ಮಡಿಕೇರಿ, ಜು. ೯: ಕೊಡಗು ಜಿಲ್ಲೆಯ ಜವಾಹರ ನವೋದಯ ವಿದ್ಯಾಲಯದ ೨೦೨೩ನೇ ಸಾಲಿನ ಸಿಬಿಎಸ್‌ಇ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ೧೦ ಮತ್ತು ೧೨ನೇ ತರಗತಿಗಳಲ್ಲಿ ವಿದ್ಯಾರ್ಥಿಗಳು ೧೦೦ಕ್ಕೆ ೧೦೦ ಉತ್ತೀರ್ಣರಾಗಿದ್ದಾರೆ ಎಂದು ಗಾಳಿಬೀಡು ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲ ಪಂಕಜಾಕ್ಷನ್ ಅವರು ತಿಳಿಸಿದ್ದಾರೆ. ಹನ್ನೆರಡನೇ ತರಗತಿಯಲ್ಲಿ ೭೦ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲರೂ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಎಸ್.ಯು. ಸಾತ್ವಿಕ ಶೇ. ೯೪.೪ (ಪ್ರಥಮ), ಎಸ್.ಪಿ. ವೈಶಿಣಿ ಶೇ. ೯೦.೮ (ದ್ವಿತೀಯ), ಬಿ.ಹೆಚ್. ಸಾಕ್ಷಿ ಶೇ. ೯೦ (ತೃತೀಯ) ಸ್ಥಾನ ಪಡೆದಿದ್ದಾರೆ. ಹಾಗೆಯೇ ವಾಣಿಜ್ಯ ವಿಭಾಗದಲ್ಲಿ ಬಿ.ಜಿ. ದುರ್ಗೇಶ್ ಶೇ. ೯೫.೪ (ಪ್ರಥಮ), ಹೆಚ್.ಪಿ. ರಕ್ಷಯ ಶೇ. ೯೪ (ದ್ವಿತೀಯ), ಎಂ. ಕಾವೇರಿ ಶೇ. ೯೦ (ತೃತೀಯ) ಸ್ಥಾನ ಪಡೆದಿದ್ದಾರೆ.

ಹತ್ತನೇ ತರಗತಿಯಲ್ಲಿ ೭೭ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ. ಇವರಲ್ಲಿ ೬೮ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, ೩೯ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕೆ.ಜೆ. ನಿಧಿ ಶೇ. ೯೭ (ಪ್ರಥಮ), ಎಸ್. ಪ್ರತೀಕ್ಷಾ ಶೇ. ೯೪.೮ (ದ್ವಿತೀಯ) ಎಂ.ಎ. ರಿಶಿಕಾ ಶೇ. ೯೨.೮ (ತೃತೀಯ) ಸ್ಥಾನ ಪಡೆದಿದ್ದಾರೆ.

೧೨ ನೇ ತರಗತಿ ವಾಣಿಜ್ಯ ವಿಭಾಗದ ಶೀಘ್ರಲಿಪಿ ವಿಷಯದಲ್ಲಿ ೬ ವಿದ್ಯಾರ್ಥಿಗಳು ೧೦೦ ಕ್ಕೆ ೧೦೦ ಅಂಕ ಪಡೆದು ಗಣನೀಯ ಸಾಧನೆ ಮಾಡಿದ್ದಾರೆ. ಅಲ್ಲದೇ ವಿಷಯ ಸರಾಸರಿಯಲ್ಲಿ ವಿದ್ಯಾಲಯವು ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ.