ಗೋಣಿಕೊಪ್ಪ ವರದಿ, ಜು. ೧೧: ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ ವತಿಯಿಂದ ಬೆಂಗಳೂರು ಸಾಯಿ ಶೂಟಿಂಗ್ ರೇಂಜ್ನಲ್ಲಿ ಆಯೋಜಿಸಿದ್ದ ಏರ್ರೈಫಲ್ ಮತ್ತು ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಗೋಣಿಕೊಪ್ಪ ಅಶ್ವಿನಿ ಸ್ಪೋರ್ಟ್ಸ್ ಫೌಡೇಷನ್ ಮತ್ತು ಕಾಲ್ಸ್ ಶಾಲೆಗೆ ೨೧ ಪದಕಗಳು ಲಭಿಸಿವೆ. ೯ ಶೂರ್ಸ್ ಪ್ರೀ ನ್ಯಾಷನಲ್ಸ್ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಉತ್ತಮ ಪ್ರದರ್ಶನ ನೀಡಿದ ಆಂಚಲ್ ಗಂಗಾ, ವಿಹಾ ಪೊನ್ನಮ್ಮ, ಅಕ್ಷಯ ಪ್ರಸಾದ್, ಬಿದ್ದಪ್ಪ, ಹಿತೇಶ್ ರೆಡ್ಡಿ, ಎಸ್. ಗಿರಿವರ್, ಕ್ರಿಸ್ ಗಣಪತಿ, ಕೋಣೇರಿರ ಎನ್. ಶಾಷ್ಯ, ಕುಶಾಲ್ ಮಹೇಶ್ ಪ್ರೀ ನ್ಯಾಷನಲ್ಸ್ಗೆ ಪ್ರವೇಶ ಪಡೆದುಕೊಂಡರು.