ಮಡಿಕೇರಿ, ಜು. ೧೦: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಐಮುಡಿಯಂಡ ರಾಣಿ ಮಾಚಯ್ಯ ಅವರು ಭಾಗವಹಿಸಿ ಮಾತನಾಡಿ, ಮಕ್ಕಳು ತಮ್ಮಲ್ಲಿ ಇರುವಂತಹ ಕಲೆಯನ್ನು ಯಾವುದೇ ಕಷ್ಟ ಕಾಲದಲ್ಲೂ ಬಿಡಬಾರದು. ಹಾಗಾದಾಗ ಮಾತ್ರ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳು ಗುರುಗಳಿಗೆ ಗೌರವ ಕೊಡುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಡಾ. ಪ್ರಕಾಶ್ ಎಂ. ಎನ್ ಮಾತನಾಡಿ ಪ್ರಶಸ್ತಿಗಾಗಿ ಯಾರೂ ಕೆಲಸ ಮಾಡಬಾರದು. ತಾವು ಮಾಡುವ ಕಾರ್ಯಕ್ಕೆ ಮುಂದೊAದು ದಿನ ಫಲ ಸಿಗುತ್ತದೆ. ಮುಂದೆ ನಿಮ್ಮಲ್ಲಿರುವ ಕಲೆಯನ್ನು ಸಮಾಜ ಗುರುತಿಸುತ್ತದೆ. ಹಾಗಾಗಿ ಮಾಡುವ ಕೆಲಸಗಳನ್ನು ಸದ್ದಿಲ್ಲದೆ ಶ್ರದ್ಧೆಯಿಂದ ಮಾಡಬೇಕು ಎಂದು ಸಲಹೆ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ನಿರ್ಮಲ ಕೆ. ಡಿ ಮಾತನಾಡಿ ನಮ್ಮ ಕಾಲೇಜು ಮೌಲ್ಯಾಧಾರಿತ ಮತ್ತು ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ದೃಷ್ಟಿಯೊಂದಿಗೆ ಸ್ಫೂರ್ತಿ, ಸೂಚನೆ, ಆವಿಷ್ಕಾರ ಎಂಬ ಧ್ಯೇಯೋದ್ದೇಶಕ್ಕೆ ಹೊಂದಿಕೊAಡು ಇಂದು ಕಾರ್ಯ ನಿರ್ವಹಿಸುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಪದ್ಮಶ್ರೀ ರಾಣಿ ಮಾಚಯ್ಯ, ಡಾ. ಎಂ.ಎನ್. ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ವಾರ್ಷಿಕ ಸಂಚಿಕೆಯಾದ ‘ಅನಿಕೇತನ’ವನ್ನು ಬಿಡುಗಡೆ ಮಾಡಲಾಯಿತು. ಈ ಸಂಚಿಕೆಯ ಉಪ ಸಂಪಾದಕರಾದ ಡಾ. ರಾಧಿಕಾ ಮಾತನಾಡಿ ಕಾಲೇಜಿನ ವಿದ್ಯಾಭ್ಯಾಸ ಮುಗಿಸಿದ ನಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಕಿವಿ ಮಾತು ಹೇಳಿದರು. ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಆಟೋಟ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ವಾರ್ಷಿಕ ವರದಿಯನ್ನು ಪ್ರೊ. ಎವರೆಸ್ಟ್ ರೋಡ್ರಿಗಸ್ ಮಂಡಿಸಿದರು. ದೀಪಿಕಾ, ಸುನೇಹಾ, ಚಹನ ಮತ್ತು ಆಲಿಷ ನಿರೂಪಿಸಿದರು. ವಾಣಿಜ್ಯ ಶಾಸ್ತç ವಿಭಾಗದ ಮುಖ್ಯಸ್ಥರಾದ ವಸಂತ ಕುಮಾರಿ ಸ್ವಾಗತಿಸಿದರು. ವಾಣಿಜ್ಯ ಶಾಸ್ತç ವಿಭಾಗದ ಉಪನ್ಯಾಸಕ ಡಾ. ಪ್ರಕಾಶ್ ಎಂ. ಎನ್ ವಂದಿಸಿದರು.