ವೀರಾಜಪೇಟೆ, ಜು. ೧೦: ವೀರಾಜಪೇಟೆ ವಲಯದ ಏಳು ಕ್ಲಸ್ಟರ್‌ಗಳ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೆ ಆಡಳಿತಾತ್ಮಕ ವಿಷಯದ ಕುರಿತು ತರಬೇತಿ ಶಿಬಿರ ವೀರಾಜಪೇಟೆ ಸ.ಮಾ.ಪ್ರಾ. ಶಾಲೆಯಲ್ಲಿ ನಡೆಯಿತು. ತಾಲೂಕಿನ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ವನಜಾಕ್ಷಿ ಶಿಬಿರ ಉದ್ಘಾಟಿಸಿ ಮಾತನಾಡಿ ಮುಖ್ಯ ಶಿಕ್ಷಕರು ಶಾಲಾ ದಾಖಲೆಗಳ ನಿರ್ವಹಣೆಯ ಕುರಿತು ಸಮರ್ಪಕವಾಗಿ ಅರ್ಥೆÊಸಿಕೊಂಡು ಉತ್ತಮ ಶಾಲಾ ವಾತಾವರಣಕ್ಕೆ ಆದ್ಯತೆ ನೀಡುವ ಮೂಲಕ ಶೈಕ್ಷಣಿಕ ಹಾಗೂ ಶಾಲಾ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕೆಂದು ಸಲಹೆ ನೀಡಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗೀತಾಂಜಲಿ ಶಿಬಿರವನ್ನುದ್ದೇಶಿಸಿ ಮಾತನಾಡಿ, ಶಾಲಾ ಅಭಿವೃದ್ಧಿ ಯೋಜನೆಯ ನಿರ್ವಹಣೆಯೊಂದಿಗೆ ದೂರದೃಷ್ಟಿಯ ಕ್ರಿಯಾಯೋಜನೆಗಳನ್ನು ರೂಪಿಸಿ ಶಾಲಾ ಅಭಿವೃದ್ಧಿಯ ಉನ್ನತೀಕರಣಕ್ಕೆ ಮುಂದಾಗಬೇಕೆAದು ಸಲಹೆ ನೀಡಿದರು. ಈ ಸಂದರ್ಭ ಸಂಪನ್ಮೂಲ ವ್ಯಕ್ತಿಗಳಾದ ಬಿಆರ್.ಪಿ. ವಾಮನ, ಪುಷ್ಪ, ಕೆ.ಆರ್.ಪಿ ಸೀತಾ ಹೆಚ್.ಎಸ್, ಕಛೇರಿಯ ಲೆಕ್ಕ ಪತ್ರ ಸಹಾಯಕಿ ಸುದಿನ ಎಂ.ಎನ್, ಪ್ರಮುಖರಾದ ಪದ್ಮ ಹೆಚ್.ಎನ್, ಸುಬ್ರಮಣಿ, ಅನ್ನಮ್ಮ ಸೇರಿದಂತೆ ಏಳು ಕ್ಲಸ್ಟರ್‌ಗಳ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರುಗಳು ಹಾಜರಿದ್ದರು.