಗಿ ಪಾವತಿ ಮಾಡುವ ಕ್ರಮ ಅನುಸರಿಸಬೇಕೆಂದು ಆಗ್ರಹಿಸಿದರು.
ರೈತ ಸಂಘದ ಕಾನೂನು ಸಲಹೆಗಾರ ಹೇಮಚಂದ್ರ ಮಾತನಾಡಿ, ವ್ಯತಿರಿಕ್ತ ಪರಿಣಾಮಗಳಿಂದ ರೈತರು ಸಂಕಷ್ಟದಲ್ಲಿದ್ದಾರೆ. ಪ್ರಾಣ ಭೀತಿಯ ನಡುವೆ ರೈತಾಪಿ ವರ್ಗ ಜೀವನ ನಡೆಸುತ್ತಿದೆ. ಇದೀಗ ವಿದ್ಯುತ್ ದರ ಏರಿಕೆ ಮಾಡಿ ಆರ್ಥಿಕ ಸಂಕಷ್ಟವನ್ನು ಆಯೋಗ ತಂದೊಡ್ಡಿದೆ. ತೋಟಗಳ ನಡುವೆ ವಾಸಿಸುವ ರೈತರ ವಿದ್ಯುತ್ ಬಳಕೆ ಹೆಚ್ಚಿರುವ ಹಿನ್ನೆಲೆ ರೈತರಿಗೆ ೫೦೦ ಯೂನಿಟ್ ಉಚಿತ ವಿದ್ಯುತ್ ನೀಡಬೇಕು. ವಿದ್ಯುತ್ ಮೀಟರ್ ವರ್ಗಾವಣೆಗೆ ರೂ. ೮ ರಿಂದ ೧೦ ಸಾವಿರ ಪಾವತಿ ಮಾಡಬೇಕಾಗಿದೆ. ಇದು ಹೊರೆಯಾಗಿದ್ದು, ಉಚಿತ ಸೇವೆ ಒದಗಿಸುವಂತೆ ಆಗ್ರಹಿಸಿದರು.
ಬೇಡಿಕೆಗಳೇನು?
ರಾಜ್ಯ ಸರಕಾರ ಮಧ್ಯಪ್ರವೇಶಿಸಿ ವಿದ್ಯುತ್ ದರ ಇಳಿಸಬೇಕು, ಕಾಫಿ ಬೆಳೆಗಾರರಿಗೆ ೧೦ ಹೆಚ್.ಪಿ.ವರಗಿನ ವಿದ್ಯುತ್ ನೀರಾವರಿ ಪಂಪ್‌ಸೆಟ್‌ಗಳಿಗೆ ಮೀಟರ್ ರಹಿತ ಉಚಿತ ವಿದ್ಯುತ್ ಸಬ್ಸಿಡಿ ಮೂಲಕ ರಾಜ್ಯ ಸರಕಾರ ನೇರವಾಗಿ ಶುಲ್ಕ ಪಾವತಿಸಬೇಕು, ಜಿಲ್ಲೆಯಲ್ಲಿ ನಿತ್ಯ ಕನಿಷ್ಟ ೨೦ ಗಂಟೆಗಳ ಕಾಲ ೩ ಫೇಸ್‌ನಲ್ಲಿ ಕಡ್ಡಾಯವಾಗಿ ವಿದ್ಯುತ್ ಪೂರೈಸಬೇಕು, ಜಂಗಲ್ ಕಟ್ಟಿಂಗ್‌ಗೆ ಕ್ರಮವಹಿಸಬೇಕು, ಗ್ರಾಹಕರ ಗಮನಕ್ಕೆ ತಾರದೆ ವಿದ್ಯುತ್ ಸಂಪರ್ಕ ಕಡಿತಗೊಳಿಸಬಾರದು, ಗ್ರಾಹಕರ ವಿಳಾಸ ಬದಲಾವಣೆಯನ್ನು ಕೇವಲ ೨೦೦ ರೂ. ಒಳಗೆ ಮಾಡಬೇಕು, ಮೀಟರ್ ರೀಡರ್ ಸರಿಯಾದ ಸಮಯದಲ್ಲಿ ರೈತರಿಗೆ ನೀಡುವುದರಲ್ಲಿ ವಿಫಲವಾಗಿದೆ. ಇದರಿಂದ ಹೆಚ್ಚುವರಿ ಯೂನಿಟ್ ಸೇರ್ಪಡೆಗೊಂಡು ಹೊರೆಯಾಗುತ್ತಿದೆ. ಇದನ್ನು ಸರಿಪಡಿಸಬೇಕು, ವಿದ್ಯುತ್ ಅವಘಡ ಪರಿಹಾರವನ್ನು ೨ ತಿಂಗಳಿನೊಳಗೆ ನೀಡಬೇಕು, ಬಾಕಿ ಉಳಿಸಿಕೊಂಡ ವಿದ್ಯುತ್ ಶುಲ್ಕವನ್ನು ಸರಕಾರ ಮನ್ನಾ ಮಾಡಬೇಕು, ಶ್ರೀಮಂಗಲ, ಬಾಳೆಲೆ, ಮೂರ್ನಾಡು, ಸೋಮವಾರಪೇಟೆಯಲ್ಲಿ ೬೬/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರಗಳ ಕೆಲಸ ಶೀಘ್ರ ಪೂರ್ಣಗೊಳಿಸಬೇಕು, ಪೊನ್ನಂಪೇಟೆ ತಾಲೂಕಿನಲ್ಲಿ ಡಿವಿಷನ್ ಕಚೇರಿ ಸ್ಥಾಪಿಸಬೇಕು, ಆನೆ ಕಾರಿಡಾರ್‌ಗಳಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟರು.
ಸ್ಥಳಕ್ಕಾಗಮಿಸಿದ ಮೈಸೂರು ಕೆಪಿಟಿಸಿಎಲ್ ಸೆಕ್ಟರ್ ಹಾಗೂ ಮುಖ್ಯ ಅಭಿಯಂತರ ಸೋಮರಾಜು, ರೈತ ಸಂಘದ ಬೇಡಿಕೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಜಿಲ್ಲಾ ಕಾರ್ಯವ್ಯಾಪ್ತಿಯಲ್ಲಿ ಆಗುವ ಕೆಲಸಗಳನ್ನು ಮಾಡಲಾಗುವುದು. ರಾಜ್ಯ ಸರಕಾರಕ್ಕೆ ರೈತ ಸಂಘದ ಬೇಡಿಕೆಗಳನ್ನು ತಿಳಿಸಲಾಗುವುದು. ಗುಣಮಟ್ಟದ ವಿದ್ಯುತ್ ನೀಡುವುದು ನಮ್ಮ ಆದ್ಯತೆಯಾಗಿದೆ ಎಂದರು.
ಚೆಸ್ಕಾಂ ಜಿಲ್ಲಾ ಕಾರ್ಯಪಾಲಕ ಅಭಿಯಂತರೆ ಅನಿತಾ ಬಾಯಿ ಸಮಸ್ಯೆ ಸರಿಪಡಿಸುವ ಭರವಸೆ ನೀಡಿದರು.
ಈ ಸಂದರ್ಭ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಖಜಾಂಜಿ ಸಬಿತಾ ಭೀಮಯ್ಯ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ದಿನೇಶ್, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಬಾಳೆಲೆ ಹೋಬಳಿ ಅಧ್ಯಕ್ಷ ಕಿಸ ಮಾಚಯ್ಯ, ಸಿದ್ದಾಪುರ ಹೋಬಳಿ ಅಧ್ಯಕ್ಷ ಪ್ರವೀಣ್ ಬೋಪಯ್ಯ, ಶ್ರೀಮಂಗಲ ಹೋಬಳಿ ಅಧ್ಯಕ್ಷ ಚೆಟ್ಟಂಗಡ ಕಂಬ ಕರುಂಬಯ್ಯ, ಪ್ರಮುಖರಾದ ಚೆಪ್ಪುಡೀರ ಕಾರ್ಯಪ್ಪ, ಹೂವಯ್ಯ, ಸಜೀವ್, ರಾಯ್ ಮಾದಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.
