(ವರದಿ : ಪ್ರಜ್ಞಾ ಜಿ.ಆರ್.)
ಮಡಿಕೇರಿ, ಜು. ೧೧ : ಉಚಿತ ದಾಖಲಾತಿ, ಉಚಿತ ಪುಸ್ತಕ, ಬಿಸಿ ಊಟ ಹಾಗೂ ಪಾಠ-ಪ್ರವಚನ - ಇದು ಸರಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ನೀಡುವ ಸೌಲಭ್ಯಗಳು. ಸರಕಾರಿ ಶಾಲೆಗಳಲ್ಲಿ ಓದು-ಬರಹಕ್ಕೆ ಯಾವದೇ ತೊಂದರೆಯಾಗದಿದ್ದರೂ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡುವದು ಬಹಳ ಕಡಿಮೆ ಎಂದೇ ಹೇಳಬಹುದು. ಕೊಡಗಿನಲ್ಲಿಯ ಶಾಲೆಗಳಲ್ಲಿ ಸಿಬ್ಬಂದಿ ಬಿಕ್ಕಟ್ಟಿನ ನಡುವೆ ಮಕ್ಕಳಿಗೆ ಶಿಕ್ಷಣ ಪಾಲನೆಯಾಗುತ್ತಿದೆ. ಇಂತಹ ಮಕ್ಕಳಿಗೆ, ಶೈಕ್ಷಣಿಕ ಹೊರತುಪಡಿಸಿ ಇನ್ನೂ ಹಲವು ವೃತ್ತಿ ಆಯ್ಕೆಗಳು ಲಭ್ಯವಿವೆ ಎಂದು ಟಾಟಾ ಕಾಫಿ ತನ್ನ ಸಿ.ಎಸ್.ಆರ್. ಉಪಕ್ರಮದ ಮೂಲಕ ಸಾಬೀತು ಪಡಿಸಲು ಹೊರಟಿದೆ.
ಸುಮಾರು ೧೦೦ಕ್ಕೂ ಹೆಚ್ಚು ಮಕ್ಕಳು, ಅವರ ಮುಂದೆ ಹಿಂದೆAದೂ ಅವರು ನೋಡದ ಸಂಗೀತದ ವಿದ್ಯುನ್ಮಾನ ಉಪಕರಣಗಳು, ಇನ್ನು ಅವರೆಲ್ಲ ಹಿಂದೆAದೂ ಆಲಿಸದ ಎಲೆಕ್ಟಾçನಿಕ್ ಮ್ಯೂಝಿಕ್ - ಈ ಚಿತ್ರ ಕಂಡುಬAದಿದ್ದು ಬಸವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ.
ಟಾಟಾ ಕಾಫಿ ವತಿಯಿಂದ ಕೊಡಗಿನ ಹಲವು ಸರಕಾರಿ ಶಾಲಾ ಇನ್ನಿತರ ಮಕ್ಕಳಿಗೆ ಇನ್ನಿತರ ಅನೇಕ ಕಾರ್ಯಾಗಾರಗಳು ಮುಂದಿನ ಎರಡು ತಿಂಗಳುಗಳಲ್ಲಿ ಹಮ್ಮಿಕೊಳ್ಳಲಾಗುವದು. ಈ ಹಲವು ಕಾರ್ಯಾಗಾರಗಳಲ್ಲಿ ‘ಮ್ಯೂಝಿಕ್ ವರ್ಕ್ಶಾಪ್' ಕೂಡ ಒಂದಾಗಿದೆ. ಈ ಕಾರ್ಯಾಗಾರವನ್ನು ಅಂತರರಾಷ್ಟಿçÃಯ ಎಲೆಕ್ಟಾçನಿಕ್ ಸಂಗೀತ ನಿರ್ಮಾಪಕ ಲುಬೊಮಿರ್ ಜಬ್ಬಂಡ ನೆರವೇರಿಸಲಿದ್ದಾರೆ. ಕೊಡಗಿನ ಮೂಲದವರಾದ ಲುಬೊಮಿರ್, ಉಕ್ರೇನ್ ದೇಶದಲ್ಲಿ ನೆಲೆಸಿರುತ್ತಾರೆ. ಟಾಟಾ ಕಾಫಿಯ ಈ ವಿಭಿನ್ನ ಕಾರ್ಯಾಗಾರದಲ್ಲಿ ಲುಬೊಮಿರ್ ಸಾಥ್ ನೀಡಿದ್ದು, ಸರಕಾರಿ ಶಾಲಾ ಮಕ್ಕಳಲ್ಲಿ ಸಂಗೀತ ನಿರ್ಮಾಪಣೆಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ಇತ್ತೀಚೆಗೆ ಮೊರಾರ್ಜಿ ದೇಸಾಯಿ ಶಾಲೆ, ವಾಲ್ಮೀಕಿ ಆಶ್ರಮ ಶಾಲೆ, ರಂಗಸಮುದ್ರ ಹಾಗೂ ಮಾದಾಪಟ್ಟಣದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ‘ಮ್ಯೂಝಿಕ್ ವರ್ಕ್ಶಾಪ್' ಆಯೋಜಿ ಸಲಾಗಿತ್ತು. ಎಲೆಕ್ಟಾçನಿಕ್ ಕೀಬೋರ್ಡ್, ಎಲೆಕ್ಟಾçನಿಕ್ ಲಾಂಚ್‌ಪ್ಯಾಡ್ ಕಂಟ್ರೋಲರ್ ಹಾಗೂ ಅಕೌಸ್ಟಿಕ್ ಗಿಟಾರ್ ನಂತಹ ವಾದ್ಯ ಪರಿಕರಗಳ ಉಪಯುಕ್ತತೆಯನ್ನು ಮಕ್ಕಳಿಗೆ ತಿಳಿಸಿಕೊಡಲಾಯಿತು. ಜೊತೆಗೆ ಸರದಿಯಲ್ಲಿ ಈ ಪುಟ್ಟ ಮಕ್ಕಳಿಗೆ ಈ ಪರಿಕರಣಗಳನ್ನು ಬಳಸಲೂ ಹೇಳಿಕೊಟ್ಟರು. ಸಂಗೀತ ಸಂಯೋಜನೆಯ ಕುರಿತು ಸುಲಲಿತ ವಾಗಿ ಮಕ್ಕಳಿಗೆ ತಿಳಿಸಿದರಲ್ಲದೆ, ಲುಬೊಮಿರ್ ತಮ್ಮ ‘ಬೀಟ್ ಹೈರಾರ್ಕಿ' ಸಂಗೀತ ಸಂಯೋಜನಾ ಕಂಪೆನಿಯಿAದ ನಿರ್ಮಿಸಿರುವ ಕೆಲವು ಕನ್ನಡ ರ‍್ಯಾಪ್ ಮ್ಯೂಝಿಕ್ ವೀಡಿಯೋಗಳನ್ನೂ ಮಕ್ಕಳ ಮುಂದಿಟ್ಟರು.
ಇವರು ಕಾರ್ಯಾಗಾರ ಪ್ರಾರಂಭಿಸಿದ ಕಲವೇ ಕ್ಷಣದಲ್ಲಿ ಮಕ್ಕಳಲ್ಲಿ ಸಂಗೀತದೆಡೆಗಿನ ಕುತೂಹಲ ಗರಿಗೆದರಿತು.
(ಮೊದಲ ಪುಟದಿಂದ) ಬಲು ಉತ್ಸಾಹದಿಂದ ಈ ಮಕ್ಕಳು ಸಂಗೀತ ಉಪಕರಣಗಳನ್ನು ತಾವೇ ಬಳಸಲು ಮುಂದಾದರು. ಲುಬೊಮಿರ್‌ನಿಂದ ಮಾರ್ಗದರ್ಶನ ಪಡೆದು, ಮಕ್ಕಳು ಸ್ವತಃ ತಾವೇ ಸಂಗೀತ ರಚನೆಯಲ್ಲಿ ಭಾಗವಹಿಸಿದರು. ಸಂಗೀತ ನಿರ್ಮಾಪಣೆಯ ‘ಸಾಫ್ಟ್ವೇರ್' ಬಗ್ಗೆ ಮಾಹಿತಿ ಪಡೆದುಕೊಂಡರು. ತಮ್ಮ ಸ್ನೇಹಿತರೊಡನೆ ಕೂಡಿ ತಾವೇ ಒಂದು ‘ಮ್ಯೂಝಿಕ್ ಬ್ಯಾಂಡ್' ಪ್ರಾರಂಭಿಸುವ ಆಶಯವನ್ನೂ ಹೊರಹಾಕಿದರು. ಎಲೆಕ್ಟಾçನಿಕ್ ಮ್ಯೂಝಿಕ್ ಏನು ಎಂದು ಅರಿಯದ ಅನೇಕ ಮಕ್ಕಳು, ಮುಂದೆ ಸಂಗೀತ ನಿರ್ಮಾಪಕರಾಗುವ ಹಂಬಲ ವ್ಯಕ್ತಪಡಿಸಿದರು.