ಸಿದ್ದಾಪುರ, ಜು. ೧೧: ವೀರಾಜ ಪೇಟೆ ತಾಲೂಕಿನ ವಿ. ಬಾಡಗದ ಸರ್ಕಾರಿ ಶಾಲೆಯಲ್ಲಿ ಕಳೆದ ಸುಮಾರು ವರ್ಷಗಳಿಂದ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಇದೀಗ ಚೆನ್ನಯ್ಯನ ಕೋಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆ ಗೊಂಡಿರುವ ಮುಖ್ಯ ಶಿಕ್ಷಕಿ ರಾಜಮ್ಮ ಅವರಿಗೆ ವಿ. ಬಾಡಗ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಸಮಾರಂಭದಲ್ಲಿ ರಾಜಮ್ಮ ಅವರ ಉತ್ತಮ ಸೇವೆಯ ಕುರಿತು ಸ್ಥಳೀಯರು ಶ್ಲಾಘಿಸಿದರು. ಶಾಲಾ ಹಿರಿಯ ವಿದ್ಯಾರ್ಥಿಗಳ ಸಂಘ, ಶಿಕ್ಷಕರು ಹಾಗೂ ವಿದ್ಯಾರ್ಥಿ ಗಳು ಹಾಜರಿದ್ದರು. ಈ ಸಂದರ್ಭ ಮುಖ್ಯ ಶಿಕ್ಷಕಿಯಾದ ರಾಜಮ್ಮ ಅವರು ತಮ್ಮ ನೆನಪಿಗಾಗಿ ಪುಸ್ತಕಗಳನ್ನು ಇಡಲು ಕಪಾಟನ್ನು ಕೊಡುಗೆಯಾಗಿ ನೀಡಿದರು.