ಪಾಲಿಬೆಟ್ಟ, ಜು. ೯: ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ಪಾಲಿಬೆಟ್ಟ ಲಯನ್ಸ್ ಕ್ಲಬ್ ಸೇವಾ ಸಾಧನೆಯೊಂದಿಗೆ ಮಾದರಿಯಾಗಿದೆ ಎಂದು ಮೊದಲನೇ ಜಿಲ್ಲಾಧ್ಯಕ್ಷರು ಲಯನ್ಸ್ ಸಂಸ್ಥೆಯ ಬಿ.ಎಂ. ಭಾರತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಾಲಿಬೆಟ್ಟ ಲಯನ್ಸ್ ಕ್ಲಬ್ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸೇವೆ ಮಾಡುವುದರಿಂದ ನಮಗೆ ತೃಪ್ತಿ ದೊರೆಯುತ್ತದೆ. ಧೀನದಲಿತರ ಮತ್ತು ಬಡವರ ಮುಖದಲ್ಲಿ ನಗು ತರುವುದೇ ನಮ್ಮ ಕ್ಲಬ್ನ ಉದ್ದೇಶ. ಸೇವಾ ಮನೋಭಾವದ ಮೂಲಕ ಸಮಾಜಸೇವೆಯಲ್ಲಿ ತೊಡಗಿಸಿ ಕೊಂಡಿದ್ದು ಸಂಕಷ್ಟದಲ್ಲಿರುವವರಿಗೆ ನೆರವಾಗುತ್ತಿದೆ. ಪಾಲಿಬೆಟ್ಟ ಲಯನ್ಸ್ ಕ್ಲಬ್ ೧೯೭೫ರಲ್ಲಿ ಪ್ರಾರಂಭವಾಗಿ ಇಂದಿಗೂ ಉತ್ತಮ ಸೇವೆ ಸಲ್ಲಿಸುವ ಮೂಲಕ ಮಾದರಿಯಾಗಿದೆ ಎಂದರು. ಪಾಲಿಬೆಟ್ಟ ಲಯನ್ಸ್ ಕ್ಲಬ್ನ ನೂತನ ಅಧ್ಯಕ್ಷ ಅನಂತ್ ರಾವ್ ಪದಗ್ರಹಣ ಸ್ವೀಕರಿಸಿ ಮಾತನಾಡಿ, ಹಿಂದಿನಿAದಲೂ ಪಾಲಿಬೆಟ್ಟ ಲಯನ್ಸ್ ಕ್ಲಬ್ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದು ಮುಂದೆಯೂ ಆರೋಗ್ಯ, ಶಿಕ್ಷಣ, ಸಂಕಷ್ಟದಲ್ಲಿರುವವರಿಗೆ ನೆರವು, ರೈತರಿಗೆ ಪ್ರಯೋಜನಕಾರಿಯಾಗುವ ನಿಟ್ಟಿನಲ್ಲಿ ಶಿಬಿರಗಳನ್ನು ಆಯೋಜಿಸ ಲಾಗುವುದು ಎಂದು ಹೇಳಿದರು.
ನಿರ್ಗಮಿತ ಅಧ್ಯಕ್ಷ ಡೋಮಿ ಪಿ ರೊಸಾರಿಯೊ ಮಾತನಾಡಿ, ಸೇವಾ ಅವಧಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ ರೈತರಿಗೆ ಪ್ರಯೋಜನಕಾರಿಯಾಗುವ ನಿಟ್ಟಿನಲ್ಲಿ ಉಚಿತ ಕಣ್ಣಿನ ತಪಾಸಣೆ, ಮಣ್ಣು ಪರೀಕ್ಷಾ ಶಿಬಿರ, ಕಾಫಿ, ಕಾಳುಮೆಣಸು ಬೆಳೆಯುವ ಬಗ್ಗೆ ಜಾಗೃತಿ ಸೇರಿದಂತೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಮಾಡಲಾಗಿದೆ ಎಂದರು.
ಈ ಸಂದರ್ಭ ಲಯನ್ಸ್ ಕ್ಲಬ್ ಕಾರ್ಯದರ್ಶಿ ಸದಾ ಕುಶಾಲಪ್ಪ, ಖಜಾಂಜಿ ಡಾ. ಭವಿಷ್ಯ ಕುಮಾರ್, ಕನ್ನಿಕಾ ಅಯ್ಯಪ್ಪ, ಡಾ. ದೇವಗಿರಿ, ಕೆ.ರಾಣಾ ಮುತ್ತಪ್ಪ, ಪ್ರಮುಖರಾದ ಕೆ.ಕೆ. ಅಯ್ಯಪ್ಪ, ಮೀರಾ ಸುಬ್ರಮಣಿ, ಬಿ.ಪಿ. ಗಣಪತಿ, ಡಾ ಎ. ಸಿ. ಗಣಪತಿ, ಎಂ.ಎನ್. ಅಚ್ಚಯ್ಯ ಸೇರಿದಂತೆ ಮತ್ತಿತರರು ಇದ್ದರು.