ಮಡಿಕೇರಿ, ಜು. ೯: ಎನ್ಫೋರ್ಸ್ಮೆಂಟ್ ಡೈರೆಕ್ಟರೇಟ್ (ಜಾರಿ ನಿರ್ದೇಶನಾಲಯ)ನ ಡೆಪ್ಯುಟಿ ಡೈರೆಕ್ಟರ್ ಸ್ಥಾನಕ್ಕೆ ಇತ್ತೀಚೆಗೆ ಆಯ್ಕೆಗೊಂಡಿದ್ದ ಕೊಡಗಿನವರಾದ ಗೋಣಿಕೊಪ್ಪಲುವಿನ ಡಾ|| ಕೊಟ್ಟಂಗಡ ಡಿ. ಪೆಮ್ಮಯ್ಯ ಅವರು ಇದೀಗ ದೆಹಲಿಯಲ್ಲಿ ತರಬೇತಿಯ ಬಳಿಕ ಉತ್ತರ ಪ್ರದೇಶಕ್ಕೆ (ಲಕ್ನೋ) ನಿಯುಕ್ತಿಗೊಂಡಿದ್ದಾರೆ. ಗುಜರಾತ್ನಲ್ಲಿ ಐ.ಆರ್.ಎಸ್. ಅಧಿಕಾರಿಯಾಗಿದ್ದು, ಇನ್ಕಮ್ ಟ್ಯಾಕ್ಸ್ನ ಡೆಪ್ಯುಟಿ ಡೈರೆಕ್ಟರ್ ಆಗಿದ್ದ ಡಾ|| ಪೆಮ್ಮಯ್ಯ ಅವರು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ನೇಮಕಕ್ಕೆ ಸಂಬAಧಿಸಿದAತೆ ನಡೆದಿದ್ದ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿದ್ದ ದೇಶದ ೧೭ ಅಧಿಕಾರಿಗಳ ಪೈಕಿ ಓರ್ವರಾಗಿದ್ದರು. ಕರ್ನಾಟಕದಿಂದ ಇವರೊಬ್ಬರೇ ಇ.ಡಿ.ಗೆ ಆಯ್ಕೆಯಾಗಿದ್ದು ಗಮನ ಸೆಳೆದಿದ್ದರು. ಇದೀಗ ಈ ಕುರಿತ ತರಬೇತಿಯ ಬಳಿಕ ಇವರನ್ನು ಉತ್ತರ ಪ್ರದೇಶದ ಜಾರಿ ನಿರ್ದೇಶನಾಲಯಕ್ಕೆ ನಿಯುಕ್ತಿಗೊಳಿಸಲಾಗಿದೆ. ಇವರು ಗೋಣಿಕೊಪ್ಪಲುವಿನವರಾದ ಕೊಟ್ಟಂಗಡ ವಿಜು ದೇವಯ್ಯ ಅವರ ಪುತ್ರ.