ಕಾಡಾನೆ ಹಾವಳಿ - ಶಾಶ್ವತ ಕ್ರಮಕ್ಕೆ ಒತ್ತಾಯ
ಚೆಯ್ಯಂಡಾಣೆ, ಜು. ೧೦ : ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ಹಾಗೂ ಕುಂಜಿಲ ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರಿಯಂದಡ, ಕೋಕೇರಿ, ಚೇಲಾವರ, ಕರಡ, ಅರಪಟ್ಟು, ಪೊದವಾಡ, ಮರಂದೋಡ, ಗ್ರಾಮಸ್ಥರು ಚೆಯ್ಯಂಡಾಣೆ ಪಟ್ಟಣದಲ್ಲಿ
(ಮೊದಲ ಪುಟದಿಂದ) ನಾಪೋಕ್ಲು ವೀರಾಜಪೇಟೆ ಮುಖ್ಯ ರಸ್ತೆಯಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆಯನ್ನು ಹಮ್ಮಿಕೊಂಡರು.
ಈ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು ತೋಟಗಳಿಗೆ ಲಗ್ಗೆ ಇಟ್ಟು ಫಸಲು ಭರಿತ ಕಾಫಿ, ಬಾಳೆ, ಅಡಿಕೆ, ಒಳ್ಳೆಮೆಣಸು, ತೆಂಗು ಮತ್ತಿತತ್ತರ ಗಿಡಗಳನ್ನು ತುಳಿದು ನಾಶಪಡಿಸುತ್ತಿದೆ. ತೋಟಗಳು, ಗದ್ದೆ ರೀತಿಯಲ್ಲಿ ಪರಿವರ್ತನೆ ಆಗಿದೆ.
ಮನೆಯ ಅಂಗಳಕ್ಕೆ ಕೂಡ ಕಾಡಾನೆಗಳು ಆಗಮಿಸುತ್ತಿದ್ದು ಇತ್ತೀಚೆಗೆ ಚೇಲಾವರದಲ್ಲಿ ಮಹಿಳೆ ಮೇಲೆ ಕಾಡಾನೆ ದಾಳಿ ನಡೆಸಿ ಅದೃಷ್ಟ ವಶಾತ್ ಪ್ರಾಣಾಪಾಯದಿಂದ ಅವರು ಪಾರಾಗಿದ್ದರು. ಇದೇ ರೀತಿ ಹಲವಾರು ಘಟನೆಗಳು ನಡೆದಿದ್ದು, ೨೫ಕ್ಕೂ ಹೆಚ್ಚು ಕಾಡಾನೆಗಳು ಈ ವ್ಯಾಪ್ತಿಯಲ್ಲಿ ನಿರಂತರ ದಾಳಿ ನಡೆಸುತ್ತಿವೆ. ಆದರೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡಿಲ್ಲವೆAದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿ ದರು. ಬಳಿಕ ರಸ್ತೆಗೆ ಇಳಿದು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಮರಂದೋಡ ಗ್ರಾಮಸ್ಥ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಚೋಯಮಾಡಂಡ ಹರೀಶ್ ಮೊಣ್ಣಪ್ಪ ಮಾತನಾಡಿ ಜೀವ ಬಲಿ ಪಡೆಯುವ ಮುನ್ನ ಆನೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಬೇಕು ಕೂಡಲೇ ಸ್ಥಳಕ್ಕೆ ಅರಣ್ಯಾಧಿಕಾರಿ ಬರಬೇಕೆಂದು ಆಗ್ರಹಿಸಿದರು. ಬರದಿದ್ದರೆ ಯಾವುದೇ ಕಾರಣಕ್ಕೂ ಪ್ರತಿಭಟನೆ ಕೈಬಿಡುವು ದಿಲ್ಲವೆಂದು ಎಚ್ಚರಿಸಿದರು.
ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಪ್ರತಿಭಟನಾ ನಿರತ ಗ್ರಾಮಸ್ಥರ ಪರವಾಗಿ ಮಾತನಾಡಿ ಅರಣ್ಯಾಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಬೇಕು. ಪೊಳ್ಳು ಭರವಸೆಯಲ್ಲಿ ಅರಣ್ಯಾಧಿಕಾರಿಗಳು ಕಾಲ ಕಳೆಯುತ್ತಿದ್ದು ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರವಾಗಿ ಆನೆಯನ್ನು ಕೂಡಲೇ ಸೆರೆ ಹಿಡಿಯಬೇಕು, ಅರಣ್ಯಾಧಿಕಾರಿಗಳು ವನಮಹೋತ್ಸವವನ್ನು ಆಸ್ಪತ್ರೆ, ಪಂಚಾಯಿತಿ, ಶಾಲೆಗಳಲ್ಲಿ ಮಾಡುವ ಬದಲು ಬೆಟ್ಟದ ಅರಣ್ಯದಲ್ಲಿ ಬಾಳೆ, ಹಲಸು ಮರಗಳನ್ನು ನೆಡಬೇಕು. ಅಲ್ಲೇ ಅದಕ್ಕೆ ಆಹಾರ ದೊರೆತರೆ ಖಂಡಿತ ತೋಟಕ್ಕೆ ಆನೆ ಬರುವುದಿಲ್ಲ ವೆಂದು ಆಕ್ರೋಶ ವ್ಯಕ್ತಪಡಿಸಿದರು.
ಕೋಕೇರಿಯ ಗ್ರಾಮದ ಜಪ್ಪು ದೇವಯ್ಯ, ಸಂಪತ್, ರಂಜು ಚಂಗಪ್ಪ, ಅನ್ನಡಿಯಂಡ ಮುದ್ದಯ್ಯ ಮತ್ತಿತರರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.
ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಸ್ಥಳಕ್ಕೆ ಆಗಮಿಸಿ ರಸ್ತೆ ತಡೆ ಮಾಡಬೇಡಿ ಎಂದು ಹಲವಾರು ಬಾರಿ ಪ್ರತಿಭಟನಾಕಾರರಿಗೆ ಮನವಿ ಮಾಡಿದರು. ಗ್ರಾಮಸ್ಥರು ಅವರ ಮನವಿ ತಿರಸ್ಕರಿಸಿದರು. ಎಸಿಎಫ್ ಸ್ಥಳಕ್ಕೆ ಆಗಮಿಸಿ ಪರಿಹಾರದ ಭರವಸೆ ನೀಡದಿದ್ದಲ್ಲಿ ರಸ್ತೆ ತಡೆ ಹಾಗೂ ಪ್ರತಿಭಟನೆಯನ್ನು ಕೈಬಿಡುವುದಿಲ್ಲವೆಂದು ಗ್ರಾಮಸ್ಥರು ಪಟ್ಟು ಹಿಡಿದರು.
ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಯಾವುದೇ ಕಾರಣಕ್ಕೂ ರಸ್ತೆ ತಡೆ ಮಾಡಬೇಡಿ ಎಂದು ಮನವಿ ಮಾಡಿದರು. ಅದಕ್ಕೂ ಬಗ್ಗದ ಗ್ರಾಮಸ್ಥರು ಪ್ರತಿಭಟನೆಯನ್ನು ಮುಂದುವರಿಸಿದರು.
ಬೆಳಿಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೧೨ ಗಂಟೆಯವರೆಗೆ ರಸ್ತೆ ತಡೆಯಲ್ಲಿ ನಿರತರಾಗಿದ್ದ ಗ್ರಾಮಸ್ಥರು ಅರಣ್ಯ ಇಲಾಖೆಗೆ ದಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು. ೧೨ ಗಂಟೆಯ ಬಳಿಕ ರಸ್ತೆ ತಡೆ ಕೈಬಿಟ್ಟರು. ೨ ಗಂಟೆಗೂ ಅಧಿಕ ಸಮಯ ನೂರಕ್ಕೂ ಅಧಿಕ ವಾಹನಗಳು ಮುಂದಕ್ಕೆ ಸಂಚರಿಸಲಾಗದ ಪರಿಸ್ಥಿತಿ ಎದುರಾಯಿತು. ರಸ್ತೆ ತಡೆ ಕೈ ಬಿಟ್ಟ ಬಳಿಕ ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವೀರಾಜಪೇಟೆ ತಾಲೂಕು ಅರಣ್ಯಾಧಿಕಾರಿ ಶರಣ್ಣ ಬಸಪ್ಪ ಮಾತನಾಡಿ ತೋಟಗಳಲ್ಲಿ ಬೀಡು ಬಿಟ್ಟ ಕಾಡಾನೆಗಳನ್ನು ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಓಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಕಾಡಾನೆ ಓಡಿಸುವಾಗ ತೋಟಗಳಿಗೆ ಅಪಾರ ಪ್ರಮಾಣದ ಹಾನಿಯಾಗುತ್ತಿದೆ, ಮಡಿಕೇರಿ ವಲಯದ ಸಿಬ್ಬಂದಿಗಳನ್ನು ಸೇರಿಸಿ ಜಂಟಿಯಾಗಿ ಕಾರ್ಯಾಚರಣೆ ಖಂಡಿತ ಯಶಸ್ವಿಗೊಳಿಸಲಾಗುವುದು.
ಕಾಡಾನೆಗಳ ಹಿಂಡನ್ನು ಸೆರೆ ಹಿಡಿಯಲು ಅನುಮತಿಗೆ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದು ಅನುಮತಿ ದೊರೆತ ಕೂಡಲೇ ಈ ಭಾಗದಲ್ಲಿ ಬೀಡು ಬಿಟ್ಟು ತೊಂದರೆ ನೀಡುವ ಆನೆಗಳನ್ನು ಸೆರೆ ಹಿಡಿಯಲಾಗುವುದೆಂದರು. ಎಲ್ಲಾ ಸಮಸ್ಯೆಗಳಿಗೆ ಕೂಡಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಮಡಿಕೇರಿ ವಲಯ ಅರಣ್ಯಾಧಿಕಾರಿ ಡಿಸಿಎಫ್‌ಓ ಎ.ಟಿ. ಪೂವಯ್ಯ ಮಾತನಾಡಿ ಕೊಡಗಿನಲ್ಲಿ ಆನೆ ಹಾವಳಿ ಬಹಳ ವರ್ಷಗಳಿಂದ ಇರುವಂತಹದ್ದು ಅದಕ್ಕೆ ಒಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ಸೋಲಾರ್ ಬೇಲಿ, ರೈಲ್ವೆ ಬ್ಯಾರಿಕೇಡ್ ಗಳನ್ನು ಅಳವಡಿಸಿದರೂ ಕೂಡ ಆನೆ ಹಾವಳಿ ನಿಲ್ಲುತಿಲ್ಲ, ನಾಗರಹೊಳೆ ರಕ್ಷಿತಾರಣ್ಯದ ರೂಪದಲ್ಲಿ ಸಮತಟ್ಟಾದ ಅರಣ್ಯ ನಮ್ಮ ಈ ಭಾಗದಲ್ಲಿ ಇಲ್ಲ. ಅರಣ್ಯಗಳ ಬಳಿ ತೋಟಗಳು ಇರುವುದರಿಂದ ಕಾಡಾನೆಯನ್ನು ಓಡಿಸಲು ತ್ರಾಸದಾಯಕ. ಕೂಡಲೇ ಇದಕ್ಕೆ ಶಾಶ್ವತ ಪರಿಹಾರ ನೀಡುವ ಭರವಸೆ ನೀಡಿದರು.
ಸ್ವಂದಿಸದಿದ್ದರೆ ಆಗಸ್ಟ್ ೧೫ ರಂದು ಮತ್ತೊಮ್ಮೆ ರಸ್ತೆ ತಡೆ
ಗ್ರಾಮಸ್ಥರ ಎಲ್ಲಾ ಬೇಡಿಕೆಗಳನ್ನು ಅರಣ್ಯಾಧಿಕಾರಿಗಳು ಈಡೇರಿಸದಿದ್ದಲ್ಲಿ ಆಗಸ್ಟ್ ೧೫ ರ ಸ್ವಾತಂತ್ರö್ಯ ದಿನಾಚರಣೆಯ ದಿನದಂದು ಅಹೋರಾತ್ರಿಯವರೆಗೂ ಧರಣಿ ಹಾಗೂ ರಸ್ತೆ ತಡೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಅಧಿಕಾರಿಗಳಿಗೆ ನೀಡಿ ಪ್ರತಿಭಟಣೆಯನ್ನು ಕೈಬಿಟ್ಟರು.
