ಚೆಯ್ಯAಡಾಣೆ, ಜು ೧೦: ಸ್ಥಳೀಯ ನರಿಯಂದಡ ಕೇಂದ್ರ ಪ್ರೌಢ ಶಾಲೆಯ ೨೦೨೩-೨೪ ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮಕ್ಕೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಚೇನಂಡ ಗಿರೀಶ್ ಪೂಣಚ್ಚ ಚಾಲನೆ ನೀಡಿದರು.
ಶಾಲಾ ಪ್ರಬಾರ ಮುಖ್ಯ ಶಿಕ್ಷಕಿ ಬಿ.ಎಸ್. ಭವ್ಯ ಸಂಘದ ಪದಾಧಿಕಾರಿ ಗಳಿಗೆ ಪ್ರಮಾಣ ವಚನ ಬೋಧಿಸಿದರು. ವಿದ್ಯಾರ್ಥಿ ಸಂಘದ ವರದಿಯನ್ನು ೧೦ ನೇ ತರಗತಿ ವಿದ್ಯಾರ್ಥಿನಿ ಯಾನ ಎಂ.ಬಿ. ಮಂಡಿಸಿದರು. ಚೇನಂಡ ಗಿರೀಶ್ ಪೂಣಚ್ಚ ನಾಯಕತ್ವದ ಬಗ್ಗೆ ಮಾತನಾಡಿ, ಪದಾಧಿಕಾರಿಗಳ ಕರ್ತವ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಸಂದರ್ಭ ಶಾಲಾ ಶಿಕ್ಷಕ ವೃಂದ, ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಿಕ್ಷಕ ರವೀಂದ್ರನಾಥ್, ನಿರೂಪಿಸಿ, ಎಚ್.ಕೆ. ರಾಜಕುಮಾರ್ ಸ್ವಾಗತಿಸಿದರು. ಕೆ.ಡಿ. ಹೇಮಮಾಲಿನಿ ವಂದಿಸಿದರು.