ಮನವಿ ಪತ್ರ ಸಲ್ಲಿಕೆ
ಇದೇ ಸಂದರ್ಭ ಮಡಿಕೇರಿ ವಲಯ ಅಧಿಕಾರಿ ಡಿಸಿಎಫ್‌ಓ ಎ.ಟಿ. ಪೂವಯ್ಯ ಅವರಿಗೆ ಗ್ರಾಮಸ್ಥರು ಕಾಡಾನೆ ಹಾವಳಿ ತಡೆಗೆ ಕ್ರಮ ಕೈಗೊಳ್ಳಲು ಕಾಡಾನೆಗಳನ್ನು ಸೆರೆ ಹಿಡಿಯಲು ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭ ನರಿಯಂದಡ, ಕೋಕೇರಿ, ಚೇಲಾವರ, ಮರಂದೋಡ, ಕರಡ, ಅರಪಟ್ಟು, ಪೊದವಾಡ ಗ್ರಾಮಸ್ಥರು, ೨ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಗ್ರಾಮ ಪಂಚಾಯಿತಿ ಸದಸ್ಯರು, ೭ ಗ್ರಾಮಗಳಿಗೆ ಒಳಪಟ್ಟ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ವೀರಾಜಪೇಟೆ ಆರ್‌ಎಫ್‌ಓ ಕಳ್ಳಿರ ದೇವಯ್ಯ, ಡಿಆರ್‌ಎಫ್‌ಓ, ಸಂಜಿತ್, ಅನಿಲ್ ಹಾಜರಿದ್ದರು. ವೃತ್ತನಿರೀಕ್ಷಕ ಅನೂಪ್ ಮಾದಪ್ಪ ನಿರ್ದೇಶನ ದಲ್ಲಿ ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು. - ಅಶ್ರಫ್

ಕಂದಾಯ ಇಲಾಖೆ ವಿರುದ್ಧ ಹೋರಾಟ
ಸೋಮವಾರಪೇಟೆ ಜು. ೧೦ : ‘ತಾಲೂಕು ಕಚೇರಿಯಲ್ಲಿ ರೈತರಿಗೆ ಸಂಬAಧಿಸಿದ ಕಡತಗಳು ವಿಲೇವಾರಿಯಾಗುತ್ತಿಲ್ಲ. ಹಣ ನೀಡಿದವರ ಕಡತಗಳು ಮುಂದಕ್ಕೆ ಹೋಗುತ್ತಿವೆ. ಕಚೇರಿಯ ಮುಂಭಾಗ ಒಂದು ಕಡತ ವಿಲೇವಾರಿಗೆ ಇಂತಿಷ್ಟು ಲಂಚ ಎಂದು ಫಲಕ ಹಾಕಿ;
(ಮೊದಲ ಪುಟದಿಂದ) ನಾವುಗಳೂ ಅಷ್ಟೇ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ತೀವಿ’ ಹೀಗೆಂದು ರೈತರು ಆಕ್ರೋಶಭರಿತರಾಗಿ ತಾಲೂಕು ಕಂದಾಯ ಇಲಾಖೆಯ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡರು.
ರೈತ ಸಂಘದ ಆಶ್ರಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸಹಯೋಗದೊಂದಿಗೆ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ನೂರಾರು ರೈತರು ತಮ್ಮ ಆಕ್ರೋಶದ ಕಟ್ಟೆಯನ್ನು ಒಡೆದು ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಮುಗಿಬಿದ್ದರು.
ತಾಲೂಕು ಕಚೇರಿಯಲ್ಲಿ ರೈತರ ಜಾಗದ ದುರಸ್ತಿ, ಪೋಡಿ, ಆರ್‌ಟಿಸಿ ಸಮಸ್ಯೆ, ಜಾಗದ ಆಕಾರಬಂಧು ಸೇರಿದಂತೆ ಇನ್ನಿತರ ಕೆಲಸ ಕಾರ್ಯಗಳು ನಿರೀಕ್ಷಿತ ಸಮಯದಲ್ಲಿ ಆಗುತ್ತಿಲ್ಲ. ಕೆಲವೊಂದು ಕಡತಗಳೇ ಕಚೇರಿಯಿಂದ ಕಾಣೆಯಾಗುತ್ತಿವೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಹತ್ತಾರು ವರ್ಷಗಳಿಂದ ಇಲ್ಲೇ ಠಿಕಾಣಿ ಹ